ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಸಿಎಂ ಪಿಣರಾಯಿ ಮಗಳ ಮತ್ತೊಂದು ಮದುವೆ ಫಿಕ್ಸ್, ವರ ಯಾರು?

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರ ವಿವಾಹ, CPI(M) ರಾಜ್ಯ ಸಮಿತಿ ಸದಸ್ಯ ಪಿಎ ಮೊಹಮದ್ ರಿಯಾಸ್ ಜೊತೆ ಶೀಘ್ರದಲ್ಲೇ ನೆರವೇರಲಿದೆ. ಜೂನ್ 15ರಂದು ವೀಣಾ, ಮೊಹಮದ್ ಮದುವೆ ನಡೆಯಲಿದೆ ಎಂದು ಎರಡೂ ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಮಾರಿ ಕೊರೊನಾದಿಂದ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಮದುವೆ ಕಾರ್ಯಕ್ರಮಗಳಿಗೆ 50ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಹಾಗಾಗಿ ಸರಳವಾಗಿ ಮದುವೆಯಾಗಲು ವೀಣಾ, ಮೊಹಮದ್ ಕಡೆಯ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊಹಮದ್ ರಿಯಾಸ್ ಅವರು  CPI(M) ಯುವ […]

ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಸಿಎಂ ಪಿಣರಾಯಿ ಮಗಳ ಮತ್ತೊಂದು ಮದುವೆ ಫಿಕ್ಸ್, ವರ ಯಾರು?
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 10, 2020 | 2:32 PM

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ ಅವರ ವಿವಾಹ, CPI(M) ರಾಜ್ಯ ಸಮಿತಿ ಸದಸ್ಯ ಪಿಎ ಮೊಹಮದ್ ರಿಯಾಸ್ ಜೊತೆ ಶೀಘ್ರದಲ್ಲೇ ನೆರವೇರಲಿದೆ. ಜೂನ್ 15ರಂದು ವೀಣಾ, ಮೊಹಮದ್ ಮದುವೆ ನಡೆಯಲಿದೆ ಎಂದು ಎರಡೂ ಕುಟುಂಬಸ್ಥರು ತಿಳಿಸಿದ್ದಾರೆ.

ಮಹಾಮಾರಿ ಕೊರೊನಾದಿಂದ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಮದುವೆ ಕಾರ್ಯಕ್ರಮಗಳಿಗೆ 50ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ. ಹಾಗಾಗಿ ಸರಳವಾಗಿ ಮದುವೆಯಾಗಲು ವೀಣಾ, ಮೊಹಮದ್ ಕಡೆಯ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊಹಮದ್ ರಿಯಾಸ್ ಅವರು  CPI(M) ಯುವ ಘಟಕ ಡೆಮಾಕ್ರೆಟಿಕ್‌ ಯೂತ್‌ ಫೆಡರೇ­ಷನ್‌ ಆಫ್‌ ಇಂಡಿಯಾ (DYFI) ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ.

ಸಿಎಂ ಪಿಣರಾಯಿ ವಿಜಯನ್ ಮಗಳು ವೀಣಾ ಟೆಕ್ಕಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಮೊದಲಿನಿಂದಲೂ ರಾಜಕೀಯದಿಂದ ದೂರು ಉಳಿದಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಇಬ್ಬರಿಗೂ ಇದು ಎರಡನೇ ಮದುವೆ:
ಇಬ್ಬರಿಗೂ ಸಹ ಇದು ಎರಡನೇ ಮದುವೆಯಾಗಿದೆ. ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಮೊಹಮದ್ ರಿಯಾಸ್ ಅವರು 2015ರಲ್ಲಿ ಮೊದಲ ಪತ್ನಿ ಡಾ.ಸಮೀಹಾ ಅವರಿಂದ ದೂರವಾಗಿದ್ದರು. ರಿಯಾಸ್​ಗೆ ಇಬ್ಬರು ಪುತ್ರಿಯರಿದ್ದಾರೆ. ವೀಣಾ ಅವರಿಗೂ ಒಬ್ಬ ಪುತ್ರನಿದ್ದು, ಪತಿಯಿಂದ 5 ವರ್ಷಗಳಿಂದಲೂ ದೂರವಿದ್ದಾರೆ.

Published On - 12:07 pm, Wed, 10 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us