AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್​ಬಿಟ್ಟ BJP

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ   ಬಹುತೇಕ ಸ್ಥಾನಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದ್ದು, ಕಣ್ಣೂರು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆದಿದೆ.

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್​ಬಿಟ್ಟ BJP
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: ಸಾಧು ಶ್ರೀನಾಥ್​|

Updated on: Dec 16, 2020 | 12:22 PM

Share

ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಬಹುತೇಕ ಸ್ಥಾನಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ. ಎರಡು ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ಎರ್ನಾಕುಳಂ, ಮಲಪ್ಪುರಂ ಜಿಲ್ಲೆಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದ್ದು,  ನಗರ ಮತ್ತು ಗ್ರಾಮಗಳಲ್ಲಿ ಯುಡಿಎಫ್​ಗೆ ಹಿನ್ನಡೆಯುಂಟಾಗಿದೆ. ಪಾಲಕ್ಕಾಡ್, ಶೊರ್ನೂರ್ , ಚೆಂಙನ್ನೂರ್ ನಗರಸಭೆಗಳಲ್ಲಿ ಬಿಜೆಪಿ ಲೀಡ್ ಇದೆ. ಕಣ್ಣೂರು ಕಾರ್ಪೊರೇಷನ್​​ನಲ್ಲಿ ಬಿಜೆಪಿ ಖಾತೆ ತೆರೆದಿದೆ.

ಇತ್ತ ತಿರುವನಂತಪುರಂ ಕಾರ್ಪೊರೇಷನ್​ನಲ್ಲಿ ಬಿಜೆಪಿ ಮತ್ತು ಎಲ್​​ಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತಾಜಾ ಮಾಹಿತಿ ಪ್ರಕಾರ 21 ಸೀಟುಗಳಲ್ಲಿ ಎಲ್​​ಡಿಎಫ್ , 3 ಸೀಟುಗಳಲ್ಲಿ ಯುಡಿಎಫ್ ಮತ್ತು 13 ಸೀಟುಗಳಲ್ಲಿ ಎನ್​​ಡಿಎ, ಒಂದು ಸೀಟಿನಲ್ಲಿ ಸ್ವತಂತ್ರ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿ ಎಲ್​​ಡಿಎಫ್ ಗೆ 43 ಸೀಟುಗಳು ಲಭಿಸಿತ್ತು. ಎಲ್​​ಡಿಎಫ್​ಗೆ 35, ಕಾಂಗ್ರೆಸ್​ಗೆ 21 ಸೀಟು ಲಭಿಸಿತ್ತು. ಒಟ್ಟು 100 ಸೀಟುಗಳಿರುವ ತಿರುವನಂತಪುರಂ ಕಾರ್ಪೊರೇಷನ್​ನಲ್ಲಿ ಬಹುಮತ ಗಳಿಸಲು 51 ಸೀಟುಗಳ ಅಗತ್ಯವಿದೆ.

ಕೊಚ್ಚಿ ಕಾರ್ಪೊರೇಷನ್ ಯುಡಿಎಫ್ ಮೇಯರ್ ಅಭ್ಯರ್ಥಿ ಎನ್. ವೇಣುಗೋಪಾಲ್ ಒಂದು ಮತದಿಂದ ಪರಾಭವಗೊಂಡಿದ್ದಾರೆ. ಐಲ್ಯಾಂಡ್ ಡಿವಿಷನ್​ನಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಯುಡಿಎಫ್ ಮತ ಮರುಎಣಿಕೆಗೆ ಒತ್ತಾಯಿಸಿದೆ. ಕೊಲ್ಲಂ ಕಾರ್ಪೊರೇಷನ್​ನಲ್ಲಿ ಎಲ್​​ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಬ್ಲಾಕ್, ಜಿಲ್ಲಾ ಪಂಚಾಯತ್ ಗಳಲ್ಲಿ ಎಲ್​​ಡಿಎಫ್ ಮುನ್ನಡೆ ಸಾಧಿಸಿದೆ.

ತಿರುವನಂತಪುರಂ ಕಾರ್ಪರೇಷನ್​ನಲ್ಲಿ ಮೊದಲ ಗೆಲುವು ಎಲ್​​ಡಿಎಫ್​ಗೆ ತಿರುವನಂತಪುರಂ ಕಾರ್ಪರೇಷನ್​​ನ ಬಿಮಾಪಳ್ಳಿ ವಾರ್ಡ್ ಎಲ್​ಡಿಎಫ್ ಗೆದ್ದು ಕೊಂಡಿದ್ದು, ಹೆಚ್ಚಿನ ವಾರ್ಡ್​ಗಳಲ್ಲಿ ಯುಡಿಎಫ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಳಮಶ್ಶೇರಿಯಲ್ಲಿ ಬಿಜೆಪಿ ಖಾತೆ ತೆರೆದಿದ್ದು , ತೃಕ್ಕಾಕ್ಕರ ಅಂಬಲಂ ವಾರ್ಡ್​ನಲ್ಲಿ ಪ್ರಮೋದ್ ತೃಕ್ಕಾಕ್ಕರ 151 ಮತಗಳ ಅಂತರದಿಂದ ಗೆದ್ದಿದ್ದಾರೆ. ತಿರುವನಂತಪುರಂ ಜಿಲ್ಲೆ 43 ಪಂಚಾಯತ್​ಗಳ ಪೈಕಿ 26 ವಾರ್ಡ್​ ಗಳಲ್ಲಿ ಎಲ್​​ಡಿಎಫ್ , 12 ಪಂಚಾಯತ್ ಗಳಲ್ಲಿ ಯುಡಿಎಫ್ ಮತ್ತು ನಾಲ್ಕು ಪಂಚಾಯತ್ ಗಳಲ್ಲಿ ಎನ್​​ಡಿಎ ಮುನ್ನಡೆ ಸಾಧಿಸಿದೆ.

ಪಾಲಕ್ಕಾಡ್ ನಗರಸಭೆಯಲ್ಲಿ ಎಲ್​​ಡಿಎಫ್ – 3, ಬಿಜೆಪಿ -10, ಯುಡಿಎಫ್- 3 , ಸ್ವತಂತ್ರ ಅಭ್ಯರ್ಥಿ -1, ವೆಲ್​ಫೇರ್ ಪಾರ್ಟಿ- 1 ಸೀಟು ಗೆದ್ದುಕೊಂಡಿದೆ. ಶೊರ್ನೂರ್ ನಗರಸಭೆಯಲ್ಲಿ ಸಿಪಿಎಂ – 6 , ಬಿಜೆಪಿ- 5, ಯುಡಿಎಫ್- 1 ಸ್ಥಾನ ಗೆದ್ದು ಕೊಂಡಿದೆ. ಕೊಚ್ಚಿ ಕಾರ್ಪರೇಷನ್​​ ನಲ್ಲಿ ಯುಡಿಎಫ್ 28 ಡಿವಿಷನ್​ಗಳಲ್ಲಿ , ಎಲ್​​ಡಿಎಫ್ 21 ಡಿವಿಷನ್​​ಗಳಲ್ಲಿ ಮುನ್ನಡೆ ಸಾಧಿಸಿದೆ. 5 ಡಿವಿಷನ್​ಗಳಲ್ಲಿ ಎನ್​​ಡಿಎ ಮುನ್ನಡೆ ಸಾಧಿಸಿದೆ.ಮಲಪ್ಪುರಂ ಜಿಲ್ಲಾ ಪಂಚಾಯತ್ ನಲ್ಲಿ ಯುಡಿಎಫ್ 16 ಮತ್ತು ಎಲ್​​ಡಿಎಫ್ 5 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.

ಕಣ್ಣೂರು ಕಾರ್ಪರೇಷನ್ ಕಣ್ಣೂರು ಕಾರ್ಪರೇಷನ್​​ನಲ್ಲಿ ಎಲ್​​ಡಿಎಫ್ – ಯುಡಿಎಫ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದೆ. 2 ಸೀಟುಗಳಲ್ಲಿ ಎಲ್​​ಡಿಎಫ್, ಯುಡಿಎಫ್ ಮತ್ತುಎನ್​​ಡಿಎ ತಲಾ ಒಂದು ಸೀಟು ಗೆದ್ದು ಕೊಂಡಿದೆ. ತಳಿಪ್ಪರಂಬ್, ಶ್ರೀಕಂಠಪುರಂ ನಗರ ಸಭೆಗಳನ್ನು ಯುಡಿಎಫ್ ಗೆದ್ದುಕೊಂಡಿದೆ. ಆನಂತೂರ್ , ಕೂತುಪರಂಬ, ಪಯ್ಯನ್ನೂರ್, ಪಾಣೂರ್, ತಲಶ್ಶೇರಿಯಲ್ಲಿ ಎಲ್​​ಡಿಎಫ್ ವಿಜಯ ಸಾಧಿಸಿದೆ.

ಕಾಸರಗೋಡು ನಗರಸಭೆಯಲ್ಲಿ 38 ವಾರ್ಡ್​​ ಗಳಲ್ಲಿ ಯುಡಿಎಫ್, ಎನ್​​ಡಿಎ -14, ಸಿಪಿಎಂ-1, ಲೀಗ್ (ರೆಬೆಲ್ ) -1, ಸಿಪಿಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿ- 1 ಸೀಟು ಮುನ್ನಡೆ ಸಾಧಿಸಿದ್ದಾರೆ.

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?