AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್ ಓಡಿಸುತ್ತಿರುವಾಗ ಏಕಾ ಏಕಿ ಪತಿಯ ಮೇಲೆ ಆ್ಯಸಿಡ್ ಎರಚಿದ ಪತ್ನಿ

ಪತಿ ಬೈಕ್ ಓಡಿಸುತ್ತಿರುವಾಗ ಮಹಿಳೆಯೊಬ್ಬಳು ಪತಿಯ ಮೇಲೆ ಏಕಾ ಏಕಿ ಆ್ಯಸಿಡ್(Acid) ಎರಚಿ ದಾಳಿ ನಡೆಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಗಂಡನ ಜತೆಯಲ್ಲಿ ಬೈಕ್​ ಹಿಂಬದಿ ಕುಳಿತಿದ್ದರು. ಆದರೆ ಏಕಾ ಏಕಿ ಪತಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಶಿಬಾಜಿ ದೇಬ್ಬರ್ಮಾ ಎಂದು ಗುರುತಿಸಿರುವ ವ್ಯಕ್ತಿ ವೃತ್ತಿಯಲ್ಲಿ ರೈತನಾಗಿದ್ದರು. ವ್ಯಕ್ತಿಯ ಮುಖ ಮತ್ತು ಕುತ್ತಿಗೆಯಲ್ಲಿ ಸುಟ್ಟ ಗಾಯಗಳೊಂದಿಗೆ ಜಿಬಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೈಕ್ ಓಡಿಸುತ್ತಿರುವಾಗ ಏಕಾ ಏಕಿ ಪತಿಯ ಮೇಲೆ ಆ್ಯಸಿಡ್ ಎರಚಿದ ಪತ್ನಿ
ಆ್ಯಸಿಡ್ ದಾಳಿ
ನಯನಾ ರಾಜೀವ್
|

Updated on: Aug 21, 2025 | 2:26 PM

Share

ತ್ರಿಪುರಾ, ಆಗಸ್ಟ್ 21: ಪತಿ ಬೈಕ್ ಓಡಿಸುತ್ತಿರುವಾಗ ಮಹಿಳೆಯೊಬ್ಬಳು ಪತಿಯ ಮೇಲೆ ಏಕಾ ಏಕಿ ಆ್ಯಸಿಡ್(Acid) ಎರಚಿ ದಾಳಿ ನಡೆಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಗಂಡನ ಜತೆಯಲ್ಲಿ ಬೈಕ್​ ಹಿಂಬದಿ ಕುಳಿತಿದ್ದರು. ಆದರೆ ಏಕಾ ಏಕಿ ಪತಿ ಮೇಲೆ ಆ್ಯಸಿಡ್ ಎರಚಿದ್ದಾರೆ.

ಶಿಬಾಜಿ ದೇಬ್ಬರ್ಮಾ ಎಂದು ಗುರುತಿಸಿರುವ ವ್ಯಕ್ತಿ ವೃತ್ತಿಯಲ್ಲಿ ರೈತನಾಗಿದ್ದರು. ವ್ಯಕ್ತಿಯ ಮುಖ ಮತ್ತು ಕುತ್ತಿಗೆಯಲ್ಲಿ ಸುಟ್ಟ ಗಾಯಗಳೊಂದಿಗೆ ಜಿಬಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಶಿಬಾಜಿ ದೇಬ್ಬರ್ಮಾ, ಅವರ ಪತ್ನಿ ಸುಮಿತ್ರಾ ದೇಬ್ಬರ್ಮಾ ಅವರು ಬುಧವಾರ ತಮ್ಮ ಬೈಕ್‌ನಲ್ಲಿ ಚಾಂದ್‌ಪುರದ ಕಡೆಗೆ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ, ಸುಮಿತ್ರಾ ತನ್ನ ಪತಿಯ ಮೇಲೆ ಆಸಿಡ್ ಸುರಿದಿದ್ದಾಳೆ.

ತೀವ್ರ ನೋವಿನಿಂದಾಗಿ ಅವರು ಬೈಕ್ ನಿಲ್ಲಿಸಿ ಕೆಳಗೆ ಇಳಿದರು ಎಂದು ಸಿಧೈ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಒಸಿ) ಹಿಮಾದ್ರಿ ಸರ್ಕಾರ್ ಹೇಳಿದರು. ಏನಾಯಿತು ಎಂದು ತಿಳಿಯದೆ, ಅವರು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದ್ದರು, ಅವರ ಹೆಂಡತಿ ಮತ್ತೆ ಅವರ ಮೇಲೆ ಹೆಚ್ಚಿನ ಆ್ಯಸಿಡ್​ ಅನ್ನು ಸುರಿಯಲು ಪ್ರಯತ್ನಿಸಿದ್ದಾಳೆ.

ಮತ್ತಷ್ಟು ಓದಿ: Kamakshipalya: ಬೆಂಗಳೂರಿನಲ್ಲಿ ಯುವಕನ ಮೇಲೆ ಆ್ಯಸಿಡ್​​ ದಾಳಿ

ಆದರೆ ಗ್ರಾಮಸ್ಥರು ಒಳಗೆ ಧಾವಿಸಿದ ಕಾರಣ ಸಾಧ್ಯವಾಗಲಿಲ್ಲ. ಆ ವ್ಯಕ್ತಿಯನ್ನು ತಕ್ಷಣ ಜಿಬಿಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು. ಆ ಮಹಿಳೆ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗಿರುವಂತೆ ಕಾಣುತ್ತಿದೆ ಮತ್ತು ಅದೇ ಆಕೆ ತನ್ನ ಪತಿಯ ಮೇಲೆ ಆ್ಯಸಿಡ್ ದಾಳಿ ನಡೆಸಲು ಪ್ರೇರೇಪಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರಿಂದ ಇನ್ನೂ ಯಾವುದೇ ಔಪಚಾರಿಕ ದೂರು ಬಂದಿಲ್ಲ. ನಾವು ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಹುಡುಕಾಟ ನಡೆಸಿದ್ದೇವೆ ಮತ್ತು ಆ್ಯಸಿಡ್ ದಾಳಿಯ ನಂತರ ಮಹಿಳೆ ಪರಾರಿಯಾಗಿದ್ದಾಳೆಂದು ತೋರುತ್ತದೆ ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
ವಿಜಯನಗರ: ಮನೆಗಳಿಗೆ ಕನ್ನ ಹಾಕ್ತಿದ್ದ ಇಬ್ಬರು ಖದೀಮರು ಅರೆಸ್ಟ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್
‘ಅಗ್ನಿಸಾಕ್ಷಿ’ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಕಬ್ಬನ್ ಪಾರ್ಕಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಜನರು
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?
ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ?