ತಿರುವನಂತಪುರಂ: ಕೆಲವೊಮ್ಮೆ ನಮ್ಮ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಅದೃಷ್ಟವೊಂದು ಚೆನ್ನಾಗಿದ್ದರೆ ಏನೂ ಇಲ್ಲದವನು ಕೂಡ ಕುಬೇರನಾಗಿಬಿಡಬಹುದು. ಹಾಗಂತ ಎಲ್ಲದಕ್ಕೂ ಅದೃಷ್ಟವೇ ಮುಖ್ಯ ಎಂದೇನಲ್ಲ, ಶ್ರಮವೂ ಅಗತ್ಯವಾಗಿರುತ್ತದೆ. ಆದರೆ, ಲಾಟರಿ ವಿಷಯದಲ್ಲಿ ಅದೃಷ್ಟವೇ ಮುಖ್ಯ. ಕೇರಳದಲ್ಲಿ ಕಿಸ್ಮಸ್ ಬಂಪರ್ ಲಾಟರಿ ಫಲಿತಾಂಶ (Kerala Christmas- New Year Bumper lottery Results) ಪ್ರಕಟವಾಗಿದೆ. 2022ರ ಕೇರಳ ಲಾಟರಿಯಲ್ಲಿ ಪೇಂಟರ್ ಒಬ್ಬರಿಗೆ ಬರೋಬ್ಬರಿ 12 ಕೋಟಿ ರೂ. ಹಣ ಸಿಕ್ಕಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಆ ಯುವಕನಿಗೆ 12 ಕೋಟಿ ರೂ. ಲಾಟರಿ ಹೊಡೆದಿದ್ದು ಕೂಡ ಒಂದು ಅನಿರೀಕ್ಷಿತವೇ ಸರಿ. ಅದರ ಕತೆಯೇನು ಗೊತ್ತಾ?
ಕೇರಳದ ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‌ಮಸ್-ಹೊಸ ವರ್ಷದ ಲಾಟರಿಯ (ಕ್ರಿಸ್‌ಮಸ್ ನ್ಯೂ ಇಯರ್ ಬಂಪರ್ 2021-22) ಮೊದಲ ಬಹುಮಾನವನ್ನು (12 ಕೋಟಿ ರೂ.) ಗೆದ್ದಿದ್ದಾರೆ. ಐಮನಂ ಆಸುಪಾಸಿನ ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಸದನ್ ಅವರು ಭಾನುವಾರ ಬೆಳಿಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೂ ಕೇವಲ ಕೆಲವೇ ಗಂಟೆಗಳ ಮೊದಲು ಅಂಗಡಿಯಿಂದ XG 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದರು.
“ನಾನು ಭಾನುವಾರ ಬೆಳಿಗ್ಗೆ ಮಾಂಸವನ್ನು ಖರೀದಿಸಲು ಹತ್ತಿರದ ಮಾರುಕಟ್ಟೆಗೆ ಹೋದಾಗ ಸೆಲ್ವನ್ (ಲಾಟರಿ ಮಾರಾಟಗಾರ) ಅವರಿಂದ ಲಾಟರಿ ಟಿಕೆಟ್ ಖರೀದಿಸಿದ್ದೆ. ಅದಾದ ಕೆಲವೇ ಗಂಟೆಗಳಲ್ಲಿ ಲಾಟರಿ ಫಲಿತಾಂಶ ಹೊರಬಿದ್ದಿತು. ನಾನು ಖರೀದಿಸಿದ್ದ ಟಿಕೆಟ್ಗೆ ಬಹುಮಾನ ಬಂದಿತ್ತು” ಎಂದು ಸದಾನಂದನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ 50 ವರ್ಷಗಳಿಂದ ಸದಾನಂದನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ. ಅರಿಗೆ 12 ಕೋಟಿ ರೂ. ಬಹುಮಾನ ಸಿಕ್ಕಿದೆ. ಈ ಮೊತ್ತವನ್ನು ಏನು ಮಾಡುತ್ತೀರಿ? ಎಂದು ಕೇಳಿದಾಗ, ಅವರು ತಮ್ಮ ಮಕ್ಕಳಾದ ಸನೀಶ್ ಮತ್ತು ಸಂಜಯ್ ಅವರ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಬಳಸುವುದಾಗಿ ಹೇಳಿದರು.
ಕ್ರಿಸ್‌ಮಸ್ ಬಂಪರ್‌ನ ಟಿಕೆಟ್‌ಗಳ ಬೆಲೆ 300 ರೂ. ಲಾಟರಿಯಲ್ಲಿ ಎರಡನೇ ಬಹುಮಾನ 3 ಕೋಟಿ ರೂ (ಆರು ಟಿಕೆಟ್‌ಗಳಿಗೆ ನೀಡಲಾಯಿತು) ಮತ್ತು ಮೂರನೇ ಬಹುಮಾನ 60 ಲಕ್ಷ ರೂ (ಆರು ಟಿಕೆಟ್‌ಗಳಿಗೆ ನೀಡಲಾಗಿದೆ). ಲಾಟರಿ ಇಲಾಖೆಯು ಆರಂಭದಲ್ಲಿ 24 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್ 2021ರಲ್ಲಿ ಕೇರಳದ ಆಟೋ ಡ್ರೈವರ್ ಓಣಂ 12 ಕೋಟಿ ರೂಪಾಯಿಗಳ ಲಾಟರಿ ಬಹುಮಾನವನ್ನು ಗೆದ್ದಿದ್ದರು.
ಇದನ್ನೂ ಓದಿ: ₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ
ಲಂಡನ್: ಮಹಿಳೆಯರನ್ನು ಕೊಂದರೆ ಲಾಟರಿ ಹೊಡೆಯುತ್ತದೆ ಎಂದು ನಂಬಿದ್ದ ಅವನು ಇಬ್ಬರನ್ನು ಬರ್ಬರವಾಗಿ ಕೊಂದುಹಾಕಿದ!