ಕಾಂಗ್ರೆಸ್​ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ..ಅಲ್ಲಿದ್ದು ಪ್ರಯೋಜನ ಇಲ್ಲ: ಪಕ್ಷ ತೊರೆದ ಹಿರಿಯ ನಾಯಕ ಎ.ವಿ.ಗೋಪಿನಾಥನ್​

| Updated By: Lakshmi Hegde

Updated on: Aug 30, 2021 | 6:12 PM

ಕೇರಳ ವಿಧಾನಸಭೆ ಚುನಾವಣೆಗೂ ಮೊದಲೇ ಗೋಪಿನಾಥನ್​ ಬಂಡಾಯವೆದ್ದಿದ್ದರು. ಆದರೆ ಆಗ ಪಕ್ಷದ ಹಿರಿಯರು, ಅವರಿಗೆ ಪಾಲಕ್ಕಡ್​​ ಜಿಲ್ಲಾ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಟು ಸಮಾಧಾನಪಡಿಸಿದ್ದರು.

ಕಾಂಗ್ರೆಸ್​ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ..ಅಲ್ಲಿದ್ದು ಪ್ರಯೋಜನ ಇಲ್ಲ: ಪಕ್ಷ ತೊರೆದ ಹಿರಿಯ ನಾಯಕ ಎ.ವಿ.ಗೋಪಿನಾಥನ್​
ಎ.ವಿ.ಗೋಪಿನಾಥನ್​
Follow us on

ಕೇರಳ ಕಾಂಗ್ರೆಸ್​ ಹಿರಿಯ ನಾಯಕ, ಪಾಲಕ್ಕಡ್​​ ಜಿಲ್ಲಾ ಕಾಂಗ್ರೆಸ್​ ಸಮಿತಿ ಮಾಜಿ (DCC)ಅಧ್ಯಕ್ಷ ಎ.ವಿ.ಗೋಪಿನಾಥನ್​ ಅವರಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ ಸಲ್ಲಿಸಿರುವ ಎ.ವಿ.ಗೋಪಿನಾಥನ್ (AV Gopinathan)​, ಸದ್ಯಕ್ಕಂತೂ ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಅಲತ್ತೂರಿನ ಮಾಜಿ ಶಾಸಕ, ಪೆರಿಂಗೊಟ್ಟುಕುರಿಸ್ಸಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಗೋಪಿನಾಥನ್ ಇಷ್ಟು ದಿನಗಳ ತಮ್ಮ ಇಡೀ ಜೀವನವನ್ನು ಕಾಂಗ್ರೆಸ್​ಗೆ ಮುಡಿಪಾಗಿಟ್ಟಿದ್ದರು. ಆದರೆ, ಇದೀಗ ಕಾಂಗ್ರೆಸ್​​ನಿಂದ ತುಂಬ ಬೇಸರಗೊಂಡು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕೇರಳದ 14 ಜಿಲ್ಲೆಗಳ ಕಾಂಗ್ರೆಸ್​​ ಸಮಿತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಬೇಸತ್ತಿರುವ ಅವರು, ಕಾಂಗ್ರೆಸ್ ನಾಯಕತ್ವದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ. ಹಾಗಾಗಿ ಇಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾನು ಕಾಂಗ್ರೆಸ್​ನಲ್ಲಿ ಸುಮಾರು 50 ವರ್ಷಗಳಿಂದ ಇದ್ದೇನೆ. ಆದರೆ ನಾನೀಗ ಎಲ್ಲ ಭರವಸೆಯನ್ನೂ ಕಳೆದುಕೊಂಡಿದ್ದೇನೆ. ಹಾಗಾಗಿ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ರಾಜೀನಾಮೆ ಸಂದರ್ಭದಲ್ಲಿ ಪಾಲಕ್ಕಡ್​​ನಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ?
ಕೇರಳ ವಿಧಾನಸಭೆ ಚುನಾವಣೆಗೂ ಮೊದಲೇ ಗೋಪಿನಾಥನ್​ ಬಂಡಾಯವೆದ್ದಿದ್ದರು. ಆದರೆ ಆಗ ಪಕ್ಷದ ಹಿರಿಯರು, ಅವರಿಗೆ ಪಾಲಕ್ಕಡ್​​ ಜಿಲ್ಲಾ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಟು ಸಮಾಧಾನಪಡಿಸಿದ್ದರು. ಆದರೆ ಈಗೆರಡು ದಿನಗಳ  ಹಿಂದೆ ಕಾಂಗ್ರೆಸ್​ ಪಕ್ಷ, 14 ಜಿಲ್ಲೆಗಳ ಕಾಂಗ್ರೆಸ್​ ಸಮಿತಿಗೆ ಹೊಸ ಅಧ್ಯಕ್ಷರನ್ನು ಘೋಷಿಸಿತ್ತು. ಅದರ ಪಟ್ಟಿ ನೋಡಿ ಗೋಪಿನಾಥನ್​ ತುಂಬ ಬೇಜಾರಾಗಿದ್ದರು. ಯಾಕೆಂದರೆ ಪಾಲಕ್ಕಡ್​ಗೆ ಗೋಪಿನಾಥನ್​ ಬದಲಿಗೆ ತಂಕಪ್ಪನ್​ ಎಂಬುವನ್ನು ನೇಮಕ ಮಾಡಲಾಗಿತ್ತು. ಇವರು ಜಿಲ್ಲೆಯಲ್ಲಿ ಅಷ್ಟೇನೂ ಪರಿಚಿತರಾಗಿರಲಿಲ್ಲ. ಹೀಗಾಗಿ ಸಹಜವಾಗಿಯೇ ಗೋಪಿನಾಥನ್​ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಈ ವಿಚಾರವಾಗಿ ಮಾಜಿ ಶಾಸಕ ಅನಿಲ್​ ಅಕ್ಕಾರೆಯವರನ್ನೂ ಗೋಪಿನಾಥನ್​ ಟೀಕಿಸಿದ್ದಾರೆ.

ಇದನ್ನೂ ಓದಿ: Tokyo Paralympics: ಅಪ್ಪನ ಆಸೆಯನ್ನು ಈಡೇರಿಸಿದ್ದೇನೆ; ಪದಕವನ್ನು ದಿವಂಗತ ತಂದೆಗೆ ಅರ್ಪಿಸಿದ ದೇವೇಂದ್ರ ಜಜಾರಿಯಾ

Tomato Rate: ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಅಪ್ಪಚ್ಚಿ; ಕೇಜಿಗೆ 4 ರೂಪಾಯಿಯಂತೆ ಪಾತಾಳ ತಲುಪಿದ ದರ