ಕೇರಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ, ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆ

Omicron variant ಕೇರಳದ ಒಮಿಕ್ರಾನ್ ರೋಗಿಯು ಡಿಸೆಂಬರ್ 8 ರಂದು ಪಾಸಿಟಿವ್  ಪರೀಕ್ಷೆ ನಡೆಸಿದ್ದರು. ಅವರು ಯುಕೆಯಿಂದ ರಾಜ್ಯಕ್ಕೆ ಮರಳಿದ್ದರು. ವಿಮಾನದಲ್ಲಿ ಅವರೊಂದಿಗೆ ಇದ್ದವರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಕೇರಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ, ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 12, 2021 | 7:51 PM

ದೆಹಲಿ: ಒಮಿಕ್ರಾನ್ (Omicron) ರೂಪಾಂತರದ ತನ್ನ ಮೊದಲ ಕೊವಿಡ್ ಪ್ರಕರಣವನ್ನು ಕೇರಳವು (kerala) ಭಾನುವಾರ ವರದಿ ಮಾಡಿದ್ದು ದೇಶದಲ್ಲೀಗ ಒಟ್ಟು ಒಮಿಕ್ರಾನ್ ಪ್ರಕರಣದ ಸಂಖ್ಯೆ 38ಕ್ಕೇರಿದೆ. ಹಿಂದಿನ ದಿನ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಚಂಡೀಗಢದಲ್ಲಿ ಈ ಹೊಸ ರೂಪಾಂತರದ ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳದ ಒಮಿಕ್ರಾನ್ ರೋಗಿಯು ಡಿಸೆಂಬರ್ 8 ರಂದು ಪಾಸಿಟಿವ್  ಪರೀಕ್ಷೆ ನಡೆಸಿದ್ದರು. ಅವರು ಯುಕೆಯಿಂದ ರಾಜ್ಯಕ್ಕೆ ಮರಳಿದ್ದರು. ವಿಮಾನದಲ್ಲಿ ಅವರೊಂದಿಗೆ ಇದ್ದವರ ಮೇಲೆ ತೀವ್ರ ನಿಗಾ ಇಡಲಾಗಿದೆ. ವಿಮಾನದಲ್ಲಿ ಮುಂದಿನ ಸೀಟಿನಲ್ಲಿದ್ದವರು ಹೆಚ್ಚಿನ ಅಪಾಯದ ವರ್ಗದ ದೇಶದವರು ಎಂದು ವರದಿಯಾಗಿದೆ. ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅವರ ಪತ್ನಿ ಮತ್ತು ಅತ್ತೆ ಕೊವಿಡ್ ಪಾಸಿಟಿವ್ ಆಗಿದ್ದು ಅವರನ್ನು ಪ್ರತ್ಯೇಕಿಸಿ ನಿಗಾ ಇರಿಸಲಾಗಿದೆ.SARS-CoV-2 ನ ಹೊಸ ರೂಪಾಂತರವನ್ನು ಮೊದಲು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಯಿತು. ನವೆಂಬರ್ 26 ರಂದು, ವಿಶ್ವ ಆರೋಗ್ಯ ಸಂಸ್ಥೆಯು ಒಮಿಕ್ರಾನ್ ಕಾಳಜಿಯ ರೂಪಾಂತರವಾಗಿದೆ ಎಂದು ಘೋಷಿಸಿತು. ಭಾರತದ ಮೊದಲ ಒಮಿಕ್ರಾನ್ ಪ್ರಕರಣಗಳು ಡಿಸೆಂಬರ್ 2 ರಂದು ಕರ್ನಾಟಕದಲ್ಲಿ ದೃಢಪಟ್ಟಿತ್ತು

ಭಾರತದಲ್ಲಿ ಇದುವರೆಗೆ ಯಾವ ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣಗಳಿವೆ? ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಆಂಧ್ರಪ್ರದೇಶ, ಪಂಜಾಬ್ ಮತ್ತು ಈಗ ಕೇರಳದಲ್ಲಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರವು ಇಲ್ಲಿಯವರೆಗೆ ಈ ರೂಪಾಂತರದ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಹೊಂದಿದೆ. ರಾಜ್ಯವೊಂದರಲ್ಲೇ 18 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಭಾನುವಾರ ಕರ್ನಾಟಕ, ಮಹಾರಾಷ್ಟ್ರ, ಚಂಡೀಗಢ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ತಲಾ ಒಂದು ಪ್ರಕರಣದಂತೆ ಐದು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

ಅಂತರರಾಷ್ಟ್ರೀಯ ಪ್ರಯಾಣ ಮತ್ತು ಒಮಿಕ್ರಾನ್ ಭಾರತದಲ್ಲಿನ ಬಹುತೇಕ ಎಲ್ಲಾ ಒಮಿಕ್ರಾನ್ ರೋಗಿಗಳು ವಿದೇಶಿ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ. ಒಮಿಕ್ರಾನ್ ಕಳವಳಗಳ ನಡುವೆ, ಭಾರತವು ಡಿಸೆಂಬರ್ 15 ರಿಂದ ನಿಯಮಿತ ಅಂತರಾಷ್ಟ್ರೀಯ ವಿಮಾನಗಳನ್ನು ಪುನರಾರಂಭಿಸುವ ತನ್ನ ಹಿಂದಿನ ನಿರ್ಧಾರವನ್ನು ತಡೆಹಿಡಿಯಿತು. ಆದರೆ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಯಾವುದೇ ನಿಷೇಧ ಹೇರಿಲ್ಲ. ದೇಶಗಳನ್ನು “ಅಪಾಯದಲ್ಲಿರುವ” ಪಟ್ಟಿಯಲ್ಲಿ ಇರಿಸಲಾಗಿದೆ. ಇದರಿಂದ ಆ ದೇಶಗಳಿಂದ ಬರುವ ಪ್ರಯಾಣಿಕರನ್ನು ಟ್ರ್ಯಾಕ್ ಮಾಡಬಹುದು, ಪರೀಕ್ಷಿಸಬಹುದು ಮತ್ತು ಕ್ವಾರಂಟೈನ್ ಮಾಡಬಹುದು.

ಇದನ್ನೂ ಓದಿ: Omicron: ಆಂಧ್ರಪ್ರದೇಶ, ಚಂಡೀಗಡದ ಬೆನ್ನಲ್ಲೇ ನಾಗ್ಪುರದಲ್ಲೂ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ; ದೇಶದಲ್ಲಿ 37ಕ್ಕೇರಿದ ಸೋಂಕಿತರ ಸಂಖ್ಯೆ

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?