ಜಮ್ಮು: ಲಷ್ಕರ್ ಎ ಮುಸ್ತಫಾ ಉಗ್ರಸಂಘಟನೆಯ ಪ್ರಮುಖ ಕಮಾಂಡರ್ನನ್ನು ಜಮ್ಮು-ಕಾಶ್ಮೀರ ಪೊಲೀಸರು ಇಂದು ಬಂಧಿಸಿದ್ದಾರೆ. ಉಗ್ರ ಹಿದಾಯತ್ ಉಲ್ಲಾ ಮಲಿಕ್ನನ್ನು ಜಮ್ಮುವಿನ ಕುಂಜ್ವಾನಿ ಬಳಿ ಅರೆಸ್ಟ್ ಮಾಡಲಾಗಿದ್ದು, ಆತನಿಂದ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿದಾಯತ್ ಉಲ್ಲಾ ಮಲಿಕ್ ಲಷ್ಕರ್ ಎ ಮುಸ್ತಫಾ ಉಗ್ರಸಂಘಟನೆಯ ಮುಖ್ಯಸ್ಥನಾಗಿದ್ದು, ಜಮ್ಮು ಮತ್ತು ಅನಂತ್ನಾಗ್ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಈತ ದಾಳಿ ನಡೆಸಲು ಮುಂದಾಗಿದ್ದಾನೆ. ಆದರೆ ನಂತರ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಹಿದಾಯತ್ ಉಲ್ಲಾ ಪ್ರಯಾಣಿಸುತ್ತಿದ್ದ ಕಾರನ್ನೂ ಪೊಲೀಸರು ವಶಪಡಿಸಿಕೊಂಡು, ತಪಾಸಣೆಗೆ ಕಳಿಸಿದ್ದಾರೆ.
ಲಷ್ಕರ್ ಎ ಮುಸ್ತಫಾ ಎಂಬುದು ಜೈಷ್ ಎ ಮೊಹಮ್ಮದ್ ಉಗ್ರಸಂಘಟನೆಯದ್ದೇ ಒಂದು ಭಾಗವಾಗಿದ್ದು, ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದೆ. ಬಂಧಿತ ಉಗ್ರ ಮೂಲತಃ ಶೋಪಿಯಾನಾ ಜಿಲ್ಲೆಯವನಾಗಿದ್ದಾನೆ.
ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್