ಎಸ್ಎಫ್ಐ ಕಾರ್ಯಕರ್ತರ ಜತೆ ವಾಗ್ವಾದ ನಂತರ ಕೇರಳ ರಾಜ್ಯಪಾಲರಿಗೆ Z+ ಭದ್ರತೆ

|

Updated on: Jan 27, 2024 | 3:59 PM

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ತೆರಳುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ನೋಡಿದ ರಾಜ್ಯಪಾಲರು ತಮ್ಮ ಕಾರಿನಿಂದ ಕೆಳಗಿಳಿದು ಆವೋ (ಬನ್ನಿ) ಎಂದು ಕೂಗುತ್ತಾ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕಡೆಗೆ ನಡೆದು, ರಸ್ತೆಯಲ್ಲೇ ಕುಳಿತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಸ್ಎಫ್ಐ ಕಾರ್ಯಕರ್ತರ ಜತೆ ವಾಗ್ವಾದ ನಂತರ ಕೇರಳ ರಾಜ್ಯಪಾಲರಿಗೆ Z+ ಭದ್ರತೆ
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್
Follow us on

ತಿರುವನಂತಪುರಂ ಜನವರಿ 27 : ಕೇರಳದ (Kerala) ಕೊಲ್ಲಂ ಜಿಲ್ಲೆಯಲ್ಲಿ ಎಸ್ಎಫ್ಐ (SFI) ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಕ್ಕೆ ಖಾನ್, ರಸ್ತೆಯಲ್ಲಿ ಕುಳಿತು ರಾಜ್ಯ ಸರ್ಕಾರ, ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟಿಸಿದ್ದರು. ಶನಿವಾರ ಬೆಳಗ್ಗೆ ನಡೆದ ಈ ಪ್ರತಿಭಟನೆ- ಆಕ್ರೋಶ ನಂತರ ಕೇಂದ್ರ ಸರ್ಕಾರ ಖಾನ್ ಅವರಿಗೆ Z+ ಭದ್ರತೆಯನ್ನು ನೀಡಿದೆ. “ಗೌರವಾನ್ವಿತ ಗವರ್ನರ್ ಮತ್ತು ಕೇರಳ ರಾಜಭವನಕ್ಕೆ ಸಿಆರ್‌ಪಿಎಫ್‌ನ Z+ ಭದ್ರತೆಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕೇರಳ ರಾಜಭವನಕ್ಕೆ ತಿಳಿಸಿದೆ” ಎಂದು ರಾಜ್ಯಪಾಲರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗವರ್ನರ್ ಖಾನ್ ತೆರಳುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ನೋಡಿದ ರಾಜ್ಯಪಾಲರು ತಮ್ಮ ಕಾರಿನಿಂದ ಕೆಳಗಿಳಿದು ಆವೋ (ಬನ್ನಿ) ಎಂದು ಕೂಗುತ್ತಾ ಪ್ರತಿಭಟನಾನಿರತ ವಿದ್ಯಾರ್ಥಿಗಳ ಕಡೆಗೆ ನಡೆದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕಾನೂನುಬಾಹಿರ ಕಾರ್ಯಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದ್ದು, ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಬದಿಯಲ್ಲಿ ಕುಳಿತು ಅಧಿಕಾರಿಗಳ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿದರು.


ತಾವು ಪ್ರತಿಭಟನೆ ನಡೆಸಿಲ್ಲ. ಸಿಪಿಐ(ಎಂ) ಸಂಘಟನೆಯ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾನು ಒತ್ತಾಯಿಸಿದ್ದು, ಪೊಲೀಸರು ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ನೀಡಲು ಕಾಯುತ್ತಿದ್ದೆ  ಎಂದು  ರಾಜ್ಯಪಾಲ ಖಾನ್ ಹೇಳಿದ್ದಾರೆ.

ಪೊಲೀಸರು ಅಂತಿಮವಾಗಿ ಜಾಮೀನು ರಹಿತ ನಿಬಂಧನೆಗಳ ಅಡಿಯಲ್ಲಿ 17 ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಪ್ರತಿಯನ್ನು ಹಾಜರುಪಡಿಸಿದ್ದು, ಇದಾದ ನಂತರವೇ ರಾಜ್ಯಪಾಲರು ಅಲ್ಲಿಂದ ಹೊರಟಿದ್ದಾರೆ.

ಘಟನೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಗವರ್ನರ್ ಖಾನ್, ಮುಖ್ಯಮಂತ್ರಿ ವಿಜಯನ್ ವಿರುದ್ಧ ತಮ್ಮ ಟೀಕೆಗಳನ್ನು ಮುಂದುವರೆಸಿದ್ದುರು ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳಿರುವ ವ್ಯಕ್ತಿಗಳನ್ನು ರಕ್ಷಿಸಲು ಪೊಲೀಸರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಕೇರಳ: ಕೊಲ್ಲಂನಲ್ಲಿ ಎಸ್ಎಫ್ಐ ವಿರುದ್ಧ ರಸ್ತೆಯಲ್ಲಿ ಕುಳಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಕ್ರೋಶ

ಎಸ್‌ಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಈ ಕಾನೂನು ಉಲ್ಲಂಘಿಸುವವರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡುತ್ತಿರುವುದು ಅವರೇ(ಪಿಣರಾಯಿ ವಿಜಯನ್) ಎಂದು ರಾಜ್ಯಪಾಲ ಖಾನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಗವರ್ನರ್ ಖಾನ್ ಮತ್ತು ಎಡ ಸರ್ಕಾರದ ನಡುವೆ ನಡೆಯುತ್ತಿರುವ ಸಂಘರ್ಷವು ರಾಜ್ಯದ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆ ಮತ್ತು ವಿಧಾನಸಭೆಯು ಅಂಗೀಕರಿಸಿದ ಕೆಲವು ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಹಲವು ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:57 pm, Sat, 27 January 24