ಕೇರಳದ ಕೊಲ್ಲಂನ ಕೊಟ್ಟನ್ಕುಳಂಗರ ದೇವಸ್ಥಾನದಲ್ಲಿ ನಡೆದ ಪ್ರಸಿದ್ಧ ಚಮಯವಿಳಕ್ಕು ಉತ್ಸವದ ವೇಳೆ ಕಾಲ್ತುಳಿತದಲ್ಲಿ ಐದು ವರ್ಷದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ. ಭಕ್ತರು ರಥವನ್ನು ಎಳೆಯುವ ಸಂದರ್ಭದಲ್ಲಿ ದೊಡ್ಡ ಚಕ್ರಗಳ ಅಡಿ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ. ಚವರ ನಿವಾಸಿ ದಂಪತಿಯ ಪುತ್ರಿ ಕ್ಷೇತ್ರ ಪ್ರಾಣ ಕಳೆದುಕೊಂಡ ಬಾಲಕಿಯಾಗಿದ್ದಾಳೆ.
ಮಾರ್ಚ್ 24ರಂದು ರಾತ್ರಿ 11.30ರ ವೇಳೆಗೆ ಅಪಘಾತ ಸಂಭವಿಸಿದೆ. ಮಗು ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳು. ಪೋಷಕರು ಪೊಲೀಸರ ಸಹಾಯ ಪಡೆದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೂಡ ಉಳಿಸಿಕೊಳ್ಳಲಾಗಲಿಲ್ಲ.
ಮತ್ತೊಂದು ಸುದ್ದಿ
ತಂದೆಯ ತೋಳಿನಲ್ಲಿದ್ದ ಮಗು, ಕೈ ಜಾರಿ ಮೂರನೇ ಮಹಡಿಯಿಂದ ಬಿದ್ದು ಸಾವು
ಶಾಪಿಂಗ್ ಮಾಲ್‌ನ ಮೂರನೇ ಮಹಡಿಯಲ್ಲಿ ಲಿಫ್ಟ್ ಹತ್ತುವಾಗ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ 40 ಅಡಿಗಳಷ್ಟು ಕೆಳಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಮಾಲ್‌ನಲ್ಲಿ ನಡೆದಿದೆ. ಸುಮಾರು 40 ಅಡಿಗಳಷ್ಟು ಆಳಕ್ಕೆ ಮಗು ಬಿದ್ದಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮತ್ತಷ್ಟು ಓದಿ: Viral Video: ಮಾಡೆಲಿಂಗ್ನಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುವ 8 ತಿಂಗಳ ಕಂದಮ್ಮ
ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬರು ಒಂದು ಕೈಯಲ್ಲಿ 5ವರ್ಷದ ಮಗುವನ್ನು ಮತ್ತು ಮತ್ತೊಂದು ತೋಳಿನಲ್ಲಿ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಲಿಫ್ಟ್ ಬಳಿ ಬರುತ್ತಿರುವುದು ಸೆರೆಯಾಗಿದೆ.
ಲಿಫ್ಟ್ ಹತ್ತುವ ವೇಳೆ 5ವರ್ಷದ ಮಗು ಕಷ್ಟಪಡುತ್ತಿದ್ದು, ಈ ವೇಳೆ ಅಪ್ಪ ಸಹಾಯಕ್ಕೆ ಮುಂದಾಗಿದ್ದು,ಆಕಸ್ಮಿಕವಾಗಿ ತೋಳಿನಲ್ಲಿದ್ದ ಒಂದು ವರ್ಷದ ಮಗು ಕೈಯಿಂದ ಜಾರಿ 40 ಅಡಿಗಳಷ್ಟು ಆಳಕ್ಕೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ