ಯುರೋಪಿಯನ್​ ಸಂಸತ್ತಿನಲ್ಲಿ ಉಕ್ರೇನ್ ಅಧ್ಯಕ್ಷರಿಂದ ಭಾಷಣ; ಖಾರ್ಕೀವ್​ನಲ್ಲಿ ನಡೆಯುತ್ತಿರುವುದು ವಾರ್​ ಕ್ರೈಮ್​ ಎಂದ ಝೆಲೆನ್ಸ್ಕಿ

ಯುರೋಪಿಯನ್​ ಸಂಸತ್ತಿನಲ್ಲಿ ಉಕ್ರೇನ್ ಅಧ್ಯಕ್ಷರಿಂದ ಭಾಷಣ; ಖಾರ್ಕೀವ್​ನಲ್ಲಿ ನಡೆಯುತ್ತಿರುವುದು ವಾರ್​ ಕ್ರೈಮ್​ ಎಂದ ಝೆಲೆನ್ಸ್ಕಿ
ವೊಲಿಡಿಮಿರ್​ ಝೆಲೆನ್ಸ್ಕಿ

ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಮೂಲಕ ಮಾತನಾಡಿ, ಖಾರ್ಕೀವ್​​ನಲ್ಲಿ ರಷ್ಯಾ ನಡೆಸುತ್ತಿರುವುದು ಯುದ್ಧ ಅಪರಾಧ (ವಾರ್​ ಕ್ರೈಮ್​) ಎಂದು ಹೇಳಿದ್ದಾರೆ.

TV9kannada Web Team

| Edited By: Lakshmi Hegde

Mar 01, 2022 | 6:33 PM

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡಿ 6 ದಿನಗಳು ಕಳೆದಿದ್ದು, ಸಾವು-ನೋವು, ಹಾನಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಮಧ್ಯೆ ಇಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ (Volodymyr Zelensky) ಯುರೋಪಿಯನ್​ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಉಕ್ರೇನ್​ ಸಂಸತ್ತಿನ ಸ್ಪೀಕರ್​ ರುಸ್ಲಾನ್ ಸ್ಟೆಫಾಂಚುಕ್ ಕೂಡ ಮಾತನಾಡಿದ್ದಾರೆ. ಯುರೋಪಿಯನ್​ ಒಕ್ಕೂಟ ಉಕ್ರೇನ್​​ನೊಂದಿಗೆ ಇದೆ, ಉಕ್ರೇನ್​ಗೆ ಸದಾ ಬೆಂಬಲ ನೀಡುತ್ತದೆ ಎಂಬುದನ್ನು ಸಾಕ್ಷೀಕರಿಸಿ ಎಂದು ಝೆಲೆನ್ಸ್ಕಿ ಇಂದಿನ ಸೆಷನ್​ನಲ್ಲಿ ಹೇಳಿದ್ದಾರೆ. ಆಗ ಉಳಿದ ದೇಶಗಳ ನಾಯಕರು ಎದ್ದು ನಿಂತು ಚಪ್ಪಾಳೆ ಹೊಡೆಯುವ ಮೂಲಕ (ಸ್ಟ್ಯಾಂಡಿಗ್​ ಒವೇಶನ್​) ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.  

ಅಧಿವೇಶನಕ್ಕೂ ಮುನ್ನೆ ಟ್ವೀಟ್ ಮಾಡಿದ್ದ ಯುರೋಪಿಯನ್ ಪಾರ್ಲಿಮೆಂಟ್​ ಅಧ್ಯಕ್ಷರಾದ ರಾಬರ್ಟಾ ಮೆಟ್ಸೋಲಾ, ಇಂದು ಮಧ್ಯಾಹ್ನ 12.30ರ ಹೊತ್ತಿಗೆ, ಉಕ್ರೇನ್​ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಉಕ್ರೇನ್ ಅಧ್ಯಕ್ಷ ಮತ್ತು ಅಲ್ಲಿನ ಸಂಸತ್ತಿನ ಸ್ಪೀಕರ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಹಾಗೇ, ಸೆಷನ್ಸ್​ ಮುಗಿದ ಬಳಿಕ ಟ್ವೀಟ್ ಮಾಡಿ ಮಾಹಿತಿ ನೀಡಿದ ಅವರು, ಒಂದು ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಮೇಲೆ ಆಕ್ರಮಣ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂದು ಅಧಿವೇಶನದ ಉಕ್ರೇನ್​ ವಿರುದ್ಧ ರಷ್ಯಾ ಆಕ್ರಮಣದ ಬಗ್ಗೆ ಆಳವಾಗಿ ಚರ್ಚೆ ಮಾಡಲಾಯಿತು. ಶೀಘ್ರದಲ್ಲೇ ಯುರೋಪಿಯನ್ ಸಂಸತ್ತು ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವಾರ್​ ಕ್ರೈಮ್​ ಎಂದ ಉಕ್ರೇನ್​ ಅಧ್ಯಕ್ಷ

ಉಕ್ರೇನ್​ನ ಖಾರ್ಕೀವ್​​ನಲ್ಲಿ ಇಂದು ರಷ್ಯಾ ತೀವ್ರ ದಾಳಿ ನಡೆಸುತ್ತಿದೆ. ಅಲ್ಲಿನ ಪ್ರಾದೇಶಿಕ ಆಡಳಿತ ಕಚೇರಿಯ ಕಟ್ಟಡದ ಮೇಲೆಯೂ ಕ್ಷಿಪಣಿ ದಾಳಿಯಾಗಿದೆ. ಇಲ್ಲಿ ನಡೆದ ಶೆಲ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್​ ಮೃತಪಟ್ಟಿದ್ದಾರೆ. ಈ ಮಧ್ಯೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಡಿಯೋ ಮೂಲಕ ಮಾತನಾಡಿ, ಖಾರ್ಕೀವ್​​ನಲ್ಲಿ ರಷ್ಯಾ ನಡೆಸುತ್ತಿರುವುದು ಯುದ್ಧ ಅಪರಾಧ (ವಾರ್​ ಕ್ರೈಮ್​) ಎಂದು ಹೇಳಿದ್ದಾರೆ. ಅಂದರೆ ರಷ್ಯಾದ ಸೈನಿಕರು ಯುದ್ಧದ ಎಲ್ಲ ಕಾನೂನು-ನಿಯಮಗಳನ್ನೂ ಮೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ

Follow us on

Related Stories

Most Read Stories

Click on your DTH Provider to Add TV9 Kannada