ದೆಹಲಿ, ಜನವರಿ 04: ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮೂಲಕ ಜನವರಿ 19 ರಿಂದ 31ರ ವರೆಗೆ ನಡೆಯಲಿರುವ ‘ಖೇಲೋ ಇಂಡಿಯಾ ಯೂತ್ ಗೇಮ್ಸ್’ಗೆ ಆಹ್ವಾನಿಸಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತಾಗಿ ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಜನವರಿ 19, 2024 ರಂದು ಚೆನ್ನೈನಲ್ಲಿ ನಡೆಯಲಿರುವ ‘ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭ’ಕ್ಕೆ ಗೌರವಾನ್ವಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
Glad to have invited Hon’ble Indian Prime Minister, Thiru @narendramodi in New Delhi today for the Opening Ceremony of the Khelo India Youth Games to be held in Chennai on January 19th, 2024.
On behalf of the Tamil Nadu Government, I requested the Prime Minister for the… pic.twitter.com/p3rYnUxmqX
— Udhay (@Udhaystalin) January 4, 2024
ಸಿಎಂ ಎಂಕೆ ಸ್ಟಾಲಿನ್ ಅವರ ಕೋರಿಕೆ ಮೇರೆಗೆ ತಮಿಳುನಾಡಿನ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರದ ಪರವಾಗಿ ಉದಯನಿಧಿ ಸ್ಟಾಲಿನ್ ಪ್ರಧಾನಿಗೆ ಮನವಿ ಮಾಡಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಭಾರತದಲ್ಲಿನ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಚೀನಾ ಮಾಧ್ಯಮ
ತಮಿಳುನಾಡಿನ ಸಾರ್ವಜನಿಕ ಪ್ರಾಮುಖ್ಯತೆಯ ಬಗ್ಗೆ, ವಿಶೇಷವಾಗಿ ತಮಿಳುನಾಡಿನ ಕ್ರೀಡೆಗಳ ಬಹುಮುಖಿ ಅಭಿವೃದ್ಧಿಯ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಲಾಗಿದೆ. ಸಭೆಯಲ್ಲಿ, ಸಿಎಂ ಟ್ರೋಫಿ ಗೇಮ್ಸ್ 2023 ಮತ್ತು ತಮಿಳುನಾಡು ಆಯೋಜಿಸಿದ್ದ ಏಷ್ಯನ್ ಪುರುಷರ ಹಾಕಿ ಚಾಂಪಿಯನ್ ಶಿಪ್‌ನ ಯಶಸ್ವಿ ನಿರ್ವಹಣೆಯನ್ನು ಪ್ರದರ್ಶಿಸುವ ಕಾಫಿ ಟೇಬಲ್ ಪುಸ್ತಕವನ್ನು ಪ್ರಧಾನಿಗೆ ನೀಡಲಾಗಿದೆ.
ಉದಯನಿಧಿ ಸ್ಟಾಲಿನ್ ಪ್ರಧಾನಿ ಮೋದಿ ಅವರನ್ನು ಎರಡನೇ ಭಾರಿಗೆ ಭೇಟಿಯಾಗಿದ್ದು, ಕಳೆದ ವರ್ಷ, ಫೆಬ್ರವರಿ 28 ರಂದು ರಾಜ್ಯಕ್ಕೆ ನೀಟ್ ವಿನಾಯಿತಿಗಾಗಿ ತಮಿಳುನಾಡಿನ ಬೇಡಿಕೆಗಾಗಿ ಭೇಟಿ ಮಾಡಿದ್ದರು. ಜೊತೆಗೆ ಕ್ರೀಡಾ ಸಂಬಂಧಿತ ವಿಷಯಗಳ ಬಗ್ಗೆಯೂ ಚರ್ಚೆ ಮಾಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.