AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾನವೀಯ ಕಾರಿಡಾರ್‌ ಸ್ಥಾಪನೆಯತ್ತ ರಷ್ಯಾ ಕೆಲಸ ಮಾಡುತ್ತಿದೆ – ರಷ್ಯಾ ರಾಯಭಾರಿ

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡೇನಿಸ್ ಅಲಿಪೋವ್, ಮಾರ್ಚ್ 01ರ ಮಂಗಳವಾರ 21 ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾಂದಗೌಡರ್ ಅವರ ಸಾವಿನ ನಂತರ ಪೂರ್ವ ಉಕ್ರೇನ್‌ನ ಖಾರ್ಕಿವ್, ಸುಮಿ ಮತ್ತು ಇತರ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಸುಮಾರು 4,000 ಭಾರತೀಯರನ್ನು ಸ್ಥಳಾಂತರಿಸುವುದು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾನವೀಯ ಕಾರಿಡಾರ್‌ ಸ್ಥಾಪನೆಯತ್ತ ರಷ್ಯಾ ಕೆಲಸ ಮಾಡುತ್ತಿದೆ - ರಷ್ಯಾ ರಾಯಭಾರಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Mar 02, 2022 | 4:24 PM

Share

ದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದು ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಭಾರತಕ್ಕೆ ರಷ್ಯಾದ ರಾಯಭಾರಿ ಭರವಸೆ ನೀಡಿದ್ದಾರೆ. ಪೂರ್ವ ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು “ಮಾನವೀಯ ಕಾರಿಡಾರ್‌ಗಳನ್ನು” ಸ್ಥಾಪಿಸಲು ರಷ್ಯಾ ಕೆಲಸ ಮಾಡುತ್ತಿದೆ ಎಂದು ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಬುಧವಾರ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡೇನಿಸ್ ಅಲಿಪೋವ್, ಮಾರ್ಚ್ 01ರ ಮಂಗಳವಾರ 21 ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾಂದಗೌಡರ್ ಅವರ ಸಾವಿನ ನಂತರ ಪೂರ್ವ ಉಕ್ರೇನ್‌ನ ಖಾರ್ಕಿವ್, ಸುಮಿ ಮತ್ತು ಇತರ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಸುಮಾರು 4,000 ಭಾರತೀಯರನ್ನು ಸ್ಥಳಾಂತರಿಸುವುದು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸಾಧ್ಯವಾದಷ್ಟು ಬೇಗ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಲು ರಷ್ಯಾ ಮುಂದಾಗಿದೆ. ಇದರಿಂದಾಗಿ ಈ ಸಂಘರ್ಷ ವಲಯಗಳಲ್ಲಿನ ಭಾರತೀಯರನ್ನು ರಷ್ಯಾದ ಪ್ರದೇಶಕ್ಕೆ ಸ್ಥಳಾಂತರಿಸಬಹುದು ಎಂದು ಅಲಿಪೋವ್ ವರ್ಚುವಲ್ ಬ್ರೀಫಿಂಗ್‌ ತಿಳಿಸಿದರು. ಅಲ್ಲದೆ ಅಲಿಪೋವ್ ನವೀನ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹಾಗೂ ಘರ್ಷಣೆ ವಲಯಗಳಲ್ಲಿ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾ ತನ್ನಿಂದ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೆ ಎಂದು ತಿಳಿಸಿದರು.

ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಭಾರತೀಯರನ್ನು ರಷ್ಯಾದ ಭೂಪ್ರದೇಶಕ್ಕೆ ಸ್ಥಳಾಂತರಿಸಲು ಭಾರತದಿಂದ ವಿದ್ಯಾರ್ಥಿಗಳ ರಕ್ಷಣೆಗೆ ಮನವಿ ಬಂದಿದೆ. ರಷ್ಯಾ ಭಾರತೀಯ ಮನವಿಯನ್ನು ಸ್ವೀಕರಿಸಿದೆ ಮತ್ತು ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಲಿಪೋವ್ ಹೇಳಿದರು.

ಇದನ್ನೂ ಓದಿ: Russia Ukraine War : ನವೀನ್ ಮತ್ತು ಸರ್ಕಾರದ ನಡುವೆ ಟ್ವೀಟ್ ವಾರ್

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉಕ್ರೇನಲ್ಲಿ ಮಡಿದ ನವೀನ್ ಮನಗೆ ಭೇಟಿ ನೀಡಿ ತಂದೆತಾಯಿಗಳನ್ನು ಸಂತೈಸಿದರು