ಕೃಷಿಕ್ರಾಂತಿಗೆ ಮುಂದಾದ ಉಡುಪಿ ಜಿಲ್ಲೆ; ಶಾಸಕರ ಮುಂದಾಳತ್ವದಲ್ಲಿ ನಡೆಯಲಿದೆ ಹಡಿಲು ಭೂಮಿ ಬಿತ್ತನೆ ಕಾರ್ಯ

ಈ ಮಳೆಗಾಲದಲ್ಲಿ ಅಂದಾಜು 5000 ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ಭತ್ತದ ಬಿತ್ತನೆ ನಡೆಯಲಿದೆ. ಇದಕ್ಕಾಗಿ ಭೂ ಮಾಲಿಕರ ಮನವೊಲಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಹಡಿಲು ಕೃಷಿ ಭೂಮಿಗಳನ್ನು ಗುರುತಿಸಿ, ಸ್ಥಳೀಯರನ್ನು, ಕೃಷಿಯಲ್ಲಿ ಆಸಕ್ತಿ ಇರುವವರನ್ನು, ಸಮಾಜ ಸೇವಕರನ್ನು ಹಾಗೂ ಸಂಘ-ಸಂಸ್ಥೆಯವರನ್ನು ಒಟ್ಟುಗೂಡಿಸಿ ಕೃಷಿ ನಡೆಸುವ ಸವಾಲು ಹೊಂದಲಾಗಿದೆ.

ಕೃಷಿಕ್ರಾಂತಿಗೆ ಮುಂದಾದ ಉಡುಪಿ ಜಿಲ್ಲೆ; ಶಾಸಕರ ಮುಂದಾಳತ್ವದಲ್ಲಿ ನಡೆಯಲಿದೆ ಹಡಿಲು ಭೂಮಿ ಬಿತ್ತನೆ ಕಾರ್ಯ
ಭತ್ತ ಕೊಯ್ಲು ಮಾಡುತ್ತಿರುವ ದೃಶ್ಯ
Follow us
preethi shettigar
| Updated By: ಆಯೇಷಾ ಬಾನು

Updated on: Apr 08, 2021 | 6:35 AM

ಉಡುಪಿ: ಹೊಸತೊಂದು ಕೃಷಿಕ್ರಾಂತಿಗೆ ಉಡುಪಿ ಜಿಲ್ಲೆ ಸಿದ್ಧವಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೃಷಿಭೂಮಿ ಹಡಿಲು (ಬರಡುಭೂಮಿ) ಬೀಳಬಾರದು ಎಂಬ ಕಾಳಜಿಯಿಂದ ಶಾಸಕ ರಘುಪತಿ ಭಟ್ ಮಾದರಿ ಕೆಲಸ ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಖಾಲಿಬಿಟ್ಟ ಕೃಷಿಭೂಮಿಯಲ್ಲಿ ಭತ್ತ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ. ಆ ಮೂಲಕ ಮಳೆಗಾಲದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಮತ್ತೆ ಹಸಿರಾಗಿ ಕಂಗೊಳಿಸಲು ಸಿದ್ಧವಾಗುತ್ತಿದೆ.

ಒಂದು ಕಾಲಕ್ಕೆ ಉಡುಪಿಯಲ್ಲಿ ಕೃಷಿಯೇ ಜೀವನ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚುಟವಟಿಕೆಗಳಲ್ಲೇ ಆಸಕ್ತರಾದರು. ಪರಿಣಾಮ ಜಿಲ್ಲೆಯಲ್ಲಿ ಹೆಕ್ಟೇರುಗಟ್ಟಲೆ ಭೂಮಿ ಕೃಷಿ ಮಾಡದೆ ಖಾಲಿ ಬಿದ್ದಿದೆ. ಆದರೆ ಈ ಬಾರಿ ಹಡಿಲು ಭೂಮಿಯಲ್ಲಿ ಭತ್ತ ಕೃಷಿ ನಡೆಸಲು ಸ್ವತ: ಶಾಸಕರಾದ ಕೆ.ರಘುಪತಿ ಭಟ್ ಮುಂದಾಗಿದ್ದಾರೆ.

ತಮ್ಮ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ 35 ವಾರ್ಡ್ ಮತ್ತು ನಗರ ಸಭೆಗೆ ಹೊಂದಿಕೊಂಡಿರುವ 19 ಗ್ರಾಮ ಪಂಚಾಯತಿಗಳಲ್ಲಿ ಹಡಿಲು ಭೂಮಿ ಕೃಷಿ ಸಾಗುವಳಿ ಚಳುವಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲಾ ಜನಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

ಈ ಮಳೆಗಾಲದಲ್ಲಿ ಅಂದಾಜು 5000 ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ಭತ್ತದ ಬಿತ್ತನೆ ನಡೆಯಲಿದೆ. ಇದಕ್ಕಾಗಿ ಭೂ ಮಾಲಿಕರ ಮನವೊಲಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಹಡಿಲು ಕೃಷಿ ಭೂಮಿಗಳನ್ನು ಗುರುತಿಸಿ, ಸ್ಥಳೀಯರನ್ನು, ಕೃಷಿಯಲ್ಲಿ ಆಸಕ್ತಿ ಇರುವವರನ್ನು, ಸಮಾಜ ಸೇವಕರನ್ನು ಹಾಗೂ ಸಂಘ-ಸಂಸ್ಥೆಯವರನ್ನು ಒಟ್ಟುಗೂಡಿಸಿ ಕೃಷಿ ನಡೆಸುವ ಸವಾಲು ಹೊಂದಲಾಗಿದೆ. ಸಾವಯವ ಪದ್ಧತಿಯಲ್ಲಿ ಹಡಿಲು ಭೂಮಿ ಕೃಷಿ ಸಾಗುವಳಿ ನಡೆಸಲು ಯೋಜನೆ ತಯಾರಾಗಿದೆ ಎಂದು ಶಾಸಕರಾದ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

agriculture

ಹಡಿಲು ಭೂಮಿ

ಉಡುಪಿಯ ಜನಪ್ರಿಯ ಶಿಕ್ಷಣ ಸಂಸ್ಥೆ ನಿಟ್ಟೂರು ಹೈಸ್ಕೂಲ್ ಈ ಯೋಜನೆಗೆ ಮಾದರಿ ಆಗಿದೆ. ಕಳೆದ ಮಳೆಗಾಲದಲ್ಲಿ ಕೊರೋನಾ ಸಂಬಂಧ ಲಾಕ್ ಡೌನ್ ಇದ್ದಾಗ, ಈ ಹೈಸ್ಕೂಲ್​ನ ಹಳೆ ವಿದ್ಯಾರ್ಥಿಗಳು ಸೇರಿ ಶಾಲಾ ಪರಿಸರದಲ್ಲಿ ಕೃಷಿ ನಡೆಸಿದ್ದರು. ಸುಮಾರು ಐವತ್ತು ಎಕರೆ ಖಾಲಿ ಕೃಷಿ ಭೂಮಿಯಲ್ಲಿ ಅಂದಾಜು 30 ಟನ್ ಭತ್ತ ಬೆಳೆದಿದ್ದರು. ಬಳಿಕ ತಮ್ಮದೇ ಶಾಲೆಯ ಹೆಸರಿನ ಬ್ರಾಂಡ್ ಕ್ರಿಯೇಟ್ ಮಾಡಿ, ನಿಟ್ಟೂರು ಸ್ವರ್ಣಾ ಕಜೆ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಸದ್ಯ ಕರಾವಳಿ ಭಾಗದಲ್ಲಿ ಈ ಕುಚ್ಚಿಗೆ ಅಕ್ಕಿಗೆ ಅತೀ ಬೇಡಿಕೆಯನ್ನು ಹೊಂದಿದೆ. ಒಂದು ಶಾಲೆ ಈ ಕೆಲಸವನ್ನು ಮಾಡಬಹುದಾದರೆ, ಸರ್ಕಾರಿ ವ್ಯವಸ್ಥೆಗೆ ಯಾಕೆ ಸಾಧ್ಯವಾಗಲ್ಲ ಎಂಬ ವಿಚಾರವನ್ನು ಸವಾಲಾಗಿ ಆಗಿ ಸ್ವೀಕರಿಸಿದ ಶಾಸಕರಾದ ಕೆ.ರಘುಪತಿ ಭಟ್ ತಮ್ಮ ಕ್ಷೇತ್ರದಲ್ಲಿ ಕೃಷಿಕ್ರಾಂತಿಗೆ ಸಜ್ಜಾಗಿದ್ದಾರೆ.

ಕಳೆದ ವರ್ಷ ನಿಟ್ಟೂರು ಶಾಲೆ ತನ್ನ ಸನಿಹದಲ್ಲಿ ಇರುವ 50 ಎಕರೆ ಹಡಿಲು ಭೂಮಿಯನ್ನು ಸ್ವಚ್ಛಗೊಳಿಸಿ ಬೇಸಾಯ ಮಾಡಿ ಭತ್ತವನ್ನು ಬೆಳೆಸಿ ಈಗ ಅದನ್ನು ಸ್ವರ್ಣ ಕಜೆ ಎಂಬ ಹೆಸರಿನಲ್ಲಿ ಮಾರಾಟ ಮಾಡಿದ್ದೇವು ಆಗ ಶಾಸಕರಾದ ಕೆ.ರಘುಪತಿ ಭಟ್ ಈ ಯೋಜನೆಯನ್ನು ಮುಂದುವರಿಸುವುದಾಗಿ ಆಶ್ವಾಸನೆ ನೀಡಿದ್ದರು ಅದರಂತೆ ಈಗ ಕೆಲಸಕ್ಕೆ ಮುಂದಾಗಿದ್ದಾರೆ. ಇದು ದೇಶಕ್ಕೆ ಮಾದರಿಯಾಗುವಂತದ್ದು ಎಂದು ನಿಟ್ಟೂರು ಹೈಸ್ಕೂಲ್ ನಿವೃತ್ತ ಮುಖ್ಯೋಪಾದ್ಯಾಯರಾದ ಮುರಳಿ ಕಡೆಕಾರ್ ಹೇಳಿದ್ದಾರೆ.

ಒಂದು ವೇಳೆ ಈ ಹಡಿಲು ಭೂಮಿ ಸಾಗುವಳಿ ಯಶಸ್ವಿಯಾದರೆ, ರಾಜ್ಯಕ್ಕೆ ಮಾದರಿಯಾಲಿದೆ. ಕರಾವಳಿಯಲ್ಲಿ ಮತ್ತೆ ಕೃಷಿ ನಳನಳಿಸಲಿದೆ. ಪ್ರತ್ಯೇಕ ಬ್ರಾಂಡ್​ನ ಗುಣಮಟ್ಟದ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲಿದೆ. ಆ ಮೂಲಕ ಕೃಷಿ ಸಂಸ್ಕೃತಿಯ ಜೊತೆಗೆ ಜನರು ಗ್ರೀನ್ ಕಾಲರ್ ಜಾಬ್​ಗೆ ಆಸಕ್ತಿವಹಿಸುವ ಸಾಧ್ಯತೆಯೂ ಇದೆ.

(ವರದಿ: ಹರೀಶ್ ಪಾಲೆಚ್ಚಾರ್-9980914160)

ಇದನ್ನೂ ಓದಿ: ನಿಟ್ಟೂರು ಸ್ವರ್ಣ ಭತ್ತ: ಸುವರ್ಣ ಸಂಭ್ರಮದಲ್ಲಿದ್ದ ಪ್ರೌಢಶಾಲೆಯು ಮಾಡಿದ ಅನನ್ಯ ಸಾಧನೆ ಇದು..

(Udupi Agriculture revolution New method of sowing took place with MLA K Raghupathi Bhat)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್