AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವು ಬಲಿಷ್ಠ ಆರ್ಥಿಕತೆಯ ದೇಶವಾಗಲಿದೆ: ಮುಕೇಶ್ ಅಂಬಾನಿ

ಫೇಸ್​ಬುಕ್ ಸಿಇಒ ಮಾರ್ಕ್ ಝಕರ್​ಬರ್ಗ್ ಜೊತೆಗೆ ಸಂವಾದ ನಡೆಸಿದ ಅವರು ಭಾರತದಲ್ಲಿ ಅರ್ಧದಷ್ಟು ಮಧ್ಯಮ ವರ್ಗದ ಜನರೇ ತುಂಬಿಕೊಂಡಿದ್ದಾರೆ. ಅವರ ಆದಾಯವೂ ವರ್ಷದಿಂದ ವರ್ಷಕ್ಕೆ 3ರಿಂದ 4 ಪಟ್ಟು ಹೆಚ್ಚಳವಾಗಲಿದೆ ಎಂದಿದ್ದಾರೆ.

ಭಾರತವು ಬಲಿಷ್ಠ ಆರ್ಥಿಕತೆಯ ದೇಶವಾಗಲಿದೆ: ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
Follow us
TV9 Web
| Updated By: ganapathi bhat

Updated on:Apr 07, 2022 | 10:41 AM

ದೆಹಲಿ: ಮುಂದಿನ ಎರಡು ದಶಕಗಳಲ್ಲಿ ಭಾರತವು ಬಲಿಷ್ಠ ಆರ್ಥಿಕತೆ ಹೊಂದಿದ ಮೊದಲ ಮೂರು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ. ಭಾರತೀಯರ ತಲಾದಾಯವೂ (Per Capita Income) ದ್ವಿಗುಣಗೊಳ್ಳಲಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

ಫೇಸ್​ಬುಕ್ ಸಿಇಒ ಮಾರ್ಕ್ ಝಕರ್​ಬರ್ಗ್ ಜೊತೆಗೆ ಸಂವಾದ ನಡೆಸಿದ ಅವರು ಭಾರತದಲ್ಲಿ ಅರ್ಧದಷ್ಟು ಮಧ್ಯಮ ವರ್ಗದ ಜನರೇ ತುಂಬಿಕೊಂಡಿದ್ದಾರೆ. ಅವರ ಆದಾಯವೂ ವರ್ಷದಿಂದ ವರ್ಷಕ್ಕೆ 3ರಿಂದ 4 ಪಟ್ಟು ಹೆಚ್ಚಳವಾಗಲಿದೆ ಎಂದಿದ್ದಾರೆ.

ಭಾರತವು ಯುವ ಸಮುದಾಯದ ಪ್ರಭಾವದಿಂದ ಡಿಜಿಟಲ್ ಸಮಾಜವಾಗಲಿದೆ. ಭಾರತೀಯರ ತಲಾ ಆದಾಯ 1,800-2,000 ಡಾಲರ್​ನಿಂದ 5,000 ಡಾಲರ್​ಗೆ (ಸುಮಾರು ₹ 1.5 ಲಕ್ಷದಿಂದ ₹ 3.5ಕ್ಕೆ) ಏರಿಕೆಯಾಗಲಿದೆ. ಫೇಸ್​ಬುಕ್, ಜಿಯೋ ಮತ್ತಿತರ ಕಂಪೆನಿ ಮತ್ತು ಉದ್ಯಮಿಗಳಿಗೆ ಭಾರತದಲ್ಲಿರಲು ಹೇರಳ ಅವಕಾಶಗಳಿವೆ. ಭಾರತದ ಮುಂದಿನ ದಶಕಗಳ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಅವರು ಪಾಲುದಾರರಾಗಬಹುದು ಎಂದು ಅಂಬಾನಿ ತಿಳಿಸಿದ್ದಾರೆ.

ಕೊವಿಡ್ ಸಂಕಷ್ಟವನ್ನು ಭಾರತ ಎದುರಿಸಿದ ಬಗ್ಗೆಯೂ ಮಾತನಾಡಿದ ಅಂಬಾನಿ, ಭಾರತವು ಸದೃಢವಾಗಿ ಕೊರೊನಾವನ್ನು ಎದುರಿಸಿದೆ. ಒಂದು ಸಮಸ್ಯೆಯಿಂದ ಸೋತು ಕೊರಗುವುದು ಬಹುಶಃ ಭಾರತೀಯರ ಗುಣದಲ್ಲಿ ಇಲ್ಲ. ಪ್ರತಿ ಸಮಸ್ಯೆಯೂ ಭಾರತದಲ್ಲಿ ಹೊಸ ಅವಕಾಶಗಳಿಗೆ ದಾರಿಮಾಡಿಕೊಟ್ಟಿದೆ. ಮುಂದೆ, 2021ರ ಮೊದಲಾರ್ಧದಲ್ಲಿ ಕೊವಿಡ್ ಲಸಿಕೆ ವಿತರಣೆ ನಡೆಯಲಿದೆ. ವಿಶ್ವದ ಅತ್ಯಂತ ದೊಡ್ಡ ಲಸಿಕೆ ವಿತರಣಾ ಕಾರ್ಯದಲ್ಲೂ ಭಾರತ ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ ಕಾಲದಲ್ಲಿ ರಿಲಯನ್ಸ್ ಸಮೂಹ ಸಂಸ್ಥೆ ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡ ಅವರು, ಕೊವಿಡ್ ಆಸ್ಪತ್ರೆ, ಪಿಪಿಇ ಕಿಟ್, ಊಟೋಪಚಾರ, ಜಿಯೊ ಮೂಲಕ ಸಂಪರ್ಕ, ವರ್ಕ್​ ಫ್ರಮ್ ಹೋಮ್​ಗೆ ಸಹಕಾರ ಹೀಗೆ ಪ್ರತಿ ವಿಭಾಗದಲ್ಲೂ ರಿಲಯನ್ಸ್ ಸಮೂಹ ಜನರೊಂದಿಗೆ ಜೊತೆಯಾಗಿದೆ ಎಂದು ಹೇಳಿದ್ದಾರೆ. ಕಳೆದ ನಾಲ್ಕೈದು ವರ್ಷಗಳ ಹಿಂದೆ ಈ ಸಮಸ್ಯೆ ಎದುರಾಗಿತ್ತಿದ್ದರೆ ಈಗಿನಂತೆ ಕೊವಿಡ್ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಎಂದು ಸಂಶಯ ವ್ಯಕ್ತಪಡಿಸಿದ ಅಂಬಾನಿ, ಡಿಜಿಟಲ್ ಇಂಡಿಯಾ ಮೂಲಕ ಈಗ ಸಂಪರ್ಕ ಸುಲಭ ಸಾಧ್ಯವಾಗಿದೆ ಎಂದಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಭಾರತದ ವಿದೇಶಿ ಬಂಡವಾಳ ಹೂಡಿಕೆ (FDI) ಐತಿಹಾಸಿಕ ಏರಿಕೆ ಕಂಡಿದೆ. ಜಿಯೊ ಮತ್ತು ಫೆಸ್​ಬುಕ್ ಸಂಸ್ಥೆಗಳು ಲಾಕ್​ಡೌನ್ ನಡುವೆಯೇ ಒಪ್ಪಂದ ಮಾಡಿಕೊಂಡು ಜೊತೆಯಾಗಿದ್ದು ಅದಕ್ಕೆ ತಾಜಾ ಉದಾಹರಣೆ ಎಂದಿದ್ದಾರೆ. ಫೇಸ್​ಬುಕ್ ಸಂಸ್ಥೆಯು ಜಿಯೊ ಸಂಸ್ಥೆಯ ಮೇಲೆ ಭಾರಿ ಮೊತ್ತವನ್ನು ಹೂಡಿಕೆ ಮಾಡಿತ್ತು.

ಈ ತಂತ್ರಜ್ಞಾನ ಮತ್ತು ತಾಂತ್ರಿಕತೆಯು ಭಾರತದ ಸಣ್ಣ ಉದ್ಯಮಗಳಿಗೆ ಮತ್ತು ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಉತ್ತಮ ಸಮೃದ್ಧಿ ಮತ್ತು ಮೌಲ್ಯವನ್ನು ತಂದುಕೊಡಲಿದೆ. ಈ ಮೂಲಕ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಅಂಬಾನಿ ಹೇಳಿದ್ದಾರೆ. ಸಮಾನತೆ ಸಾಧಿಸುವಲ್ಲಿಯೂ ಭಾರತ ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಅವಕಾಶ ಇರುವ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಅಂಬಾನಿ ಬಾಯ್ಕಾಟ್, ಅದಾನಿ ಬಾಯ್ಕಾಟ್ ಅಂತಿರೋ ರೈತರು: ಜಿಯೋ ಸಿಮ್​ನಿಂದ ಬೇರೆ ನೆಟ್​ವರ್ಕ್​​ಗೆ ಬದಲು

Published On - 9:54 pm, Tue, 15 December 20

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ