AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಕೊರೊನಾ ಸೋಂಕು; ಮಾರ್ಚ್ 3ರಂದು ಲಸಿಕೆ ಪಡೆದಿದ್ದರು

Pinarayi Vijayan: 75ವರ್ಷದ ಪಿಣರಾಯಿ ವಿಜಯನ್​ ಮಾರ್ಚ್​ 3ರಂದು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದರು. ಹಾಗೇ, ಲಸಿಕೆ ಪಡೆಯಲು ಯಾರೂ ಮುಜುಗರ ಪಟ್ಟುಕೊಳ್ಳಬೇಡಿ ಎಂದು ಕೇರಳದ ಜನರಿಗೆ ಕರೆ ನೀಡಿದ್ದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಕೊರೊನಾ ಸೋಂಕು; ಮಾರ್ಚ್ 3ರಂದು ಲಸಿಕೆ ಪಡೆದಿದ್ದರು
ಪಿಣರಾಯಿ ವಿಜಯನ್​
Lakshmi Hegde
|

Updated on: Apr 08, 2021 | 6:58 PM

Share

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಏರುಪೇರಾಗಿಲ್ಲ. ಪಿಣರಾಯಿ ವಿಜಯನ್​ ಮಗಳು ವೀಣಾ ಈಗಾಗಲೇ ಕೊವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಪಿಣರಾಯಿ ವಿಜಯನ್ ಅವರು ಮಾರ್ಚ್​ 3ರಂದು ಮೊದಲ ಡೋಸ್​ ಕೊರೊನಾ ಲಸಿಕೆ ಪಡೆದಿದ್ದರು. ಕೇರಳದಲ್ಲಿ ಏಪ್ರಿಲ್​ 6ರಂದು ವಿಧಾನಸಭೆ ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.

75ವರ್ಷದ ಪಿಣರಾಯಿ ವಿಜಯನ್​ ಮಾರ್ಚ್​ 3ರಂದು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಸಿಕೆ ಪಡೆದಿದ್ದರು. ಹಾಗೇ, ಲಸಿಕೆ ಪಡೆಯಲು ಯಾರೂ ಮುಜುಗರ ಪಟ್ಟುಕೊಳ್ಳಬೇಡಿ. ಲಸಿಕೆಯ ಮೂಲಕವೇ ನಾವು ಪೋಲಿಯೋವನ್ನು ನಿರ್ಮೂಲನ ಮಾಡಿದ್ದೇವೆ. ಅಂತೆಯೇ, ಕೊರೊನಾವನ್ನೂ ಹೊಡೆದೋಡಿಸಬೇಕು. ಕೆಲವರು ಕೊವಿಡ್ ಲಸಿಕೆ ಬಗ್ಗೆ ರೂಮರ್​ಗಳನ್ನು ಹರಡುತ್ತಿದ್ದಾರೆ. ದಯವಿಟ್ಟು ಅದನ್ನೆಲ್ಲ ನಂಬಬೇಡಿ ಎಂದು ಮನವಿ ಮಾಡಿದ್ದರು.

ಕೇರಳದಲ್ಲಿ ಸಹ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಬುಧವಾರ ಒಂದೇ ದಿನ 3,502 ಪ್ರಕರಣಗಳು ದಾಖಲಾಗಿವೆ. 16 ಮಂದಿ ಮೃತಪಟ್ಟಿದ್ದಾರೆ. ಅಲ್ಲಿಗೆ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,44,594ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 4710ಕ್ಕೆ ತಲುಪಿದೆ.

ಇದನ್ನೂ ಓದಿ: ಅಂಗನವಾಡಿ ಸುಧಾರಣೆಗಾಗಿ ತೆಲಂಗಾಣಕ್ಕೆ ಪ್ರವಾಸ ಕೈಗೊಂಡ ರಾಮನಗರ ಜಿಲ್ಲಾ ಪಂಚಾಯತಿ, ಪ್ರೇಮ್ ಜೀ ಫೌಂಡೇಷನ್ ನೆರವು

Air conditioner price increase: ಏರ್​ಕಂಡೀಷನರ್​ಗಳ ಬೆಲೆ 100 ದಿನದಲ್ಲಿ ಎರಡನೇ ಬಾರಿಗೆ ಏರಿಕೆ

(Kerala Chief Minister Pinarayi Vijayan tested positive for Covid 19)