AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ

ಅನಂತಪುರಿ ಹಿಂದು ಸಮ್ಮೇಳನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈ ದೇಶವನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನ ಮುಸ್ಲಿಮರು ನಡೆಸುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ಮುಸ್ಲಿಮರ ರೆಸ್ಟೋರೆಂಟ್​ಗಳಲ್ಲಿ ಎಂಜಲು ಉಗುಳಿದ ಆಹಾರವನ್ನು ನೀಡಲಾಗುತ್ತದೆ ಎಂದಿದ್ದರು.

ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ
ಪಿಸಿ ಜಾರ್ಜ್​
TV9 Web
| Edited By: |

Updated on:May 01, 2022 | 11:57 AM

Share

ತಿರುವನಂತಪುರಂ: ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಕೇರಳದ ಹಿರಿಯ ರಾಜಕಾರಣಿ, ಕೇರಳ ಜನಪಕ್ಷಂ (ಜಾತ್ಯತೀತ) ಮುಖಂಡ ಪಿಸಿ ಜಾರ್ಜ್​ ಅವರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಜಾರ್ಜ್​ ಸದ್ಯ ಫೋರ್ಟ್​ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇಂದು ಮುಂಜಾನೆ ಅವರು ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದಲ್ಲಿರುವ ತಮ್ಮ ಮನೆಯಲ್ಲಿ ಇದ್ದರು. ಪೊಲೀಸರು ಅಲ್ಲಿಗೇ ತೆರಳಿ, ಸ್ಟೇಶನ್​ಗೆ ಕರೆದುಕೊಂಡು ಹೋಗಿದ್ದಾರೆ.

ಅನಂತಪುರಿ ಹಿಂದು ಸಮ್ಮೇಳನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಈ ದೇಶವನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನ ಮುಸ್ಲಿಮರು ನಡೆಸುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ಮುಸ್ಲಿಮರ ರೆಸ್ಟೋರೆಂಟ್​ಗಳಲ್ಲಿ ಎಂಜಲು ಉಗುಳಿದ ಆಹಾರವನ್ನು ನೀಡಲಾಗುತ್ತದೆ. ನಾವ್ಯಾಕೆ ಅವರ ಎಂಜಲು ತಿನ್ನಬೇಕು. ಅಷ್ಟೇ ಅಲ್ಲ, ಅನ್ಯಧರ್ಮದ ಮಹಿಳೆಯರು, ಪುರುಷರಲ್ಲಿ ಸಂತಾನ ಸಾಮರ್ಥ್ಯ ಕಡಿಮೆ ಮಾಡುವ ಹುನ್ನಾರವನ್ನೂ ಅವರು ನಡೆಸುತ್ತಿದ್ದಾರೆ. ಇದರಿಂದ ತಮ್ಮ ಜನಾಂಗದವರನ್ನು ಹೆಚ್ಚೆಚ್ಚು ಬೆಳೆಸಬಹುದು ಎಂಬ ಆಶಯ ಅವರದ್ದು. ಇದೆಲ್ಲ ಮುಸ್ಲಿಮರ ಕೈಲಾಗದ ಹೇಡಿತನದ ಸಂಕೇತಗಳು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಮುಸ್ಲಿಮರ ಬಳಿ ಏನೂ ಖರೀದಿಸಬೇಡಿ, ಅವರ ಹೋಟೆಲ್​ಗಳಿಗೆ ಹೋಗಬೇಡಿ. ಸಂಪೂರ್ಣವಾಗಿ ಬಹಿಷ್ಕರಿಸಿ ಎಂದೂ ಕರೆಕೊಟ್ಟಿದ್ದರು. ಇವರ ಭಾಷಣದ ತುಣುಕು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಹಾಗೇ, ಜಾರ್ಜ್​ಗೆ 70ವರ್ಷ ವಯಸ್ಸಾಗಿದ್ದು, ಹಿಂದೆ 33 ವರ್ಷ ಪೂಜ್ನಾರ್​ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರು.

ಜಾರ್ಜ್​ ಅವರ ಹೇಳಿಕೆ ಇದೀಗ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಕೇರಳದ ಆಡಳಿತ ಪಕ್ಷ ಸಿಪಿಐ (ಎಂ) ಮತ್ತು ಇತರ ರಾಜಕೀಯ ಪಕ್ಷಗಳು ಜಾರ್ಜ್​ ಹೇಳಿಕೆಯನ್ನು ಖಂಡಿಸಿವೆ. ಮಾಜಿ ಶಾಸಕ ಜಾರ್ಜ್​ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿವೆ. ಕೇರಳದಲ್ಲಿ ಕೋಮು ಸೌಹಾರ್ದತೆ ಕದಡಲು ಯಾರೇ ಪ್ರಯತ್ನಪಟ್ಟರೂ, ಅವರ ವಿರುದ್ಧ ಜನರೆಲ್ಲ ಒಟ್ಟಾಗಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕರೆ ಕೊಟ್ಟಿದ್ದಾರೆ.  ಹೀಗೆ ಮುಸ್ಲಿಮರನ್ನು ಅವಹೇಳನ ಮಾಡಿದ ಜಾರ್ಜ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ:ರಾಯಚೂರು ಸರ್ಕಾರಿ ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡದಿಂದ ಬ್ಲಾಕ್​ಮೇಲ್​ ಕರೆ! ಹಣಕ್ಕೆ ಬೇಡಿಕೆ

Published On - 11:52 am, Sun, 1 May 22

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ