ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ

ಖಾರ್ಕೀವ್​ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್​​ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ
ಖಾರ್ಕೀವ್​ ಚಿತ್ರಣ

ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಅಲ್ಲಿನ ನಾಗರಿಕರು ತಮ್ಮ ಪರಿಸ್ಥಿತಿ, ತಾವಿರುವ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ಈ ವಾಟ್ಸ್​ಆ್ಯಪ್​ ನಂಬರ್​ಗೆ ಕಳಿಸಬಹುದಾಗಿದೆ.

TV9kannada Web Team

| Edited By: Lakshmi Hegde

Mar 02, 2022 | 11:33 AM

ಉಕ್ರೇನ್​ನ ಎರಡನೇ ಅತಿದೊಡ್ಡ ನಗರವಾದ ಖಾರ್ಕೀವ್​ನಲ್ಲಿ (Kharkiv) ಈಗಾಗಲೇ ರಷ್ಯಾ ದಾಳಿ ಶುರುಮಾಡಿಕೊಂಡಿದೆ. ಇದೀಗ ಅಲ್ಲಿಗೆ ರಷ್ಯಾದ ವಾಯುಗಾಮಿ ಪಡೆ ಪ್ರವೇಶ ಮಾಡಿದೆ. ಈ ಸೈನಿಕರು ಖಾರ್ಕೀವ್​​ನ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಉಕ್ರೇನ್​ ಸೇನೆ ಹೇಳಿದೆ. ಮಂಗಳವಾರ ಖಾರ್ಕೀವ್​​ನಲ್ಲಿ ವಸತಿ ಪ್ರದೇಶಗಳು, ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ನಗರದ ಮಧ್ಯಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ ಎಂದೂ ಮಾಹಿತಿ ನೀಡಿದೆ. ನಿನ್ನೆ ಇದೇ ಪ್ರದೇಶದಲ್ಲಿ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್​ ರಷ್ಯಾ ಬಾಂಬ್​ ದಾಳಿಯಿಂದ ಮೃತಪಟ್ಟಿದ್ದಾನೆ. ಸದ್ಯ ರಷ್ಯಾ ಸೇನೆಯ ಪಾಲಿಗೆ ಉಕ್ರೇನ್​ನ ಕೀವ್​ ಮತ್ತು ಖಾರ್ಕೀವ್​​ಗಳು ಬಹುದೊಡ್ಡ ಟಾರ್ಗೆಟ್​ ಆಗಿವೆ.

ಖಾರ್ಕೀವ್​​ ನಗರ ಇರುವುದು ರಷ್ಯಾ ಗಡಿಯಲ್ಲಿ. ಇಲ್ಲಿ ಬಹುಪಾಲು ಜನರು ರಷ್ಯನ್​ ಭಾಷೆಯನ್ನೇ ಮಾತನಾಡುತ್ತಾರೆ. ಸುಮಾರು 1.4 ಮಿಲಿಯನ್​ ಜನಸಂಖ್ಯೆಯಿದೆ. ಕಳೆದ ಗುರುವಾರ ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದಾಗಿನಿಂದಲೂ ಖಾರ್ಕೀವ್​ನ್ನು ರಷ್ಯಾ ಟಾರ್ಗೆಟ್​ ಮಾಡುತ್ತಲೇ ಇದ್ದು, ಈಗೀಗ ಅಲ್ಲಿ ದಾಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಇನ್ನೊಂದೆಡೆ ಉಕ್ರೇನ್​ ರಾಜಧಾನಿ ಕೀವ್​ ಕೂಡ ರಷ್ಯಾ ದಾಳಿಗೆ ತತ್ತರಿಸಿದೆ. ಕೀವ್​​ನ ಪಶ್ಚಿಮ ಭಾಗದಲ್ಲಿರುವ ಝಿಟೋಮಿರ್​ ಎಂಬಲ್ಲಿ ರಷ್ಯಾ ಸೇನೆ ನಡೆಸಿದ ಕ್ರೂಸ್​ ಕ್ಷಿಪಣಿ ದಾಳಿಗೆ ಮಗು ಸೇರಿ ನಾಲ್ವರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ತುರ್ತು ಸಹಾಯವಾಣಿ ಪ್ರಾರಂಭ: ರಷ್ಯಾ ಆಕ್ರಮಣದಿಂದ ತತ್ತರಿಸಿದ ಉಕ್ರೇನ್​​ಲ್ಲಿ ಇದೀಗ ತುರ್ತು ಸೇವೆಗಾಗಿ ಒಂದು ಸಹಾಯವಾಣಿ ಕಲ್ಪಿಸಲಾಗಿದೆ. ಉಕ್ರೇನ್​ ರಾಜ್ಯ ತುರ್ತು ಸೇವೆ ಘಟಕ  ವಾಟ್ಸ್​ಆ್ಯಪ್​ ಹೆಲ್ಪ್​​ಲೈನ್​ ಶುರು ಮಾಡಿದ್ದು, ಆ ನಂಬರ್​​ನ್ನು ಬಹಿರಂಗ ಪಡಿಸಿದೆ. ಉಕ್ರೇನ್​​ನ ಯಾವುದೇ ಭಾಗದಲ್ಲಿರುವ ನಾಗರಿಕರು ಆ ಸ್ಥಳದ ಪರಿಸ್ಥಿತಿ, ತಾವಿರುವ ಪರಿಸ್ಥಿತಿಗಳ ಬಗ್ಗೆ ವಾಟ್ಸ್​ಆ್ಯಪ್​​ನಲ್ಲಿ ಮಾಹಿತಿ ನೀಡಬಹುದಆಗಿದೆ.

ಇದನ್ನೂ ಓದಿ: Russia Ukraine War: ಉಕ್ರೇನ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada