ದೇಶಕ್ಕಾಗಿ ಖಾದಿ, ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್, ಮೋದಿ ಹೇಳುವುದೊಂದು ಮಾಡುವುದೊಂದು: ರಾಹುಲ್ ಟೀಕೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2022 | 5:46 PM

ಪ್ರಧಾನಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೇಶಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್. ಎಂದಿನಂತೆ ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.

ದೇಶಕ್ಕಾಗಿ ಖಾದಿ, ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್, ಮೋದಿ ಹೇಳುವುದೊಂದು ಮಾಡುವುದೊಂದು: ರಾಹುಲ್ ಟೀಕೆ
ರಾಹುಲ್ ಗಾಂಧಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Rahul Gandhi) ಅವರ ನುಡಿ ಮತ್ತು ನಡೆ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾನುವಾರ ನರೇಂದ್ರ ಮೋದಿ ಅವರ ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ಭಾರತದ ಕನಸನ್ನು ಸಾಧಿಸಲು ಖಾದಿ ಸ್ಫೂರ್ತಿಯ ಮೂಲವಾಗಬಹುದು ಎಂದು ಪ್ರಧಾನಿ ಶನಿವಾರ ಹೇಳಿದ್ದಾರೆ. ಪ್ರಧಾನಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ದೇಶಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್. ಎಂದಿನಂತೆ ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ. ರಾಷ್ಟ್ರಧ್ವಜವು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಲ್ಪಟ್ಟ, ಹತ್ತಿ / ಪಾಲಿಸ್ಟರ್ / ಉಣ್ಣೆ / ರೇಷ್ಮೆ ಖಾದಿ ಬಂಟಿಂಗ್‌ನಿಂದ ಮಾಡಬಹುದು ಎಂದು ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಲಾಗಿದೆ. ಆದಾಗ್ಯೂ ಧ್ವ ಜ ಸಂಹಿತೆಗೆ ತಿದ್ದುಪಡಿ ಮಾಡಿರುವುದನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಇದಕ್ಕಿಂತ ಮುನ್ನ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿಸಲಾಗಿಲ್ಲ.


ಅಹಮದಾಬಾದ್‌ನ ಸಬರಮತಿ ನದಿ ತೀರದಲ್ಲಿ ನಡೆದ ‘ಖಾದಿ ಉತ್ಸವ’ (ಖಾದಿ ಉತ್ಸವ) ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾಭಿಮಾನದ ಸಂಕೇತವಾದ ಖಾದಿ ಅಥವಾ ಹೋಮ್‌ಸ್ಪನ್ ಅನ್ನು ಸ್ವಾತಂತ್ರ್ಯದ ನಂತರ ಕೀಳು ಉತ್ಪನ್ನವೆಂದು ಪರಿಗಣಿಸಲಾಗಿದೆ ಎಂದು ಶನಿವಾರ ಹೇಳಿದ್ದಾರೆ.
ಮೊದಲು, ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿಸಲಾಗಿಲ್ಲ.
ಮುಂಬರುವ ಹಬ್ಬ ಹರಿದಿನಗಳಲ್ಲಿ ಖಾದಿ ಗ್ರಾಮೋದ್ಯೋಗದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡುವಂತೆ ಮೋದಿ ಜನರಿಗೆ ಮನವಿ ಮಾಡಿದ್ದರು.