Nupur Sharma ನೂಪುರ್ ಶರ್ಮಾಗೆ ಕೊಲ್ಕತ್ತಾ ಪೊಲೀಸರಿಂದ ಲುಕೌಟ್ ನೋಟಿಸ್

ಜೀವಕ್ಕೆ ಅಪಾಯವಿದೆ ಎಂದು ಹೇಳಿ ಶರ್ಮಾ ಅವರು ಎರಡೂ ಸಮನ್ಸ್ ಗೆ ಹಾಜರಾಗಲಿಲ್ಲ. ಹಾಗಾಗಿ ಕೊಲ್ಕತ್ತಾ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

Nupur Sharma ನೂಪುರ್ ಶರ್ಮಾಗೆ ಕೊಲ್ಕತ್ತಾ ಪೊಲೀಸರಿಂದ ಲುಕೌಟ್ ನೋಟಿಸ್
ನೂಪುರ್ ಶರ್ಮಾ
TV9kannada Web Team

| Edited By: Rashmi Kallakatta

Jul 02, 2022 | 6:30 PM

ಪ್ರವಾದಿ ಮುಹಮ್ಮದ್ (Prophet Muhammad) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕೋಲ್ಕತ್ತಾ ಪೊಲೀಸರು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ(Nupur Sharma) ವಿರುದ್ಧ ಲುಕೌಟ್ ನೋಟಿಸ್(lookout notice) ಜಾರಿಗೊಳಿಸಿದ್ದಾರೆ. ಕೋಲ್ಕತ್ತಾ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇದಕ್ಕಿಂತ ಮೊದಲು ನರ್ಕೇಲ್ದಂಗ ಪೊಲೀಸ್ ಠಾಣೆಯಿಂದ ಶರ್ಮಾಗೆ ಸಮನ್ಸ್ ಕಳುಹಿಸಿ ಜೂನ್ 20ರಂದು ಹಾಜರಾಗುವಂತೆ ಹೇಳಲಾಗಿತ್ತು. ಇದಾದ ನಂತರ ಆಮ್ಹೆಸ್ಟ್ ಪೊಲೀಸ್ ಠಾಣೆ ಸಮನ್ಸ್ ಕಳುಹಿಸಿ ಜೂನ್ 25ರಂದು ಹಾಜರಾಗಲು ಹೇಳಿತ್ತು. ಜೀವಕ್ಕೆ ಅಪಾಯವಿದೆ ಎಂದು ಹೇಳಿ ಶರ್ಮಾ ಅವರು ಎರಡೂ ಸಮನ್ಸ್ ಗೆ ಹಾಜರಾಗಲಿಲ್ಲ. ಹಾಗಾಗಿ ಕೊಲ್ಕತ್ತಾ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ

ಇದನ್ನೂ ಓದಿ

ಮೇ ತಿಂಗಳ ಅಂತ್ಯದಲ್ಲಿ ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.ಕತಾರ್,ಪಾಕಿಸ್ತಾನ, ಅಪ್ಘಾನಿಸ್ತಾನ ಸೇರಿದಂತೆ 14 ದೇಶಗಳು ಭಾರತವನ್ನು ತೀವ್ರವಾಗಿ ಖಂಡಿಸಿದ್ದವು. ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದು, ಜನರು ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕೆ ನೂಪುರ್ ಶರ್ಮಾ ವಿರುದ್ಧ ಹೈದರಾಬಾದ್, ಪುಣೆ ಮತ್ತು ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada