ಕೋಲ್ಕತ್ತಾ: ತರಾತುರಿಯಲ್ಲಿ ವೈದ್ಯೆಯ ಶವ ಸಂಸ್ಕಾರ ಆರೋಪ, ಸ್ಮಶಾನ ಸಿಬ್ಬಂದಿ ಹೇಳಿದ್ದೇನು?

|

Updated on: Aug 20, 2024 | 8:49 AM

ವೈದ್ಯಕೀಯ ವಿದ್ಯಾರ್ಥಿನಿ, ತರಬೇತಿ ನಿರತ ವೈದ್ಯೆಯ ಶವವನ್ನು ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ ಆದರೆ ಸ್ಮಶಾನ ಸಿಬ್ಬಂದಿ ಸ್ಪಷ್ಟನೆ ಕೊಟ್ಟಿದ್ದು, ಶವ ಕೊಳೆಯುವ ಸ್ಥಿತಿಯಲ್ಲಿದ್ದ ಕಾರಣ ಬೇರೆಲ್ಲಾ ಶವಗಳಿಗಿಂತ ಮುಂಚಿತವಾಗಿ ಶವವನ್ನು ಸಂಸ್ಕಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಕೋಲ್ಕತ್ತಾ: ತರಾತುರಿಯಲ್ಲಿ ವೈದ್ಯೆಯ ಶವ ಸಂಸ್ಕಾರ ಆರೋಪ, ಸ್ಮಶಾನ ಸಿಬ್ಬಂದಿ ಹೇಳಿದ್ದೇನು?
ಪ್ರತಿಭಟನೆ
Image Credit source: Hindustan Times
Follow us on

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ವೈದ್ಯೆಯ ಶವಕ್ಕೆ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದರು. ಆದರೆ ಇದಕ್ಕೆ ಸ್ಮಶಾನ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

ಯುವತಿಯ ಶವ ಸಂಸ್ಕಾರವನ್ನು ಪೊಲೀಸರು ತರಾತುರಿಯಲ್ಲಿ ಮಾಡಿದ್ದಾರೆ ಎಂದು ಪೋಷಕರು ದೂರಿದ್ದರು, ಸ್ಮಶಾನದಲ್ಲಿ ಮೂರು ಶವಗಳಿದ್ದವು, ಆದರೆ ನಮ್ಮ ಮಗಳ ದೇಹವನ್ನೇ ಮೊದಲು ದಹಿಸಲಾಯಿತು ಎಂದು ಯುವತಿ ತಂದೆ ಹೇಳಿದ್ದರು.
ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಮಶಾನ ಸಿಬ್ಬಂದಿ, ಶವ ಕೊಳೆಯುವ ಸ್ಥಿತಿಯಲ್ಲಿದ್ದ ಕಾರಣ ಬೇಗನೆ ಅಂತ್ಯಸಂಸ್ಕಾರ ಮಾಡಲಾಯಿತು, ಬೇರೆ ಯಾವ ದುರುದ್ದೇಶವು ಅದರ ಹಿಂದಿಲ್ಲ ಎಂದಿದ್ದಾರೆ.

ಆಕೆಯ ದೇಹದ ಜತೆಗೆ ಬಹಳಷ್ಟು ಪೊಲೀಸರು ಇದ್ದರು, ತುಂಬಾ ಜನದಟ್ಟಣೆಯಿಂದ ಕೂಡಿತ್ತು. ಈ ಶವವನ್ನು ಎಲ್ಲಕ್ಕಿಂತ ಮೊದಲೇ ಅಂತ್ಯಸಂಸ್ಕಾರ ಮಾಡಬಹುದೇ ಎಂದು ಕೇಳಿದ್ದರು. ಶವಸಂಸ್ಕಾರಕ್ಕೆ ಈಗಾಗಲೇ ನಿಗದಿಪಡಿಸುವ ಮೊದಲು ಸಂಸ್ಕಾರ ಮಾಡುವ ಕೋರಿಕೆಯನ್ನು ಆಕೆಯ ಪೋಷಕರು ವಿರೋಧಿಸಿರಲಿಲ್ಲ.

ಮತ್ತಷ್ಟು ಓದಿ: Kolkata doctor rape-murder: ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?

ಈ ಘಟನೆಯು ಕೋಲ್ಕತ್ತಾ ಪೊಲೀಸರ ವಿರುದ್ಧ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಸಾಕ್ಷ್ಯವನ್ನು ಮರೆಮಾಚುತ್ತದೆ ಮತ್ತು ತನಿಖೆಯನ್ನು ಕುಂಠಿತಗೊಳಿಸುತ್ತದೆ ಎಂದು ಬಿಜೆಪಿ ಆರೋಪಿಸಿದೆ.
ಈ ಭೀಕರ ಘಟನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೂ ಕಳವಳ ವ್ಯಕ್ತವಾಗಿದೆ.

ಹತ್ರಾಸ್​ನಲ್ಲಿ ನಡೆದ ಅತ್ಯಾಚಾರ ಸಂದರ್ಭದಲ್ಲಿ ಮಹಿಳೆಯ ಅಂತ್ಯಕ್ರಿಯೆಯನ್ನು ಬೆಳಿಗ್ಗೆ ನಡೆಸಲು ಬಯಸುವುದಾಗಿ ಮತ್ತು ಆಕೆ ಅವಿವಾಹಿತಳಾಗಿರುವ ಕಾರಣ ಶವವನ್ನು ಅಂತ್ಯಸಂಸ್ಕಾರ ಮಾಡುವ ಬದಲು ಹೂಳಲು ಬಯಸುವುದಾಗಿ ಕುಟುಂಬದವರು ಹೆಚ್ಚುವರಿ ಅಫಿಡವಿಟ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದರು. ಆ ಸಮಯದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಸಂತ್ರಸ್ತೆ ಮತ್ತು ಅವರ ಕುಟುಂಬವನ್ನು ಹಿಂಸಿಸುತ್ತಿದೆ ಎಂದಿದ್ದರು.

ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮ ಪ್ರಶಸ್ತಿ ಪುರಸ್ಕೃತ 70ಕ್ಕೂ ಹೆಚ್ಚು ವೈದ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಇಂತಹ ದುಷ್ಕೃತ್ಯಗಳನ್ನು ತಡೆಯಲು ಬಲವಾದ ಕ್ರಮಗಳು ತೀರಾ ಅಗತ್ಯವಿದೆ. ಹೀಗಾಗಿ ಕಾನೂನು ಜಾರಿ ಸಂಸ್ಥೆಗಳು, ನೀತಿ ನಿರೂಪಕರು ಮತ್ತು ಸಮಾಜವು ತಕ್ಷಣವೇ ಈ ಕುರಿತು ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಮನವಿ ಮಾಡುತ್ತೇವೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ