ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಬಹುತೇಕ ಸ್ಥಾನಗಳಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದೆ. ಎರಡು ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಎರ್ನಾಕುಳಂ, ಮಲಪ್ಪುರಂ ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದ್ದು, ನಗರ ಮತ್ತು ಗ್ರಾಮಗಳಲ್ಲಿ ಯುಡಿಎಫ್ಗೆ ಹಿನ್ನಡೆಯುಂಟಾಗಿದೆ. ಪಾಲಕ್ಕಾಡ್, ಶೊರ್ನೂರ್ , ಚೆಂಙನ್ನೂರ್ ನಗರಸಭೆಗಳಲ್ಲಿ ಬಿಜೆಪಿ ಲೀಡ್ ಇದೆ. ಕಣ್ಣೂರು ಕಾರ್ಪೊರೇಷನ್ನಲ್ಲಿ ಬಿಜೆಪಿ ಖಾತೆ ತೆರೆದಿದೆ.
ಇತ್ತ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಿಜೆಪಿ ಮತ್ತು ಎಲ್ಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತಾಜಾ ಮಾಹಿತಿ ಪ್ರಕಾರ 21 ಸೀಟುಗಳಲ್ಲಿ ಎಲ್ಡಿಎಫ್ , 3 ಸೀಟುಗಳಲ್ಲಿ ಯುಡಿಎಫ್ ಮತ್ತು 13 ಸೀಟುಗಳಲ್ಲಿ ಎನ್ಡಿಎ, ಒಂದು ಸೀಟಿನಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿ ಎಲ್ಡಿಎಫ್ ಗೆ 43 ಸೀಟುಗಳು ಲಭಿಸಿತ್ತು. ಎಲ್ಡಿಎಫ್ಗೆ 35, ಕಾಂಗ್ರೆಸ್ಗೆ 21 ಸೀಟು ಲಭಿಸಿತ್ತು. ಒಟ್ಟು 100 ಸೀಟುಗಳಿರುವ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಹುಮತ ಗಳಿಸಲು 51 ಸೀಟುಗಳ ಅಗತ್ಯವಿದೆ.
ಕೊಚ್ಚಿ ಕಾರ್ಪೊರೇಷನ್ ಯುಡಿಎಫ್ ಮೇಯರ್ ಅಭ್ಯರ್ಥಿ ಎನ್. ವೇಣುಗೋಪಾಲ್ ಒಂದು ಮತದಿಂದ ಪರಾಭವಗೊಂಡಿದ್ದಾರೆ. ಐಲ್ಯಾಂಡ್ ಡಿವಿಷನ್ನಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಯುಡಿಎಫ್ ಮತ ಮರುಎಣಿಕೆಗೆ ಒತ್ತಾಯಿಸಿದೆ. ಕೊಲ್ಲಂ ಕಾರ್ಪೊರೇಷನ್ನಲ್ಲಿ ಎಲ್ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಬ್ಲಾಕ್, ಜಿಲ್ಲಾ ಪಂಚಾಯತ್ ಗಳಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದೆ.
Early trends of the #Kerala local body poll results:
Gram Panchayats-941
LDF -403
UDF -341
NDA-29
Others-56Block Panchayats-152
LDF-93
UDF-56
NDA-2District Panchayats-14
LDF-11
UDF-3Municipality-86
LDF-38
UDF-39
NDA -3
Others -6Corporations- 6
LDF-8,
UDF-2— ANI (@ANI) December 16, 2020
ತಿರುವನಂತಪುರಂ ಕಾರ್ಪರೇಷನ್ನಲ್ಲಿ ಮೊದಲ ಗೆಲುವು ಎಲ್ಡಿಎಫ್ಗೆ
ತಿರುವನಂತಪುರಂ ಕಾರ್ಪರೇಷನ್ನ ಬಿಮಾಪಳ್ಳಿ ವಾರ್ಡ್ ಎಲ್ಡಿಎಫ್ ಗೆದ್ದು ಕೊಂಡಿದ್ದು, ಹೆಚ್ಚಿನ ವಾರ್ಡ್ಗಳಲ್ಲಿ ಯುಡಿಎಫ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಳಮಶ್ಶೇರಿಯಲ್ಲಿ ಬಿಜೆಪಿ ಖಾತೆ ತೆರೆದಿದ್ದು , ತೃಕ್ಕಾಕ್ಕರ ಅಂಬಲಂ ವಾರ್ಡ್ನಲ್ಲಿ ಪ್ರಮೋದ್ ತೃಕ್ಕಾಕ್ಕರ 151 ಮತಗಳ ಅಂತರದಿಂದ ಗೆದ್ದಿದ್ದಾರೆ. ತಿರುವನಂತಪುರಂ ಜಿಲ್ಲೆ 43 ಪಂಚಾಯತ್ಗಳ ಪೈಕಿ 26 ವಾರ್ಡ್ ಗಳಲ್ಲಿ ಎಲ್ಡಿಎಫ್ , 12 ಪಂಚಾಯತ್ ಗಳಲ್ಲಿ ಯುಡಿಎಫ್ ಮತ್ತು ನಾಲ್ಕು ಪಂಚಾಯತ್ ಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ.
ಪಾಲಕ್ಕಾಡ್ ನಗರಸಭೆಯಲ್ಲಿ ಎಲ್ಡಿಎಫ್ – 3, ಬಿಜೆಪಿ -10, ಯುಡಿಎಫ್- 3 , ಸ್ವತಂತ್ರ ಅಭ್ಯರ್ಥಿ -1, ವೆಲ್ಫೇರ್ ಪಾರ್ಟಿ- 1 ಸೀಟು ಗೆದ್ದುಕೊಂಡಿದೆ. ಶೊರ್ನೂರ್ ನಗರಸಭೆಯಲ್ಲಿ ಸಿಪಿಎಂ – 6 , ಬಿಜೆಪಿ- 5, ಯುಡಿಎಫ್- 1 ಸ್ಥಾನ ಗೆದ್ದು ಕೊಂಡಿದೆ. ಕೊಚ್ಚಿ ಕಾರ್ಪರೇಷನ್ ನಲ್ಲಿ ಯುಡಿಎಫ್ 28 ಡಿವಿಷನ್ಗಳಲ್ಲಿ , ಎಲ್ಡಿಎಫ್ 21 ಡಿವಿಷನ್ಗಳಲ್ಲಿ ಮುನ್ನಡೆ ಸಾಧಿಸಿದೆ. 5 ಡಿವಿಷನ್ಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದೆ.ಮಲಪ್ಪುರಂ ಜಿಲ್ಲಾ ಪಂಚಾಯತ್ ನಲ್ಲಿ ಯುಡಿಎಫ್ 16 ಮತ್ತು ಎಲ್ಡಿಎಫ್ 5 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.
Kerala: BJP workers celebrate in Thiruvananthapuram, where counting is on, for #KeralaLocalBodyElection2020
As per early trends of the local body poll results, the NDA is leading in 13 wards pic.twitter.com/hbvlBZroqt
— ANI (@ANI) December 16, 2020
ಕಣ್ಣೂರು ಕಾರ್ಪರೇಷನ್
ಕಣ್ಣೂರು ಕಾರ್ಪರೇಷನ್ನಲ್ಲಿ ಎಲ್ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದೆ. 2 ಸೀಟುಗಳಲ್ಲಿ ಎಲ್ಡಿಎಫ್, ಯುಡಿಎಫ್ ಮತ್ತುಎನ್ಡಿಎ ತಲಾ ಒಂದು ಸೀಟು ಗೆದ್ದು ಕೊಂಡಿದೆ. ತಳಿಪ್ಪರಂಬ್, ಶ್ರೀಕಂಠಪುರಂ ನಗರ ಸಭೆಗಳನ್ನು ಯುಡಿಎಫ್ ಗೆದ್ದುಕೊಂಡಿದೆ. ಆನಂತೂರ್ , ಕೂತುಪರಂಬ, ಪಯ್ಯನ್ನೂರ್, ಪಾಣೂರ್, ತಲಶ್ಶೇರಿಯಲ್ಲಿ ಎಲ್ಡಿಎಫ್ ವಿಜಯ ಸಾಧಿಸಿದೆ.
ಕಾಸರಗೋಡು ನಗರಸಭೆಯಲ್ಲಿ 38 ವಾರ್ಡ್ ಗಳಲ್ಲಿ ಯುಡಿಎಫ್, ಎನ್ಡಿಎ -14, ಸಿಪಿಎಂ-1, ಲೀಗ್ (ರೆಬೆಲ್ ) -1, ಸಿಪಿಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿ- 1 ಸೀಟು ಮುನ್ನಡೆ ಸಾಧಿಸಿದ್ದಾರೆ.