AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ladakh border standoff: ಚೀನಾವನ್ನು ಎದುರಿಸಲು ಭಾರತದ ಐಟಿಬಿಪಿ ಪಡೆಗಳಿಗೆ ಸುಧಾರಿತ ಸಮರ ಕಲೆಗಳ ತರಬೇತಿ

ಭಾರತದ ನಿಯಂತ್ರಣ ರೇಖೆ (Line of Actual Control) ಅನ್ನು ಕಾಪಾಡಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತನ್ನ ಸಿಬ್ಬಂದಿಗೆ ಹೊಸ ನಿರಾಯುಧ ಆಕ್ರಮಣಕಾರಿ ಯುದ್ಧ ತಂತ್ರದಲ್ಲಿ ತರಬೇತಿ ನೀಡುತ್ತಿದೆ.

Ladakh border standoff: ಚೀನಾವನ್ನು ಎದುರಿಸಲು ಭಾರತದ ಐಟಿಬಿಪಿ ಪಡೆಗಳಿಗೆ ಸುಧಾರಿತ ಸಮರ ಕಲೆಗಳ ತರಬೇತಿ
Ladakh border standoff
TV9 Web
| Edited By: |

Updated on:Oct 31, 2022 | 2:14 PM

Share

ಪಂಚಕುಲ: 2020ರ ಗಾಲ್ವಾನ್ ಘರ್ಷಣೆಯಂತಹ ಸಂದರ್ಭಗಳಲ್ಲಿ ಎದುರಾಳಿಯನ್ನು ಎದುರಿಸಲು ಭಾರತೀಯ ಸೈನ್ಯಕ್ಕೆ ಕಷ್ಟವಾಗಿತ್ತು. ಭಾರತದ ನಿಯಂತ್ರಣ ರೇಖೆ ಪ್ರದೇಶದಲ್ಲಿರುವ ಸೈನಿಕರಿಗೆ ಉತ್ತಮ ಕೌಶಲ್ಯಯುತ ಪಡೆಗಳ ತಯಾರಿಯನ್ನು ನಡೆಸಿತ್ತು. ಇದೀಗ ಚೀನಾದೊಂದಿಗೆ ಭಾರತದ ನಿಯಂತ್ರಣ ರೇಖೆ (Line of Actual Control) ಅನ್ನು ಕಾಪಾಡಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತನ್ನ ಸಿಬ್ಬಂದಿಗೆ ಹೊಸ ನಿರಾಯುಧ ಆಕ್ರಮಣಕಾರಿ ಯುದ್ಧ ತಂತ್ರದಲ್ಲಿ ತರಬೇತಿ ನೀಡುತ್ತಿದೆ. 2020ರಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭಾರತೀಯ ಸೈನಿಕರ ಮೇಲೆ ಮಾರಣಾಂತಿಕ ಗಾಯಗಳನ್ನು ಉಂಟು ಮಾಡಲು ಕಚ್ಚಾ ಶಸ್ತ್ರಾಸ್ತ್ರಗಳನ್ನು ಬಳಸಲಾಯಿತು.

ತರಬೇತಿ ಮಾಡ್ಯೂಲ್ ಜೂಡೋ, ಕರಾಟೆ ಮತ್ತು ಕ್ರಾವ್ ಮಗಾದಂತಹ ವಿವಿಧ ಮಾರ್ಷಲ್ ಆರ್ಟ್ಸ್ ತಂತ್ರಗಂತಹ 15-20 ವಿಭಿನ್ನ ಈ ಯುದ್ಧ ಕುಶಲತೆಯನ್ನು ಒಳಗೊಂಡಿದೆ, ಇದು ಚೀನಾ ತನ್ನ ಸೈನಿಕರಿಗೆ ಯಾವೆಲ್ಲ ರೀತಿಯ ಯುದ್ಧ ತರಬೇತಿಯನ್ನು ನೀಡಿದೆ, ಅದಕ್ಕಿಂತ ನಾಲ್ಕು ಪಟ್ಟು ಯುದ್ಧ ಕಲೆ ವಿಚಾರಗಳ ತರಬೇತಿಯನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರಿಗೆ ನೀಡುತ್ತಿದೆ.

ಸುಮಾರು ಮೂರು ತಿಂಗಳ ಅವಧಿಯ ತರಬೇತಿಯನ್ನು ಅನುಭವಿ ITBP ತರಬೇತುದಾರರು ನೀಡುತ್ತಿದ್ದಾರೆ, ಗಡಿ ಪಡೆಗೆ ನಿಯೋಜಿಸುವ ಮೊದಲು ಯುದ್ಧದ ಇನಾಕ್ಯುಲೇಶನ್‌ಗಾಗಿ ಪಂಚಕುಲದ ಮೂಲ ತರಬೇತಿ ಕೇಂದ್ರದಲ್ಲಿ (BTC) ಹೊಸ ನೇಮಕಾತಿಗಳನ್ನು ಪ್ರಾರಂಭಿಸಿದ್ದಾರೆ. ಹೊಸ ನಿರಾಯುಧ ಯುದ್ಧ ತಂತ್ರವು ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಚಲನೆಗಳನ್ನು ಒಳಗೊಂಡಿದೆ. ಸೈನ್ಯದ ಮಾಜಿ ಡೈರೆಕ್ಟರ್ ಜನರಲ್ ಸಂಜಯ್ ಅರೋರಾ ಅವರ ನಿರ್ದೇಶನದ ಮೇರೆಗೆ, ಕಳೆದ ವರ್ಷ ನಮ್ಮ ಪಡೆಗಳಿಗೆ ಈ ಮಾಡ್ಯೂಲ್ ಅನ್ನು ತಂದಿದ್ದೇವೆ. ಈ ಯುದ್ಧ ಕೌಶಲ್ಯಗಳು ಎದುರಾಳಿಯನ್ನು ನಿಶ್ಚಲಗೊಳಿಸುತ್ತದೆ ಮತ್ತು ಅವರನ್ನು ಅಶಕ್ತಗೊಳಿಸಬಹುದು ಎಂದು ITBP ಇನ್ಸ್ಪೆಕ್ಟರ್ ಜನರಲ್ ಈಶ್ವರ್ ಸಿಂಗ್ ದುಹಾನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಚಂಡೀಗಢದಿಂದ ಸುಮಾರು 25 ಕಿಮೀ ದೂರದಲ್ಲಿರುವ ಪಂಚಕುಲದ ಭಾನು ಪ್ರದೇಶದಲ್ಲಿ ಇರುವ BTCಯ ಮುಖ್ಯಸ್ಥರಾಗಿ ಇನ್ಸ್‌ಪೆಕ್ಟರ್ ಜನರಲ್ ದುಹಾನ್ ಇದ್ದರೆ. ಅಲ್ಲಿ ಈ ತರಬೇತಿಗಳನ್ನು ನೀಡುತ್ತಿದ್ದೇವೆ, ಇದರ ನೇತೃತ್ವವನ್ನು ಕೂಡ ಇವರೇ ವಹಿಸಿಕೊಂಡಿದ್ದಾರೆ.

ಚೀನಾದ ಕ್ರೂರ ತಂತ್ರಗಳು

ಜೂನ್‌ನಲ್ಲಿ ಗಲ್ವಾನ್ (ಲಡಾಖ್) ನಲ್ಲಿ Line of Actual Control ನಲ್ಲಿ ಭಾರತದ ಭೂಪ್ರದೇಶದಲ್ಲಿ ಚೀನಾ ಕಣ್ಗಾವಲು ಪೋಸ್ಟ್ ನಿರ್ಮಿಸಿತ್ತು. ಇದನ್ನು ಭಾರತದ ಸೈನ್ಯವು ಪ್ರಶ್ನಿಸಿದೆ. ನಂತರದಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ಕಲ್ಲುಗಳಿಂದ, ಕೋಲುಗಳು, ಕಬ್ಬಿಣದ ರಾಡ್‌ಗಳಿಂದ ಹೊಡೆಯಲು ಮುಂದಾಗಿದ್ದಾರೆ. ಈ ಸಮಯದಲ್ಲಿ 20 ಜನ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಆದರೆ ಚೀನಾ ಮಾತ್ರ 4 ಜನ ಮಾತ್ರ ನಮ್ಮಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ ವರದಿ ಪ್ರಕಾರ ಅವರಲ್ಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 45 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆ TASS ವರದಿ ಮಾಡಿದೆ. ಅಮೆರಿಕದ ಗುಪ್ತಚರ ವರದಿಯ ಪ್ರಕಾರ, ಚೀನಾದ ಕಡೆಯಿಂದ ಸಾವನ್ನಪ್ಪಿದವರ ಸಂಖ್ಯೆ 35 ಆಗಿತ್ತು. ಈ ಕಾರಣಕ್ಕೆ Line of Actual Control ನಲ್ಲಿರುವ ಸೈನಿಕರಿಗೆ ನಿರಾಯುಧ ಯುದ್ಧಗಳ ಬಗ್ಗೆ ತರಬೇತಿ ನೀಡಲು ಭಾರತೀಯ ಸೈನ್ಯ ಮುಂದಾಗಿದೆ. ಚೀನಾದ ವಿರುದ್ಧ ಶಕ್ತಿಯನ್ನು ಪ್ರದರ್ಶನ ಮಾಡಲು ಪಡೆಗಳಿಗೆ ತರಬೇತಿ ನೀಡುಲಾಗುತ್ತಿದೆ.

Published On - 1:15 pm, Mon, 31 October 22