Kerala Corona Cases: ಕೇರಳದಲ್ಲಿ 29,322 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಪತ್ತೆ; 131 ಮಂದಿ ಸಾವು

| Updated By: ganapathi bhat

Updated on: Sep 03, 2021 | 8:54 PM

Covid19: ಕೇರಳದ ಜಿಲ್ಲೆಗಳ ಪೈಕಿ ತ್ರಿಶ್ಶೂರ್​ನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು (3,530) ವರದಿಯಾಗಿದೆ. ಬಳಿಕ, ಎರ್ನಾಕುಲಂ (3,435) ಹಾಗೂ ಕೋಯಿಕ್ಕೋಡ್ (3,344) ಇದೆ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

Kerala Corona Cases: ಕೇರಳದಲ್ಲಿ 29,322 ಜನರಿಗೆ ಹೊಸದಾಗಿ ಕೊರೊನಾ ಸೋಂಕು ಪತ್ತೆ; 131 ಮಂದಿ ಸಾವು
ಸಾಂಕೇತಿಕ ಚಿತ್ರ
Follow us on

ತಿರುವನಂತಪುರಂ: ಭಾರತದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಕೇರಳದಲ್ಲಿ ಮಾತ್ರ ಕೊವಿಡ್19 ಸೋಂಕಿತರ ಸಂಕ್ಯೆ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಕೊವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದ್ದು, ದೇಶಮಟ್ಟದಲ್ಲಿ ಕೇರಳ ಕೊರೊನಾ ಹಾಟ್​ಸ್ಪಾಟ್ ಎನಿಸಿಕೊಂಡಿದೆ. ಇಂದು (ಸಪ್ಟೆಂಬರ್ 3) ಕೇರಳದಲ್ಲಿ 29,322 ಹೊಸ ಕೊರೊನಾ ಪ್ರಕರಣಗಳು ವರದಿ ಆಗಿದೆ. 1.63 ಲಕ್ಷ ಮಾದರಿ ಪರೀಕ್ಷೆಯಲ್ಲಿ 29,322 ಮಂದಿ ಪಾಸಿಟಿವ್ ಆಗಿದ್ದು, ಪಾಸಿಟಿವಿಟಿ ದರ 17.91 ರಷ್ಟಿದೆ.

ಕೊರೊನಾ ಸೋಂಕಿನಿಂದ ಕೇರಳ ರಾಜ್ಯದಲ್ಲಿ ಶುಕ್ರವಾರ 131 ಮಂದಿ ಬಲಿ ಆಗಿದ್ದಾರೆ. ಆ ಮೂಲಕ, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 21,280 ಕ್ಕೆ ಏರಿಕೆ ಆಗಿದೆ. ಕೇರಳದಲ್ಲಿ ಇದುವರೆಗಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 41,51,455 ಕ್ಕೆ ಏರಿಕೆ ಆಗಿದೆ. ಇದೇ ವೇಳೆ, 22,938 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಅದರಂತೆ ಕೊವಿಡ್​ನಿಂದ ಗುಣಮುಖ ಆದವರ ಒಟ್ಟು ಸಂಖ್ಯೆ 38,83,183 ಆಗಿದೆ. 2,46,437 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದುವರೆಗೆ ಕೇರಳದಲ್ಲಿ 3,20,65,533 ಮಾದರಿಗಳನ್ನು ಕೊವಿಡ್19 ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದ ಜಿಲ್ಲೆಗಳ ಪೈಕಿ ತ್ರಿಶ್ಶೂರ್​ನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು (3,530) ವರದಿಯಾಗಿದೆ. ಬಳಿಕ, ಎರ್ನಾಕುಲಂ (3,435) ಹಾಗೂ ಕೋಯಿಕ್ಕೋಡ್ (3,344) ಇದೆ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಶುಕ್ರವಾರ ವರದಿ ಆಗಿರುವ ಸೋಂಕಿತರ ಪೈಕಿ 79 ಮಂದಿ ಹೊರರಾಜ್ಯದಿಂದ ಆಗಮಿಸಿದವರಾಗಿದ್ದಾರೆ. 27,874 ಮಂದಿ ಸ್ಥಳೀಯ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ಉಳಿದಂತೆ 1,251 ಮಂದಿಗೆ ಹೇಗೆ ಸೋಂಕು ತಗುಲಿದೆ ಎಂದು ತಿಳಿದುಬರಬೇಕಿದೆ. ಇಂದಿನ ಕೊವಿಡ್ ಪ್ರಕರಣಗಳ ಪೈಕಿ 118 ಆರೋಗ್ಯ ಕಾರ್ಯಕರ್ತರು ಕೂಡ ಇದ್ದಾರೆ ಎಂದು ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ಭಾರತದ ಕೊರೊನಾ ಪ್ರಕರಣಗಳಲ್ಲಿ ಕೇರಳದ್ದೇ ಬಹುಪಾಲು
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,352 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 366 ಸಾವುಗಳು ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟಾರೆ ಕೊವಿಡ್ ಪ್ರಕರಣ 3,29,03,289 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 4,39,895 ಕ್ಕೆ ಏರಿದೆ. 34,791 ಮಂದಿ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳು ಈಗ 3,99,778 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಶೇಕಡಾ 97.45 ರಷ್ಟಿದೆ.ಭಾರತದಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಸಾವುಗಳಲ್ಲಿ, ಕೇರಳವು ನಿನ್ನೆ 32,097 ಪ್ರಕರಣಗಳನ್ನು ಮತ್ತು 188 ಸಾವುಗಳನ್ನು ದಾಖಲಿಸಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 1220 ಮಂದಿಗೆ ಸೋಂಕು, ದಕ್ಷಿಣ ಕನ್ನಡದಲ್ಲಿ ತಗ್ಗುತ್ತಿಲ್ಲ ಸೋಂಕಿತರ ಸಂಖ್ಯೆ

ಇದನ್ನೂ ಓದಿ: Coronavirus cases in India: ದೇಶದಲ್ಲಿ 45,352 ಹೊಸ ಕೊವಿಡ್ ಪ್ರಕರಣ, 4 ಲಕ್ಷ ಸಮೀಪಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ

(Kerala records 29,322 new Covid-19 cases 131 deaths on September 3)