ರೈತರಿಗೆ ಮತ್ತೊಂದು ಬರೆ; ರಸಗೊಬ್ಬರದ ಬೆಲೆ ಹೆಚ್ಚಿಸಿದ ಇಫ್ಕೊ

ಯೂರಿಯಾ ರಹಿತ ರಸಗೊಬ್ಬರಗಳು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ದರ ಪರಿಷ್ಕರಣೆ ನಡೆಯುತ್ತದೆ. ದರ ಏರಿಕೆಗೆ ಯಾವುದೇ ಸರ್ಕಾರ, ಯಾವುದೇ ರಾಜಕೀಯ ಬೆಳವಣಿಗೆ ಜತೆ ಸಂಬಂಧವಿಲ್ಲ ಎಂದು ಐಎಫ್ಎಫ್ಒ ವಕ್ತಾರರು ಹೇಳಿದ್ದಾರೆ.

ರೈತರಿಗೆ ಮತ್ತೊಂದು ಬರೆ; ರಸಗೊಬ್ಬರದ ಬೆಲೆ ಹೆಚ್ಚಿಸಿದ ಇಫ್ಕೊ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Skanda

Updated on:Apr 10, 2021 | 9:39 AM

ದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮತ್ತು ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಮುಂದುವರಿಯುತ್ತಿರುವ ಹೊತ್ತಲ್ಲಿ ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಗಮವು (IFFCO) ರಸಗೊಬ್ಬರ ಬೆಲೆಯನ್ನು ಏರಿಕೆ ಮಾಡಿದೆ. ಯೂರಿಯಾ ಹೊರತು ಪಡಿಸಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ರಸಗೊಬ್ಬರ ಡಿ-ಅಮೋನಿಯಂ ಫೋಸ್ಪೇಟ್ (DAP). ಅದರ 50 ಕೆಜಿ ತೂಕದ ಚೀಲಕ್ಕೆ ₹1,900 ಆಗಲಿದೆ. ಈ ಹಿಂದೆ ಒಂದು ಚೀಲದ ಬೆಲೆ ₹1,200 ಇತ್ತು. ಹಿಂದಿನ ಬೆಲೆಗಿಂತ ಈ ಬಾರಿ ಶೇ 58 ಏರಿಕೆ ಮಾಡಲಾಗಿದೆ.

ಎನ್​ಪಿಕೆಎಸ್ (nitrogen, phosphorus, potash and sulphur) ಮಿಶ್ರಿತ ಜನಪ್ರಿಯ ರಸಗೊಬ್ಬಗಳ ಬೆಲೆಯಲ್ಲಿಯೂ ಏರಿಕೆ ಮಾಡಲಾಗಿದೆ. ರಸಗೊಬ್ಬರಗಳಲ್ಲಿ ಎನ್​ಪಿಕೆಎಸ್ ಪ್ರಮಾಣವು 10:26:26 ಆಗಿದ್ದರೆ ಚೀಲವೊಂದರ ಬೆಲೆ ₹1,175 ಆಗಿರಲಿದೆ. ಅದೇ ವೇಳೆ 12:32:16 (₹1,185ರಿಂದ ₹1,800), 20:20:0:13 ಆಗಿದ್ದರೆ (₹1,350) ಆಗಿರಲಿದೆ. ಪರಿಷ್ಕೃತ ಬೆಲೆ ಏಪ್ರಿಲ್ 1ರ ನಂತ ಜಾರಿಗೆ ಬಂದಿದೆ.

ಯೂರಿಯಾ ರಹಿತ ರಸಗೊಬ್ಬರಗಳು ಈಗಾಗಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ದರ ಪರಿಷ್ಕರಣೆ ನಡೆಯುತ್ತದೆ. ದರ ಏರಿಕೆಗೆ ಯಾವುದೇ ಸರ್ಕಾರ, ಯಾವುದೇ ರಾಜಕೀಯ ಬೆಳವಣಿಗೆ ಜತೆ ಸಂಬಂಧವಿಲ್ಲ ಎಂದು ಐಎಫ್ಎಫ್ಒ ವಕ್ತಾರರು ಹೇಳಿದ್ದಾರೆ.

ಕಳೆದ 5-6 ತಿಂಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮ ಇಲ್ಲಿ ದರ ಏರಿಕೆ ಮಾಡಲಾಗಿದೆ. ಆಮದು ಮಾಡಿದ ಡಿಎಪಿಯ ಬೆಲೆ ಭಾರತದಲ್ಲಿ ಟನ್​ಗೆ ₹ 540 ಇದೆ. ಅಕ್ಟೋಬರ್ ತಿಂಗಳಲ್ಲಿ ಇದರ ಬೆಲೆ  400 ಡಾಲರ್ ಆಗಿತ್ತು. ಅದೇ ರೀತಿ ಅಮೊನಿಯ ಮತ್ತು ಸಲ್ಪರ್ ಮೊದಲಾದವುಗಳ ಬೆಲೆ ಟನ್​ಗೆ ಕ್ರಮವಾಗಿ 280 ಡಾಲರ್ ಮತ್ತು 85 ಡಾಲರ್ ಇದ್ದದ್ದು ಟನ್​ಗೆ 300 ಡಾಲರ್ ಮತ್ತು 220 ಡಾಲರ್ ಏರಿಕೆ ಆಗಿದೆ. ಯೂರಿಯಾ ಮತ್ತು ಪೊಟಾಶ್ ಬೆಲೆಯು ಟನ್​ಗೆ ಕ್ರಮವಾಗಿ 380 ಡಾಲರ್ ಮತ್ತು280 ಡಾಲರ್  ಏರಿಕೆಯಾಗಿದೆ.

ಹೆಚ್ಚಿನ ರಸಗೊಬ್ಬರಗಳ ಬೆಲೆಗಳು ಕೃಷಿ ಸರಕುಗಳಲ್ಲಿ ಕಂಡುಬರುತ್ತಿರುವ ತೇಜಿ ಮನಸ್ಥಿತಿಯ ಪರಿಣಾಮವಾಗಿದೆ. ಗುರುವಾರ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತನ್ನ ಆಹಾರ ಬೆಲೆ ಸೂಚ್ಯಂಕ (ಎಫ್‌ಪಿಐ) ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು. ಇದು ಮಾರ್ಚ್‌ಗೆ 118.5 ಪಾಯಿಂಟ್‌ಗಳಷ್ಟಿದ್ದು, ಜೂನ್ 2014 ರ 119.3 ಪಾಯಿಂಟ್‌ಗಳ ನಂತರ ಗರಿಷ್ಠವಾಗಿದೆ. ವಿಶೇಷವೇನೆಂದರೆ ಎಫ್‌ಪಿಐ (ಮೂಲ ವರ್ಷ: 2014-16 = 100) ಜಾಗತಿಕ ಸಾಂಕ್ರಾಮಿಕ ಮತ್ತ ಲಾಕ್‌ಡೌನ್‌ನ ಉತ್ತುಂಗದಲ್ಲಿ ಮೇ 2020 ರಲ್ಲಿ ನಾಲ್ಕು ವರ್ಷಗಳ ಕನಿಷ್ಠ 91 ಪಾಯಿಂಟ್‌ಗಳನ್ನು ಮುಟ್ಟಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ಬೆಲೆ ಏರಿಕೆ ನಂತರ ರಸಗೊಬ್ಬರದ ಬೆಲೆಯಲ್ಲಿನ ಏರಿಕೆಯು ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಪ್ರಭಾವ ಬೀರಲಿದೆ . ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇತ್ತ ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಿರತ ರೈತರ ಸಂಖ್ಯೆ ಕಡಿಮೆಯಾಗಿದ್ದು ಗೋಧಿ ಕೊಯ್ಲು ಮತ್ತು ಕಬ್ಬಿನ ನಾಟಿ ಮುಗಿದ ನಂತರ ಮತ್ತೆ ಈ ಪ್ರತಿಭಟನೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ಕೃಷಿಕ್ರಾಂತಿಗೆ ಮುಂದಾದ ಉಡುಪಿ ಜಿಲ್ಲೆ; ಶಾಸಕರ ಮುಂದಾಳತ್ವದಲ್ಲಿ ನಡೆಯಲಿದೆ ಹಡಿಲು ಭೂಮಿ ಬಿತ್ತನೆ ಕಾರ್ಯ

Narendra Modi: ಎಲ್ಲಾ ಚುನಾವಣೆಗಳಲ್ಲೂ ಗೆಲ್ಲುತ್ತಾ ಹೋಗಲು ಬಿಜೆಪಿ ಯಂತ್ರವಲ್ಲ: ಪ್ರಧಾನಿ ನರೇಂದ್ರ ಮೋದಿ

Published On - 10:27 pm, Thu, 8 April 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?