ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ವೈಭವೀಕರಿಸುವುದು ನ್ಯಾಯಾಂಗಕ್ಕೆ ಮಾಡಿದ ಅವಮಾನ: ಪ್ರಧಾನಿ ಮೋದಿ
ಸಂವಿಧಾನ ಸಭೆಯಿಂದ ಕಲಿಯುವ ಮಹತ್ವವನ್ನು ಹೇಳಿದ ಪ್ರಧಾನಿ ಮೋದಿ, “ನಮ್ಮ ಸಂವಿಧಾನ ಸಭೆಯಿಂದ ಕಲಿಯಲು ಬಹಳಷ್ಟಿದೆ. ಸಂವಿಧಾನ ಸಭೆಯ ಸದಸ್ಯರು ವಿವಿಧ ಆಲೋಚನೆಗಳು, ವಿಷಯಗಳು ಮತ್ತು ಅಭಿಪ್ರಾಯಗಳ ನಡುವೆ ಒಮ್ಮತವನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅವರು ಅದಕ್ಕೆ ತಕ್ಕಂತೆ ಬದುಕಿದರು ಎಂದಿದ್ದಾರೆ.
ದೆಹಲಿ ಜನವರಿ 27: ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ (All India Presiding Officers’ Conference) ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, “ಇಂದು ನಾವು ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದ್ದೇವೆ. ಈ ಹಿಂದೆ ಸದನದ ಯಾವುದೇ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಎಲ್ಲರೂ ಅವರಿಂದ ದೂರವಾಗುತ್ತಿದ್ದರು. ಆದರೆ ಇಂದು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಭ್ರಷ್ಟರನ್ನೂ ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತೇವೆ. ಇದು ಕಾರ್ಯಾಂಗಕ್ಕೆ ಮಾಡಿದ ಅವಮಾನ, ನ್ಯಾಯಾಂಗಕ್ಕೆ ಮಾಡಿದ ಅವಮಾನ, ಭಾರತದ ಶ್ರೇಷ್ಠ ಸಂವಿಧಾನಕ್ಕೆ ಮಾಡಿದ ಅವಮಾನಚರ್ಚೆ ಮತ್ತು ದೃಢವಾದ ಸಲಹೆಗಳು ಈ ವಿಷಯದ ಕುರಿತು ಈ ಸಮ್ಮೇಳನದಲ್ಲಿ ಭವಿಷ್ಯದ ಹೊಸ ರಸ್ತೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.
ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು. ಈ ಬಾರಿಯ ಈ ಸಮ್ಮೇಳನ ಇನ್ನಷ್ಟು ವಿಶೇಷವಾಗಿದ್ದು, ಭಾರತದ 75ನೇ ಗಣರಾಜ್ಯೋತ್ಸವದ ನಂತರ ಈ ಸಮ್ಮೇಳನ ನಡೆಯುತ್ತಿದೆ. ನಮ್ಮ ಸಂವಿಧಾನವು 75 ವರ್ಷಗಳ ಹಿಂದೆ ಜನವರಿ 26 ರಂದು ಜಾರಿಗೆ ಬಂದಿತು. ಅಂದರೆ ಸಂವಿಧಾನವೂ 75 ವರ್ಷಗಳನ್ನು ಪೂರೈಸುತ್ತಿದೆ. ದೇಶವಾಸಿಗಳ ಪರವಾಗಿ ನಾನು ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
VIDEO | “This (All India Presiding Officers’) conference is being organised at a time as we celebrate the 75th Republic Day. I pay my tributes to all the members of the Constituent Assembly,” says PM @narendramodi, virtually speaking at All India Presiding Officers’ Conference.… pic.twitter.com/ziiELHo3fk
— Press Trust of India (@PTI_News) January 27, 2024
ಸಂವಿಧಾನ ಸಭೆಯಿಂದ ಕಲಿಯುವ ಮಹತ್ವವನ್ನು ಹೇಳಿದ ಪ್ರಧಾನಿ ಮೋದಿ, “ನಮ್ಮ ಸಂವಿಧಾನ ಸಭೆಯಿಂದ ಕಲಿಯಲು ಬಹಳಷ್ಟಿದೆ. ಸಂವಿಧಾನ ಸಭೆಯ ಸದಸ್ಯರು ವಿವಿಧ ಆಲೋಚನೆಗಳು, ವಿಷಯಗಳು ಮತ್ತು ಅಭಿಪ್ರಾಯಗಳ ನಡುವೆ ಒಮ್ಮತವನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಅವರು ಅದಕ್ಕೆ ತಕ್ಕಂತೆ ಬದುಕಿದರು. ಹಾಜರಿದ್ದ ಅಧಿಕಾರಿಗಳ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸಂವಿಧಾನ ರಚನಾ ಸಭೆಯ ಆದರ್ಶಗಳಿಂದ ಸ್ಫೂರ್ತಿ ಪಡೆಯುವಂತೆ ಒತ್ತಾಯಿಸಿದರು.
ಶಾಸಕಾಂಗ ಸಂಸ್ಥೆಗಳ ಕಾರ್ಯಚಟುವಟಿಕೆಯನ್ನು ಹೆಚ್ಚಿಸುವ ಅಗತ್ಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಇಂದಿನ ಸನ್ನಿವೇಶದಲ್ಲಿ ಜಾಗರೂಕ ನಾಗರಿಕರು ಪ್ರತಿ ಪ್ರತಿನಿಧಿಯನ್ನು ಕೂಲಂಕಷವಾಗಿ ಪರಿಶೀಲಿಸುವ ಸನ್ನಿವೇಶದಲ್ಲಿ ಶಾಸಕಾಂಗ ಸಭೆಗಳು ಮತ್ತು ಸಮಿತಿಗಳ ದಕ್ಷತೆಯನ್ನು ಹೆಚ್ಚಿಸುವುದು ನಿರ್ಣಾಯಕವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಮನ ಪೂಜೆ ಮಾಡಿದ್ದಕ್ಕೆ ಜೈಲಿನಲ್ಲಿ ಹಲ್ಲೆ: ಪ್ರಧಾನಿ ಮೋದಿ ಸಹಾಯ ಕೋರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತ ಆರೋಪಿ
ಸದನದಲ್ಲಿ ಸದಸ್ಯರ ನಡವಳಿಕೆ ಮತ್ತು ಅಲ್ಲಿನ ಅನುಕೂಲಕರ ವಾತಾವರಣವು ವಿಧಾನಸಭೆಯ ಉತ್ಪಾದಕತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ಸಲಹೆಗಳು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ. ಸದನದಲ್ಲಿ ಪ್ರತಿನಿಧಿಗಳ ನಡವಳಿಕೆಯು ಸದನದ ಚಿತ್ರಣವನ್ನು ನಿರ್ಧರಿಸುತ್ತದೆ. ತಮ್ಮ ಸದಸ್ಯರ ಆಕ್ಷೇಪಾರ್ಹ ವರ್ತನೆಗೆ ಕಡಿವಾಣ ಹಾಕುವ ಬದಲು ಪಕ್ಷಗಳು ಅವರ ಬೆಂಬಲಕ್ಕೆ ಬರುತ್ತಿವೆ.ಇದು ಸಂಸತ್ತಿಗೆ ಅಥವಾ ಅಸೆಂಬ್ಲಿಗಳಿಗೆ ಉತ್ತಮ ಪರಿಸ್ಥಿತಿ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಭಾರತದ ಪ್ರಗತಿಯನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಗಳು ಮತ್ತು ಅವರ ಶಾಸಕಾಂಗ ಸಭೆಗಳ ಪ್ರಮುಖ ಪಾತ್ರವನ್ನು ಗುರುತಿಸಿದ ಪ್ರಧಾನಿ ಮೋದಿ, ಭಾರತದ ಪ್ರಗತಿಯು ನಮ್ಮ ರಾಜ್ಯಗಳ ಪ್ರಗತಿಯ ಮೇಲೆ ಅವಲಂಬಿತವಾಗಿದೆ. ರಾಜ್ಯಗಳ ಪ್ರಗತಿಯು ಅವರ ಶಾಸಕಾಂಗ ಮತ್ತು ಕಾರ್ಯನಿರ್ವಾಹಕ ಸಂಸ್ಥೆಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಮೂಹಿಕವಾಗಿ ವ್ಯಾಖ್ಯಾನಿಸಲು ನಿರ್ಧರಿಸುವುದರ ಮೇಲೆ ಅವಲಂಬಿತವಾಗಿದೆ. ಮ್ಮ ರಾಜ್ಯದ ಆರ್ಥಿಕ ಪ್ರಗತಿಗೆ ಸಮಿತಿಗಳ ಸಬಲೀಕರಣವು ನಿರ್ಣಾಯಕವಾಗಿದೆ. ನಿಗದಿತ ಗುರಿಗಳನ್ನು ಸಾಧಿಸಲು ಈ ಸಮಿತಿಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತವೆ, ರಾಜ್ಯವು ಹೆಚ್ಚು ಮುನ್ನಡೆಯುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ