ಉಕ್ರೆನ್ನ ಎರಡನೇ ದೊಡ್ಡ ನಗರವಾದ ಖಾರ್ಕೀವ್(Kharkiv) ರಷ್ಯಾ ಆಕ್ರಮಣಕ್ಕೆ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊಸದಾದ ಅಡ್ವೈಸರಿಯನ್ನು ಹೊರಡಿಸಿದೆ. ಖಾರ್ಕೀವ್ನಲ್ಲಿರುವ ಪ್ರತಿಯೊಬ್ಬ ಭಾರತೀಯರೂ ತುರ್ತಾಗಿ ನಗರವನ್ನು ತೊರೆಯಿರಿ. ಈಗ ಎದುರಾಗಿರುವ ಪರಿಸ್ಥಿತಿಯಲ್ಲಿ ಖಾರ್ಕೀವ್ ಯಾವ ಕಾರಣಕ್ಕೂ ಸುರಕ್ಷಿತವಲ್ಲ. ಹಾಗಾಗಿ ಭಾರತೀಯರು ಅರ್ಜೆಂಟ್ ಆಗಿ ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತು ಪ್ರದೇಶಗಳಿಗೆ ತಲುಪಿಕೊಳ್ಳುವಂತೆ ಹೇಳಿದೆ.
ಉಕ್ರೇನ್ನಲ್ಲಿರುವ ರಾಯಭಾರಿ ಕಚೇರಿ ಟ್ವೀಟ್ ಮೂಲಕ ಈ ಮನವಿ ಮಾಡಿದೆ. ಹಾಗೇ, ಟ್ವೀಟ್ನಲ್ಲಿ ಪ್ರತಿ ಅಕ್ಷರವನ್ನೂ ಕ್ಯಾಪಿಟಲ್ ಅಕ್ಷರಗಳಲ್ಲಿಯೇ ಇಡುವ ಮೂಲಕ, ಇದೊಂದು ಅತ್ಯಂತ ಮಹತ್ವದ ಅಡ್ವೈಸರಿ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೇ, ಇಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅವರು ಖಾರ್ಕೀವ್ನಿಂದ ಹೊರಡಲೇಬೇಕು ಎಂದು ಒತ್ತಿ ಹೇಳಿದೆ. ಇದಕ್ಕೂ ಮೊದಲು ಪೋಲ್ಯಾಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಅಡ್ವೈಸರಿ ಬಿಡುಗಡೆ ಮಾಡಿ, ಉಕ್ರೇನ್ನ ಪಶ್ಚಿಮ ಗಡಿ ಸಮೀಪದಲ್ಲಿರುವ ಭಾರತೀಯರು ಎಷ್ಟಾಗತ್ತೋ ಅಷ್ಟು ಬೇಗ ಪೋಲ್ಯಾಂಡ್ ತಲುಪಿಕೊಳ್ಳಿ. ಅದಕ್ಕಾಗಿ ಬುಡೋಮಿಯರ್ಜ್ ಗಡಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿತ್ತು.
URGENT ADVISORY TO ALL INDIAN NATIONALS IN KHARKIV.
FOR THEIR SAFETY AND SECURITY THEY MUST LEAVE KHARKIV IMMEDIATELY.
PROCEED TO PESOCHIN, BABAYE AND BEZLYUDOVKA AS SOON AS POSSIBLE.
UNDER ALL CIRCUMSTANCES THEY MUST REACH THESE SETTLEMENTS *BY 1800 HRS (UKRAINIAN TIME) TODAY*.— India in Ukraine (@IndiainUkraine) March 2, 2022
ನಿನ್ನೆ ಕೀವ್ನಲ್ಲಿರುವ ಭಾರತೀಯ ನಾಗರಿಕರಿಗೂ ಕೂಡ ಆದಷ್ಟು ಬೇಗ ಕೀವ್ ಬಿಡುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿತ್ತು. ಲಭ್ಯ ಇರುವ ರೈಲು ಮತ್ತು ಇತರ ಸಂಚಾರ ವ್ಯವಸ್ಥೆಯ ಮೂಲಕ ಕೀವ್ನಿಂದ ಹೊರಟು, ಗಡಿ ದೇಶಗಳನ್ನು ತಲುಪಿಕೊಳ್ಳಿ ಎಂದು ಹೇಳಿತ್ತು. ಸದ್ಯ ರಷ್ಯಾದಲ್ಲಿ ಖಾರ್ಕೀವ್, ಸುಮಿ ಮತ್ತು ಕೀವ್ ಭಾಗಗಳಲ್ಲಿ ರಷ್ಯಾ ಆಕ್ರಮಣ ಹೆಚ್ಚಿದೆ. ಭಾರತೀಯರ ಸ್ಥಳಾಂತರ ಕಾರ್ಯಕ್ಕೆ ರಷ್ಯಾ ಆಗಲೀ, ಉಕ್ರೇನ್ ಆಗಲೀ ತಡೆ ಮಾಡದೆ ಇದ್ದರೂ, ಗಡಿ ಭಾಗಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಟ್ರಾಫಿಕ್ ಉಂಟಾಗುತ್ತಿದೆ.
ಇದನ್ನೂ ಓದಿ: Breaking: ಉಕ್ರೇನ್ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್ನಿಂದ ಮೃತಪಟ್ಟ ಪಂಜಾಬ್ ಯುವಕ