ತಿರುವನಂತಪುರಂ: ಕೇರಳದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ 91ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. 140 ಸೀಟುಗಳಿರುವ ಕೇರಳ ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆದಿದೆ. ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದ ಮತಎಣಿಕೆಯಲ್ಲಿ ಎಲ್ಡಿಎಫ್ 91 ಮತ್ತು ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಎರಡು ಸೀಟುಗಳಲ್ಲಿ ಮುಂದೆ ಇದೆ. ಪಾಲಕ್ಕಾಡ್, ನೇಮಂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಯುಡಿಎಫ್ ಭದ್ರಕೋಟೆಯಾದ ಕೋಟ್ಟಯಂ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಮುನ್ನಡ ಸಾಧಿಸಿದೆ. ಪುದುಪ್ಪಳ್ಳಿ, ಕೋಟ್ಟಯಂ ಮತ್ತು ಪಾಲಾದಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿಕೊಂಡಿದೆ. ಪೂಂಞಾರ್ನಲ್ಲಿ ಪಿ.ಸಿ. ಜಾರ್ಜ್ ಮೂರನೇ ಸ್ಥಾನದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಇರುವ ಏಟ್ಟುಮಾನೂರ್ನಲ್ಲಿ ಎಲ್ಡಿಎಫ್ ಅಭ್ಯರ್ಥಿ ವಿ.ಎನ್. ವಾಸವನ್ ಮುನ್ನಡೆ ಸಾಧಿಸಿದ್ದಾರೆ.
ಅಂಚೆ ಮತಗಳ ಕವರ್ ಮೇಲೆ ಸಹಿ ಇಲ್ಲ: ಪಾಲಕ್ಕಾಡ್ ನಲ್ಲಿ ತಡವಾಗಿ ಆರಂಭವಾದ ಮತ ಎಣಿಕೆ
ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾದಾಗ 6 ಅಂಚೆಮತಗಳ ಕವರ್ ಮೇಲೆ ಸಹಿ ಇರದ ಕಾರಣ ಅದನ್ನು ಪ್ರತ್ಯೇಕವಾಗಿಡಲು ಬಿಜೆಪಿ ಒತ್ತಾಯಿಸಿದೆ. ಈ ಮತಗಳು ಅಸಿಂಧುವಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಮತ ಎಣಿಕೆ ಕೇಂದ್ರದಲ್ಲಿ ವಾಗ್ವಾದ ಮಾಡಿದದು ಬೆಳಗ್ಗೆ 8.40ಕ್ಕೆ ಇಲ್ಲಿ ಮತ ಎಣಿಕೆ ಆರಂಭವಾಗಿದೆ.
Official trends | BJP’s Kummanam Rajasekharan leading from Nemom. #KeralaeElections2021
(File photo) pic.twitter.com/Rd4fpH3UoE
— ANI (@ANI) May 2, 2021
Official trends | ‘Metro man’ E Sreedharan, BJP candidate from Palakkad, leading from the constituency. #KeralaElections2021 pic.twitter.com/398EajJbVB
— ANI (@ANI) May 2, 2021
ಪಾಲಕ್ಕಾಡ್ನಲ್ಲಿ ಇ. ಶ್ರೀಧರನ್ ಮುನ್ನಡೆ
ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಮೆಟ್ರೊಮ್ಯಾನ್ ಇ. ಶ್ರೀಧರನ್ ಮುನ್ನಡೆ ಸಾಧಿಸಿದ್ದಾರೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಇಲ್ಲಿ 1791 ಮತಗಳಿಂದ ಶ್ರೀಧರನ್ ಮುಂದೆ ಇದ್ದಾರೆ. ಬೆಳಗ್ಗೆ ಅಂಚೆ ಮತ ಎಣಿಕೆ ಪ್ರಾರಂಭಾವಗಿ ಇಲ್ಲಿಯವರೆಗೆ ಕಾಂಗ್ರೆಸ್ ಅಭ್ಯರ್ಥಿ ಶಾಫಿ ಪರಂಬಿಲ್ ಅವರನ್ನು ಹಿಂದಿಕ್ಕಿ ಶ್ರೀಧರನ್ ಅವರೇ ಮುಂದೆ ಇದ್ದಾರೆ.
Official trends for 116 seats | CPI(M) leading on 46 seats, Congress on 20. #KeralaElections2021 pic.twitter.com/MghxjgWs1Y
— ANI (@ANI) May 2, 2021
ವಡಗರದಲ್ಲಿ ಯುಡಿಎಫ್ ಅಭ್ಯರ್ಥಿ ಕೆ.ಕೆ. ರಮ ಮುನ್ನಡೆ ಸಾಧಿಸಿದ್ದಾರೆ. ಕಳಕ್ಕೂಟ್ಟಂನಲ್ಲಿ ಎಲ್ ಡಿಎಫ್ ಅಭ್ಯರ್ಥಿ ಕಡಕಂಪಳ್ಳಿ ಸುರೇಂದ್ರನ್ 4000 ಮತಗಳಿಂದ ಮುಂದೆ ಇದ್ದಾರೆ.
ಕಾಸರಗೋಡಿನಲ್ಲಿ ಯುಡಿಎಫ್ 4 , ಎಲ್ ಡಿಎಫ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಣ್ಣೂರ್ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಡಿಎಫ್ ಮುನ್ನಡೆಯಲ್ಲಿದೆ. ಇರಿಕ್ಕೂರ್ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಇನ್ನುಳಿದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಡಿಎಫ್ ಮುಂದೆ ಇದೆ.
ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 5000 ಮತಗಳಿಂದ ಮುಂದೆ ಇದ್ದಾರೆ. ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಟ್ಟನ್ನೂರ್ನಲ್ಲಿ.ಟಿಎಂ. ಮಧುಸೂದನ್ ಪಯ್ಯನ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: 5 State Assembly Election Results 2021 LIVE: ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮತ ಎಣಿಕೆ ಆರಂಭ
Published On - 10:48 am, Sun, 2 May 21