Kerala: ಬೆಟ್ಟದಿಂದ ಕೆಳಗೆ ಬಿದ್ದ ಬಸ್, 1 ಸಾವು, 58 ಮಂದಿಗೆ ಗಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2022 | 2:09 PM

ಕೇರಳದ ಎರ್ನಾಕುಲಂ ಕಡೆಗೆ ತೆರಳುತ್ತಿದ್ದ ಕೇರಳದ ಎಸ್‌ಆರ್‌ಟಿಸಿ ಬಸ್ ಇಂದು ನೆರಿಯಮಂಗಲಂನಲ್ಲಿ 15 ಅಡಿ ಬೆಟ್ಟದಿಂದ ಕೆಳಗೆ ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 58 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Kerala: ಬೆಟ್ಟದಿಂದ ಕೆಳಗೆ ಬಿದ್ದ ಬಸ್, 1 ಸಾವು, 58 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಇಡುಕ್ಕಿ : ಕೇರಳದ ಎರ್ನಾಕುಲಂ ಕಡೆಗೆ ತೆರಳುತ್ತಿದ್ದ ಕೇರಳಎಸ್‌ಆರ್‌ಟಿಸಿ ಬಸ್ ಇಂದು ನೆರಿಯಮಂಗಲಂನಲ್ಲಿ 15 ಅಡಿ ಬೆಟ್ಟದಿಂದ ಕೆಳಗೆ ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 58 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಡ್ಡಗಾಡು ಪ್ರದೇಶವಾದ ಚೀಯಪ್ಪಾರ ಮತ್ತು ನೆರಿಯಮಂಗಲಂ ನಡುವಿನ ಸ್ಥಳದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ, ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿಯ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಅಪಘಾತದ ಹಿಂದಿನ ಕಾರಣವನ್ನು ಇನ್ನೂ ಖಚಿತಪಡಿಸಿಲ್ಲ. ಬಸ್ ಸುಮಾರು 14-15 ಅಡಿಯ ಬೆಟ್ಟದ ಕೆಳಗೆ ಬಿದ್ದಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಮುನ್ನಾರ್‌ನಿಂದ ಬರುತ್ತಿದ್ದ ಬಸ್‌ನ ಟೈರ್‌ ಒಡೆದು ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಬಸ್ಸಿನಲ್ಲಿ 60 ಮಂದಿ ಇದ್ದರು ಎಂದು ಬಸ್ ಕಂಡಕ್ಟರ್ ಸುಭಾಷ್ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಎದುರಿನಿಂದ ಬಂದ ಯಾವುದೋ ವಾಹನ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಚಾಲಕ ಹೇಳಿದರು. ಜೋರು ಮಳೆಯಾಗುತ್ತಿದ್ದರಿಂದ ನನ್ನ ಬದಿಯ ಕಿಟಕಿಯ ಶೆಟರ್​ನ್ನು ಹಾಕಿಕೊಂಡಿದ್ದಾನೆ. ಹಾಗಾಗಿ ನನಗೆ ಈ ಕಡೆಯ ದಾರಿ ಕಾಣುತ್ತಿರಲಿಲ್ಲ ಎಂದು ಸುಭಾಷ್ ಪಿಟಿಐಗೆ ತಿಳಿಸಿದರು. ಎಲ್ಲಾ ಗಾಯಾಳುಗಳನ್ನು ಎರ್ನಾಕುಲಂನ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.

Published On - 2:08 pm, Mon, 12 September 22