ಅರ್ಜೆಂಟ್ ಆಗಿ ಖಾರ್ಕೀವ್​​ನಿಂದ ಹೊರಟುಬಿಡಿ; ಅಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಬಂತು ತುರ್ತು ಸಂದೇಶ

ಅರ್ಜೆಂಟ್ ಆಗಿ ಖಾರ್ಕೀವ್​​ನಿಂದ ಹೊರಟುಬಿಡಿ; ಅಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಬಂತು ತುರ್ತು ಸಂದೇಶ
ಸಾಂದರ್ಭಿಕ ಚಿತ್ರ

ನಿನ್ನೆ ಕೀವ್​​ನಲ್ಲಿರುವ ಭಾರತೀಯ ನಾಗರಿಕರಿಗೂ ಕೂಡ ಆದಷ್ಟು ಬೇಗ ಕೀವ್​ ಬಿಡುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿತ್ತು. ಲಭ್ಯ ಇರುವ ರೈಲು ಮತ್ತು ಇತರ ಸಂಚಾರ ವ್ಯವಸ್ಥೆಯ ಮೂಲಕ ಕೀವ್​​ನಿಂದ ಹೊರಟು, ಗಡಿ ದೇಶಗಳನ್ನು ತಲುಪಿಕೊಳ್ಳಿ ಎಂದು ಹೇಳಿತ್ತು.

TV9kannada Web Team

| Edited By: Lakshmi Hegde

Mar 02, 2022 | 5:48 PM

ಉಕ್ರೆನ್​ನ ಎರಡನೇ ದೊಡ್ಡ ನಗರವಾದ ಖಾರ್ಕೀವ್(Kharkiv)​ ರಷ್ಯಾ ಆಕ್ರಮಣಕ್ಕೆ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ ಉಕ್ರೇನ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊಸದಾದ  ಅಡ್ವೈಸರಿಯನ್ನು ಹೊರಡಿಸಿದೆ. ಖಾರ್ಕೀವ್​​ನಲ್ಲಿರುವ ಪ್ರತಿಯೊಬ್ಬ ಭಾರತೀಯರೂ ತುರ್ತಾಗಿ ನಗರವನ್ನು ತೊರೆಯಿರಿ. ಈಗ ಎದುರಾಗಿರುವ ಪರಿಸ್ಥಿತಿಯಲ್ಲಿ ಖಾರ್ಕೀವ್​ ಯಾವ ಕಾರಣಕ್ಕೂ ಸುರಕ್ಷಿತವಲ್ಲ. ಹಾಗಾಗಿ ಭಾರತೀಯರು ಅರ್ಜೆಂಟ್ ಆಗಿ ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತು ಪ್ರದೇಶಗಳಿಗೆ ತಲುಪಿಕೊಳ್ಳುವಂತೆ ಹೇಳಿದೆ.

ಉಕ್ರೇನ್​​ನಲ್ಲಿರುವ ರಾಯಭಾರಿ ಕಚೇರಿ ಟ್ವೀಟ್ ಮೂಲಕ ಈ ಮನವಿ ಮಾಡಿದೆ. ಹಾಗೇ, ಟ್ವೀಟ್​ನಲ್ಲಿ ಪ್ರತಿ ಅಕ್ಷರವನ್ನೂ ಕ್ಯಾಪಿಟಲ್​ ಅಕ್ಷರಗಳಲ್ಲಿಯೇ ಇಡುವ ಮೂಲಕ, ಇದೊಂದು ಅತ್ಯಂತ ಮಹತ್ವದ ಅಡ್ವೈಸರಿ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೇ, ಇಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅವರು ಖಾರ್ಕೀವ್​ನಿಂದ ಹೊರಡಲೇಬೇಕು ಎಂದು ಒತ್ತಿ ಹೇಳಿದೆ. ಇದಕ್ಕೂ ಮೊದಲು ಪೋಲ್ಯಾಂಡ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಅಡ್ವೈಸರಿ ಬಿಡುಗಡೆ ಮಾಡಿ, ಉಕ್ರೇನ್​​ನ ಪಶ್ಚಿಮ ಗಡಿ ಸಮೀಪದಲ್ಲಿರುವ ಭಾರತೀಯರು ಎಷ್ಟಾಗತ್ತೋ ಅಷ್ಟು ಬೇಗ ಪೋಲ್ಯಾಂಡ್ ತಲುಪಿಕೊಳ್ಳಿ. ಅದಕ್ಕಾಗಿ ಬುಡೋಮಿಯರ್ಜ್ ಗಡಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿತ್ತು.

ನಿನ್ನೆ ಕೀವ್​​ನಲ್ಲಿರುವ ಭಾರತೀಯ ನಾಗರಿಕರಿಗೂ ಕೂಡ ಆದಷ್ಟು ಬೇಗ ಕೀವ್​ ಬಿಡುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿತ್ತು. ಲಭ್ಯ ಇರುವ ರೈಲು ಮತ್ತು ಇತರ ಸಂಚಾರ ವ್ಯವಸ್ಥೆಯ ಮೂಲಕ ಕೀವ್​​ನಿಂದ ಹೊರಟು, ಗಡಿ ದೇಶಗಳನ್ನು ತಲುಪಿಕೊಳ್ಳಿ ಎಂದು ಹೇಳಿತ್ತು. ಸದ್ಯ ರಷ್ಯಾದಲ್ಲಿ ಖಾರ್ಕೀವ್​, ಸುಮಿ ಮತ್ತು ಕೀವ್​ ಭಾಗಗಳಲ್ಲಿ ರಷ್ಯಾ ಆಕ್ರಮಣ ಹೆಚ್ಚಿದೆ. ಭಾರತೀಯರ ಸ್ಥಳಾಂತರ ಕಾರ್ಯಕ್ಕೆ ರಷ್ಯಾ ಆಗಲೀ, ಉಕ್ರೇನ್ ಆಗಲೀ ತಡೆ ಮಾಡದೆ ಇದ್ದರೂ, ಗಡಿ ಭಾಗಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಟ್ರಾಫಿಕ್​ ಉಂಟಾಗುತ್ತಿದೆ.

ಇದನ್ನೂ ಓದಿ: Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ

Follow us on

Related Stories

Most Read Stories

Click on your DTH Provider to Add TV9 Kannada