Maharashtra: ಖಲಾಪುರ ಭೂಕುಸಿತ, ಇದುವರೆಗೆ 16 ಸಾವು, 100 ಮಂದಿಗೆ ಗಾಯ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

|

Updated on: Jul 21, 2023 | 10:42 AM

ಮಹಾರಾಷ್ಟ್ರದ ರಾಯಗಢದಲ್ಲಿ ಬುಧವಾರ ನಡೆದ ಭೂಕುಸಿತದಿಂದ ಇಲ್ಲಿಯವರೆಗೆ 16 ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Maharashtra: ಖಲಾಪುರ ಭೂಕುಸಿತ, ಇದುವರೆಗೆ 16 ಸಾವು, 100 ಮಂದಿಗೆ ಗಾಯ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಖಲಾಪುರ ಭೂಕುಸಿತ, ರಕ್ಷಣಾ ಕಾರ್ಯಚರಣೆ
Follow us on

ಮುಂಬೈ: ಮಹಾರಾಷ್ಟ್ರದ ರಾಯಗಢದಲ್ಲಿ ಬುಧವಾರ ನಡೆದ ಭೂಕುಸಿತದಿಂದ ಇಲ್ಲಿಯವರೆಗೆ 16 ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಲಾಪುರ್ ತೆಹಸಿಲ್‌ನ ಇರ್ಶಲವಾಡಿಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಮಧ್ಯೆಯು, ಈಗಾಗಲೇ 178 ಮಂದಿಯಲ್ಲಿ 98 ಜನರನ್ನು ಅಪಾಯದಿಂದ ರಕ್ಷಣೆ ಮಾಡಲಾಗಿದೆ. ಈ ಪ್ರದೇಶದಲ್ಲಿ 48 ಕುಟುಂಬಗಳ 229 ಮಂದಿ ವಾಸಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ವಿಪತ್ತು ನಿರ್ವಹಣಾ ಸಚಿವ ಅನಿಲ್ ಪಾಟೀಲ್ ಹೇಳಿದ್ದಾರೆ.

ಮಳೆ, ಭೂಸಿತದ ನಡುವೆಯು ಜನರನ್ನು ರಕ್ಷಣೆ ಮಾಡಲಾಗುತ್ತಿದೆ, ಈ ಅವಗಢದಿಂದ ಆಗಿರುವ ನಷ್ಟವನ್ನು ತುಂಬಿಕೊಂಡುವ ಕೆಲಸ ಮಾಡುತ್ತೇವೆ ಎಂದು ಸಚಿವ ಅನಿಲ್ ಪಾಟೀಲ್ ಹೇಳಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಳಕ್ಕೆ ಭೇಟಿ ನೀಡಿದ್ದು, ನಿರಾಶಿತರಿಗೆ ವಸತಿ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸೋಮವಾರದಿಂದ ಬುಧವಾರದವರೆಗೆ ಸುರಿದ ಭಾರೀ ಮಳೆಗೆ ಈ ಭೂಕುಸಿತ ಉಂಟಾಗಿದೆ. ಎನ್​ಡಿಆರ್​​ಎಫ್​​, ಸ್ಥಳೀಯರು ಮತ್ತು ಏಜೆನ್ಸಿಗಳ ಸಹಾಯದಿಂದ ಅನೇಕರನ್ನು ರಕ್ಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:ರಾಯಗಢದಲ್ಲಿ ಭೂಕುಸಿತ, 16 ಸಾವು, ಹಲವು ಮಂದಿಗೆ ಗಾಯ

ಸಿಎಂ ಏಕನಾಥ್ ಶಿಂಧೆ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಚರಣೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇದರ ಜತೆಗೆ ಗಾಯಗಳು ಮತ್ತು ಸಾವನ್ನಪ್ಪಿರುವವರ ಕುಟುಂಬಗಳಿಗೆ ಪರಿಹಾರವನ್ನು ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್​ ಶಾ ಜತೆಗೂ ಸಿಎಂ ಏಕನಾಥ್ ಶಿಂಧೆ ಮಾತನಾಡಿದ್ದಾರೆ.