ಉದ್ಯೋಗ ಅರಸಿ ನಗರದತ್ತ ಹೊರಟ ಕಾರ್ಮಿಕರು.. ಕೊನೆಗೆ ಸೇರಿದ್ದು ಮಾತ್ರ ಮಸಣಕ್ಕೆ

| Updated By: KUSHAL V

Updated on: Aug 31, 2020 | 7:17 PM

ಲಕ್ನೋ: ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ಇಂದು ವಾಹನವೊಂದು ಟ್ರಕ್‌ಗೆ ಗುದ್ದಿದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಗೆ ವಾಪಸ್​ ಆಗಿದ್ದ ಕಾರ್ಮಿಕರು ನಿಯಮಗಳು ಸಡಿಲಗೊಂಡ ನಂತರ ಬಿಹಾರದಿಂದ ಹರಿಯಾಣದ ಅಂಬಾಲಕ್ಕೆ ಕೆಲಸದ ನಿಮಿತ್ತ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. ವಾಹನವೊಂದರಲ್ಲಿ ಒಟ್ಟಾರೆ 16 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡ ಉಳಿದ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಇವರ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ […]

ಉದ್ಯೋಗ ಅರಸಿ ನಗರದತ್ತ ಹೊರಟ ಕಾರ್ಮಿಕರು.. ಕೊನೆಗೆ ಸೇರಿದ್ದು ಮಾತ್ರ ಮಸಣಕ್ಕೆ
Follow us on

ಲಕ್ನೋ: ಉತ್ತರ ಪ್ರದೇಶದ ಬಹ್ರೇಚ್ ಜಿಲ್ಲೆಯಲ್ಲಿ ಇಂದು ವಾಹನವೊಂದು ಟ್ರಕ್‌ಗೆ ಗುದ್ದಿದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮನೆಗೆ ವಾಪಸ್​ ಆಗಿದ್ದ ಕಾರ್ಮಿಕರು ನಿಯಮಗಳು ಸಡಿಲಗೊಂಡ ನಂತರ ಬಿಹಾರದಿಂದ ಹರಿಯಾಣದ ಅಂಬಾಲಕ್ಕೆ ಕೆಲಸದ ನಿಮಿತ್ತ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. ವಾಹನವೊಂದರಲ್ಲಿ ಒಟ್ಟಾರೆ 16 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡ ಉಳಿದ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಇವರ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.