AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್​ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್

ಮದುವೆ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್​ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ.

ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್​ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Feb 07, 2021 | 1:34 PM

Share

ಮದುವೆ ಸಂದರ್ಭದಲ್ಲಿ ಫೋಟೋಗ್ರಾಫರ್​ ಇರಲೇಬೇಕು ಎಂಬುದು ಇತ್ತೀಚೆಗೆ ನಿಯಮವೇ ಆದಂತಿದೆ. ಯಾವುದೇ ಮದುವೆಯಾದರೂ ಛಾಯಾಗ್ರಾಹಕ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ ಎನ್ನುವ ಸ್ಥಿತಿಗೆ ಬಂದೊದಗಿದೆ. ಫೋಟೋಗ್ರಾಫರ್​ಗಳು​ ಕೂಡ ಅಷ್ಟೇ, ಕೊಟ್ಟ ಹಣಕ್ಕೆ ಮೋಸ ಮಾಡಬಾರದು ಎಂದು ಅತ್ಯುತ್ತಮ ಫೋಟೋವನ್ನೇ ತೆಗೆಯಲು ಪ್ರಯತ್ನಿಸುತ್ತಾರೆ. ಹೀಗೆ ಮಾಡಲು ಹೋಗಿ ಫೋಟೋಗ್ರಾಫರ್​ ಓರ್ವ ಹೊಡೆತ ತಿಂದಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಮದುವೆ ದಿನ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್​ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ. ಕೆಲವೊಂದು ಹತ್ತಿರದ ಶಾಟ್​ಗಳನ್ನು ತೆಗೆದರೆ, ಇನ್ನೂ ಕೆಲವು ದೂರದ ಶಾಟ್​ಗಳನ್ನು ತೆಗೆಯುತ್ತಿದ್ದ.

ಆದರೆ, ಹುಡುಗಿ ಪಕ್ಕ ನಿಂತ ಮದುವೆ ಗಂಡಿನ ಒಂದೇ ಒಂದು ಫೋಟೋವನ್ನು ಛಾಯಾಗ್ರಾಹಕ ತೆಗೆದಿರಲಿಲ್ಲ. ವೇದಿಕೆಯ ಮೇಲೆ ಹುಡುಗಿ ಮಾತ್ರ ಇದ್ದಾಳೆ ಎಂಬಂತಿತ್ತು ಛಾಯಾಗ್ರಾಹಕನ ವರ್ತನೆ. ಮದುವೆ ಗಂಡು ಕೂಡ ತುಂಬಾನೇ ತಾಳ್ಮೆಯಿಂದ ಇದನ್ನು ನೋಡುತ್ತಲೇ ಇದ್ದ. ಸಮಯ ಕಳೆದಂತೆ ಹುಡುಗಿ ಸಮೀಪ ಹೋಗುತ್ತಿದ್ದದ್ದನ್ನು ನೋಡಿ ಮದುವೆ ಗಂಡಿನ ಪಿತ್ತ ನೆತ್ತಿಗೇರಿತ್ತು. ತಡ ಮಾಡದೆ, ಛಾಯಾಗ್ರಾಹಕನ ತಲೆಗೆ ಹೊಡೆದೇ ಬಿಟ್ಟ ಮದುಮಗ!

ಇದನ್ನು ನೋಡಿದ ಹುಡುಗಿ ಬಿದ್ದು, ಬಿದ್ದು ನಕ್ಕಿದ್ದಾಳೆ. ಛಾಯಾಗ್ರಾಹಕ ಮಾತ್ರ ತನ್ನಿಂದ ಆದ ತಪ್ಪಾದರೂ ಏನು ಎನ್ನುವಂತೆ ಗಂಡಿನ ಮುಖ ನೋಡಿದ್ದ. ನಂತರ ವೇದಿಕೆಯಿಂದ ಕೆಳಗಿಳಿದು ಬಂದಿದ್ದ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!

Published On - 6:13 pm, Sat, 6 February 21

Follow Us
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ