Krishna Janmabhoomi Case: ಮಥುರಾದ ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ವಿವಾದ: ಮುಂದಿನ ವಿಚಾರಣೆ ಜುಲೈ 1ಕ್ಕೆ ಮುಂದೂಡಿಕೆ

ಮಥುರಾದ ಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 1ಕ್ಕೆ ಮುಂದೂಡಲಾಗಿದೆ.

Krishna Janmabhoomi Case: ಮಥುರಾದ ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ವಿವಾದ: ಮುಂದಿನ ವಿಚಾರಣೆ ಜುಲೈ 1ಕ್ಕೆ ಮುಂದೂಡಿಕೆ
ಕೃಷ್ಣಜನ್ಮಭೂಮಿ ವಿವಾದದ ಸ್ಥಳ
Follow us
| Edited By: Sushma Chakre

Updated on:May 26, 2022 | 7:25 PM

ಮಥುರಾ: ಉತ್ತರ ಪ್ರದೇಶದಲ್ಲಿ ಶ್ರೀಕೃಷ್ಣ ಜನ್ಮಭೂಮಿಗೆ (Krishna Janmabhoomi Case) ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಮಥುರಾದ (Mathura) ಸಿವಿಲ್ ನ್ಯಾಯಾಧೀಶರು ಇಂದು ವಿಚಾರಣೆ ನಡೆಸಿದ್ದಾರೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ಜಿಲ್ಲಾ ನ್ಯಾಯಾಲಯದ ಆದೇಶವು ಸ್ವೀಕಾರಾರ್ಹ ಎಂದು ಹೇಳಿದ ಮರುದಿನವೇ ಮೊದಲ ಬಾರಿಗೆ ಅರ್ಜಿಯನ್ನು ಆಲಿಸಲಾಯಿತು. ಈ ಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿಯ ಮುಂದಿನ ವಿಚಾರಣೆ ಜುಲೈ 1ರಂದು ನಡೆಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವ ಮನವಿಯನ್ನು ಮೂಲತಃ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2020ರ ಸೆಪ್ಟೆಂಬರ್ 25ರಂದು ಲಕ್ನೋ ಮೂಲದ ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಈ ಕುರಿತು ಸಲ್ಲಿಸಿದ್ದರು.

ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕುವಂತೆ ಕೋರಿ ಸೆಪ್ಟೆಂಬರ್ 2020ರಲ್ಲಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಮಥುರಾದ ನ್ಯಾಯಾಲಯದ ನ್ಯಾಯಾಧೀಶರು ಇಂದು ಮಾಡಿದ್ದಾರೆ. ಈ ಪ್ರಕರಣದ ತಾತ್ಕಾಲಿಕ ತಡೆಯಾಜ್ಞೆ ಅರ್ಜಿಗಳು ಸೇರಿದಂತೆ ಎಲ್ಲ ಬಾಕಿ ಪ್ರಕರಣಗಳನ್ನು 4 ತಿಂಗಳೊಳಗೆ ಇತ್ಯರ್ಥ ಮಾಡಬೇಕೆಂದು ಕೆಳ ನ್ಯಾಯಾಲಯಕ್ಕೆ ಮೇ 12ರಂದು ಅಲಹಾಬಾದ್ ಹೈಕೋರ್ಟ್​ ನಿರ್ದೇಶನ ನೀಡಿತ್ತು. ತಾನು ಶ್ರೀಕೃಷ್ಣನ ವಂಶಸ್ಥರೆಂದು ಹೇಳಿಕೊಂಡ ಲಕ್ನೋ ಮೂಲದ ಮನೀಶ್ ಯಾದವ್ ಕತ್ರಾ ಕೇಶವ ದೇವ್ ದೇವಸ್ಥಾನದ 13.37 ಎಕರೆ ಆವರಣದೊಳಗಿನ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾದ ಮಸೀದಿಯನ್ನು ಸ್ಥಳಾಂತರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Krishna Janmabhoomi case ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ: 4 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸೂಚನೆ

ಇದನ್ನೂ ಓದಿ
Image
Krishna Janmabhoomi Case: ಮಥುರಾ ಕೋರ್ಟ್​ನಿಂದ ಇಂದು ಕೃಷ್ಣ ಜನ್ಮಭೂಮಿ ಪ್ರಕರಣದ ವಿಚಾರಣೆ
Image
Krishna Janmabhoomi Case: ಮಥುರಾ ಕೃಷ್ಣ ಜನ್ಮಭೂಮಿ ವಿವಾದ; ವಿಚಾರಣೆ ಮುಂದೂಡಿದ ನ್ಯಾಯಾಲಯ
Image
Krishna Janmabhoomi Case ಮಥುರಾದಲ್ಲಿ ‘ಕೃಷ್ಣ ಜನ್ಮ ಭೂಮಿಯಲ್ಲಿ ನಿರ್ಮಿಸಿರುವ ಮಸೀದಿ ತೆರವುಗೊಳಿಸಿ’ ಎಂಬ ಮನವಿ ಸ್ವೀಕರಿಸಿದ ನ್ಯಾಯಾಲಯ
Image
Krishna Janmabhoomi case ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ: 4 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸೂಚನೆ

ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿಯೇ ಶಾಹಿ ಈದ್ಗಾ ಮಸೀದಿಯೂ ಇದೆ. ಕೃಷ್ಣ ಜನ್ಮಭೂಮಿ ಅಥವಾ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು ತೆಗೆದು ಹಾಕುವಂತೆ ಕೋರಿ ಮನವಿ ಸಲ್ಲಿಸಲು ಉತ್ತರ ಪ್ರದೇಶದ ಸಿವಿಲ್ ನ್ಯಾಯಾಲಯವು ಅನುಮತಿ ನೀಡಿತ್ತು. 17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಕತ್ರಾ ಕೇಶವ್ ದೇವ್ ದೇವಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಮಾಡಿದ ಮೊಕದ್ದಮೆಗಳಲ್ಲಿ ಒಂದಾಗಿದ್ದು, ಈ ಮಸೀದಿಯನ್ನು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

ಶಾಹಿ ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯ ಬಳಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಸೇರಿದ 13.37 ಎಕರೆ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದರು. ಅವರು ಮಸೀದಿಯನ್ನು ತೆಗೆದುಹಾಕಬೇಕು ಮತ್ತು ಟ್ರಸ್ಟ್‌ಗೆ ಭೂಮಿಯನ್ನು ಹಿಂದಿರುಗಿಸಬೇಕೆಂದು ಕೋರಿದ್ದರು. ಆದರೂ ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) 2020ರ ಸೆಪ್ಟೆಂಬರ್ 30ರಂದು ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿರಸ್ಕರಿಸಿದರು. ಇದಾದ ಬಳಿಕ ಅರ್ಜಿದಾರರು ಆದೇಶವನ್ನು ಪರಿಷ್ಕರಿಸಬೇಕು ಎಂದು ಕೋರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದ ಮೊರೆ ಹೋಗಿದ್ದರು. ಮೇ 19ರಂದು ಮಥುರಾ ಜಿಲ್ಲಾ ನ್ಯಾಯಾಲಯವು ಮನವಿಯನ್ನು ಮರುಸ್ಥಾಪಿಸಿತು. ಅರ್ಜಿದಾರರಿಗೆ ಈ ಕುರಿತು ಅರ್ಜಿ ಸಲ್ಲಿಸುವ ಹಕ್ಕಿದೆ ಎಂದು ನ್ಯಾಯಾಧೀಶರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Thu, 26 May 22

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್