Viral Video: ಮಾಡೆಲಿಂಗ್ನಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುವ 8 ತಿಂಗಳ ಕಂದಮ್ಮ
ಅದೃಷ್ಟ ಯಾವಾಗ, ಹೇಗೆ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಅದೃಷ್ಟ ಖುಲಾಯಿಸಿ ರಾತ್ರೋರಾತ್ರಿ ಸ್ಟಾರ್ ಹಾಗೂ ಸಿರವಂತರಾದವರ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಇದೀಗ ಸಣ್ಣ ವಯಸ್ಸಿನಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟಂತಹ ಎಂಟು ತಿಂಗಳ ಪುಟ್ಟ ಕಂದಮ್ಮವೊಂದು ತಿಂಗಳಿಗೆ ಲಕ್ಷಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದೆ. ಮಗುವಿನ ಸಂಪಾದನೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಅದೃಷ್ಟ ಯಾವಾಗ, ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಹೌದು ತಮ್ಮ ಅದೃಷ್ಟದ ಕಾರಣದಿಂದಲೇ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿಗಳಾಗಿದ್ದಾರೆ. ಕೆಲವೊಬ್ಬರು ತಮ್ಮ ರೀಲ್ಸ್ ವೀಡಿಯೋಗಳಿಂದ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಉಂಟು. ಅದೇ ರೀತಿ ಇಲ್ಲೊಂದು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ 8 ತಿಂಗಳಿನ ಪುಟ್ಟ ಕಂದಮ್ಮ, 4 ರಿಂದ 5 ನಿಮಿಷಗಳ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದೆ. ಪುಟ್ಟ ಕಂದಮ್ಮನ ತಿಂಗಳ ಸಂಪಾದನೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.
ವರದಿಗಳ ಪ್ರಕಾರ ಅಮೇರಿಕಾದಲ್ಲಿನ ಎಂಜೆ ಎಂಬ 8 ತಿಂಗಳಿನ ಮಗು ಮಾಡೆಲಿಂಗ್ ನಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದೆ. ಐದುವರೆ ತಿಂಗಳ ಮಗುವಿದ್ದಾಗ ವಿವಿಧ ಬ್ರಾಂಡ್ ಗಳಿಗೆ ಬೇಬಿ ಮಾಡೆಲ್ ಅಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ಈ ಮಗು ತನ್ನ ಸಂಪಾದನೆಯ ಮೂಲಕ ಪೋಷಕರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿಂತಿದೆ. ಇದೀಗ ಎರಡುವರೆ ತಿಂಗಳಲ್ಲಿ 4,199 ಯು.ಎಸ್ ಡಾಲರ್ ಅಂದರೆ ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡಿದೆ.
ಪ್ರಸ್ತುತ ಎಂಟು ತಿಂಗಳ ಮಗುವಾಗಿರುವ ಎಂಜೆ ಜುಲೈ 5 2023 ರಲ್ಲಿ ಜನಿಸಿದ್ದು, ಆಕೆಯ ತಾಯಿ ಸಾರಾ ಲುಟ್ಜ್ಕುರ್ ತಮ್ಮ ಹೆಣ್ಣು ಮಗುವನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಪರಿಚಯ ಮಾಡಿಸಬೇಕೆಂದು ವಿವಿಧ ಮಾಡೆಲಿಂಗ್ ಏಜೆನ್ಸಿ ಕಂಪೆನಿಗಳಿಗೆ ಮಗಳ ಮುದ್ದಾದ ಫೋಟೋಗಳನ್ನು ಕಳುಹಿಸಿದ್ದರು. ನಂತರ ಎಂಜೆ ಐದುವರೆ ತಿಂಗಳ ಮಗುವಾಗಿದ್ದಾಗ ಬೇಬಿ ಲಿಸ್ಟ್ ಎಂಬ ಬ್ರಾಂಡ್ ಒಂದಕ್ಕೆ ಮಾಡೆಲ್ ಆಯ್ಕೆಯಾಗಿ ಮಾಡೆಲ್ ಫೋಟೋಶೂಟ್ ಮಾಡಲಾಗಿತ್ತು. ಇದರ ನಂತರ ಅದೃಷ್ಟ ಖುಲಾಯಿಸಿ ಈ ಪುಟ್ಟ ಮಗು ಹನ್ನಾ ಆಂಡರ್ಸನ್, ನೋಗ್ಗಿ ವೇರ್, ಕೋಲಾ ಬೇಬಿಕೇರ್ ಮತ್ತು ಕಾಸ್ಟ್ಕೊ ಮುಂತಾದ ಬ್ರಾಂಡ್ ಗಳಿಗೆ ಮಾಡೆಲ್ ಆಗಿ ಆಯ್ಕೆಯಾಗುತ್ತದೆ. ಹೀಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಎರಡುವರೆ ತಿಂಗಳಲ್ಲಿ ಈ ಪುಟ್ಟ ಮಗು ಮೂರು ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡಿದೆ.
ಇದನ್ನೂ ಓದಿ: 81ರ ಹರೆಯದ ವೃದ್ಧೆಯ ಗರ್ಭದಲ್ಲಿ ಕಲ್ಲಿನ ಮಗು, ಏನಿದು ಅಚ್ಚರಿಯ ಸಂಗತಿ!
ಎಂಜೆ ತಾಯಿ ಸಾರಾ ಲುಟ್ಜ್ಕರ್ ಸಣ್ಣ ವಯಸ್ಸಿನಲ್ಲಿಯೇ ತನ್ನ ಮಗು ವಿವಿಧ ಬ್ರಾಂಡ್ ಗಳಿಗೆ ಮಾಡೆಲ್ ಆಗಿ ಆಯ್ಕೆಯಾಗಿದ್ದಕ್ಕೆ ತುಂಬಾನೇ ಖುಷಿಯಾಗಿದ್ದಾರೆ. ಈಗ ಕೇವಲ 4 ರಿಂದ 5 ನಿಮಿಷಗಳ ಫೋಟೋಶೂಟ್ ಗಳಿಂದ ಎಂಜೆ ಉತ್ತಮ ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಿದ್ದಾಳೆ ನಿಜ. ಆದರೆ ಮಾಡೆಲಿಂಗ್ ಕಾರಣದಿಂದ ಆಕೆಯ ಸುಂದರ ಬಾಲ್ಯವನ್ನು ಕಿತ್ತುಕೊಳ್ಳಲು ನಾನು ಇಷ್ಟಪಡುವುದಿಲ್ಲ. ಆಕೆ ದೊಡ್ಡವಳಾದ ಮೇಲೆ ಆಕೆಗೆ ಇಷ್ಟವಿದ್ದರೆ ಆಕೆಯನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಸೇರಿಸುವುದಾಗಿ ಸಾರಾ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ