ರಾಯಚೂರು ಸರ್ಕಾರಿ ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡದಿಂದ ಬ್ಲಾಕ್ಮೇಲ್ ಕರೆ! ಹಣಕ್ಕೆ ಬೇಡಿಕೆ
ಅಧಿಕಾರಿ ಹನುಮಂತ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದೆ. ಇನ್ನು ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಜೊತೆಗೆ ದಾಳಿ ಮಾಡದಿರಲು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.
ರಾಯಚೂರು: ಜಿಲ್ಲೆಯ ಸರ್ಕಾರಿ (Government) ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡದಿಂದ ಬ್ಲಾಕ್ಮೇಲ್ (Blackmail) ಕರೆ ಬಂದಿರುವ ಘಟನೆ ನಡೆದಿದೆ. ಫೇಕ್ ಕಾಲ್ನಿಂದ ಕೆಲವು ಹಿರಿಯ ಅಧಿಕಾರಿಗಳು ಕಂಗಾಲಾಗಿದ್ದಾರೆ. ಅಧಿಕಾರಿ ಹನುಮಂತ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದೆ. ಇನ್ನು ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಜೊತೆಗೆ ದಾಳಿ ಮಾಡದಿರಲು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣ ರಾಯಚೂರು ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ದಾಖಲಾಗಿದೆ.
ಅಬಕಾರಿ ನಿರೀಕ್ಷಕ ಹನುಮಂತ ಎಂಬುವವರ ಜೊತೆ ಆರೋಪಿ ಮಾತನಾಡಿರುವ ಆಡಿಯೋ ಕ್ಲಿಪ್ ಟಿವಿ9 ಗೆ ಲಭ್ಯವಾಗಿದೆ. ಆರೋಪಿಗಳು ರಾಯಚೂರು ಎಸಿಬಿ ಡಿವೈಎಸ್ಪಿ ವಿಜಯ್ ಕುಮಾರ್ ಹೆಸರು ದುರ್ಬಳಕೆ ಮಾಡಿಕೊಂಡು ಅಬಕಾರಿ ಇಲಾಖೆ ಡಿಸಿ ಲಕ್ಷ್ಮೀ ನಾಯಕ್, ಅಬಕಾರಿ ಇಲಾಖೆ ನಿರೀಕ್ಷಕ ಹನುಮಂತ ಗುತ್ತಿಗೆದಾರ್ಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಜೊತೆಗೆ ಜಿ.ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮ ರೆಡ್ಡಿಗೂ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಹನುಮಂತ ಗುತ್ತಿಗೆದಾರ್ಗೆ ಬೆಂಗಳೂರು ಖನೊಜ ಭವನದಲ್ಲಿನ ಅಧಿಕಾರಿಗಳಿಗೆ ಹಣ ನೀಡುವಂತೆ ತಾಕೀತು ಮಾಡಿದ್ದಾರೆ. ನವೀನ್ ಹಾಗೂ ಉಮೇಶ್ ಅನ್ನೋರಿಗೆ ಹಣ ನೀಡುವಂತೆ ಕರೆಯಲ್ಲಿ ಹೇಳಿದ್ದಾರೆ. ಎರಡು ಪ್ರತ್ಯೇಕ ಫೋನ್ ನಂಬರ್ಗೆ ತಲಾ 75 ಸಾವಿರ ಹಣ ಹಾಕಲು ಹೇಳಿದ್ದಾರೆ. ಇತ್ತ ಜಿ.ಪಂಚಾಯತಿ ಅಧಿಕಾರಿ ರಾಮಾರೆಡ್ಡಿಗೂ ಬೇರೆ ನಂಬರ್ನಿಂದ ಕರೆ ಬಂದಿದೆ. ನಿಮ್ಮ ಕೇಸ್ ತನಿಖಾಧಿಕಾರಿ ಶ್ರೀಲಂಕಾ ಪ್ರವಾಸಕ್ಕೆ ಹೋಗುತ್ತಾರೆ. ಅವರಿಗೆ 1.5 ಲಕ್ಷ ರೂ. ಹಣ ಬೇಕು ಅಂದಿದ್ದಾರೆ. ಸದ್ಯ ಈ ಬಗ್ಗೆ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ನಿಜಾಬಣ್ಣ ಹೊರಬರಬೇಕಿದೆ.
ಇದನ್ನೂ ಓದಿ
IPL 2022: ಆ ದಿನ ಮೂರು ಘಟನೆ ನಡೆಯಿತು: ಏಪ್ರಿಲ್ 30, 2022 ದಿನ ನೀವೆಂದಿಗೂ ಮರೆಯಲು ಸಾಧ್ಯವಿಲ್ಲ
Anand Mahindra Birthday: ಜೀವನವನ್ನೇ ಬದಲಿಸಬಲ್ಲ ಆನಂದ್ ಮಹೀಂದ್ರಾರ ಪ್ರೇರಣಾದಾಯಿ ಮಾತುಗಳು ಇಲ್ಲಿವೆ
Published On - 11:37 am, Sun, 1 May 22