ಉಕ್ರೇನ್‌ಗಾಗಿ ಹೋರಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದ 70 ಜಪಾನಿಯರು – ವರದಿ

ಉಕ್ರೇನ್​ನಲ್ಲಿ ದೇಶಕ್ಕಾಗಿ ಹೋರಾಡಲು ನೂರಾರು ಯುವಕರು ಪಣತೊಟ್ಟಿದ್ದಾರೆ. ಈ ನಡುವೆ ಜಪಾನ್​ನ ಸುಮಾರು 70 ಯುವಕರು ಸ್ವಯಂಪ್ರೇರಿತರಾಗಿ ಉಕ್ರೇನ್​ ಪರವಾಗಿ ಹೋರಾಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ. 

ಉಕ್ರೇನ್‌ಗಾಗಿ ಹೋರಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದ 70 ಜಪಾನಿಯರು - ವರದಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 02, 2022 | 12:47 PM

ರಷ್ಯಾ ಉಕ್ರೇನ್​ ನಡುವಿನ ಯುದ್ಧ(Russia Ukraine War) ಮುಂದುವರೆದಿದೆ. ಸತತ ಏಳನೇ ದಿನಕ್ಕೆ ಯುದ್ಧ ಕಾಲಿಟ್ಟಿದೆ. ಈಗಾಗಲೇ ಕೀವ್​ ಮತ್ತು ಖಾರ್ಕೀವ್​ಗಳತ್ತ ರಷ್ಯಾ ಸೇನೆ ನುಗ್ಗಿದ್ದು, ನಾಗರಿಕರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ್ದು ದೇಶಕ್ಕಾಗಿ ಹೋರಾಡಲು ನೂರಾರು ಯುವಕರು ಪಣತೊಟ್ಟಿದ್ದಾರೆ. ಈ ನಡುವೆ ಜಪಾನ್ ​(Japan)ನ ಸುಮಾರು 70 ಯುವಕರು ಸ್ವಯಂಪ್ರೇರಿತರಾಗಿ ಉಕ್ರೇನ್​ ಪರವಾಗಿ ಹೋರಾಡಲು ಬಂದಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಂತರರಾಷ್ಟ್ರೀಯ ಸೈನ್ಯ ರಚನೆಗೆ ಭಾನುವಾರ ಕರೆ ನೀಡಿದರು, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಕ್ಕೆ ದೇಶಕ್ಕಾಗಿ ಹೋರಾಡುವಂತೆ ಕರೆ ನೀಡಿದರು. ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಕರೆ ನೀಡಿದ್ದನ್ನು ಗಮನಿಸಿ ಜಪಾನ್​ನ ಸುಮಾರು 70 ಮಂದಿ ಪುರುಷರು ಉಕ್ರೇನ್​ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ 50 ಮಂದಿ  ಜಪಾನ್‌ನ ಸ್ವ-ರಕ್ಷಣಾ ಪಡೆಗಳ ಮಾಜಿ ಸದ್ಯರು ಮತ್ತು ಫ್ರೆಂಚ್ ಫಾರಿನ್ ಲೀಜನ್‌ನ ಇಬ್ಬರು ಅನುಭವಿಗಳು – ಸ್ವಯಂಸೇವಕರಾಗಿ ಹೋರಾಡಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮೈನಿಚಿ ಶಿಂಬುನ್ ದೈನಿಕವು ಟೋಕಿಯೊ ಕಂಪನಿಯನ್ನು ಉಲ್ಲೇಖಿಸಿ ಹೇಳಿದೆ.

ಫೆ,28ರಂದು ಉಕ್ರೇನ್​ ರಾಯಭಾರ ಕಚೇರಿಯು ಜಪಾನ್​ಗೆ ಧನ್ಯವಾದ ಸಲ್ಲಿಸಿದೆ. ಆದರೆ ಒಂದು ನಿಬಂಧನೆಯನ್ನು ವಿಧಿಸಿದೆ. ಅದೇನೆಂದರೆ, ಯುದ್ಧದದಲ್ಲಿ ತೊಡಗಲು ಬಯಸುವವರು ಜಪಾನ್​ನ ಸ್ವರಕ್ಷಣಾ ಪಡೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಅಥವಾ ವಿಶೇಷ ತರಬೇತಿ ಪಡೆದಿರಬೇಕು ಎಂದಿದೆ. ಬುಧವಾರ ಜಪಾನ್​ನಲ್ಲಿರುವ ಉಕ್ರೇನ್​ ರಾಯಭಾರ ಕಚೇರಿಯು, ಉಕ್ರೇನ್​ಗಾಗಿ ಐಟಿ, ವೈದ್ಯಕೀಯ ಮತ್ತು ಅಗ್ನಿಶಾಮಕ ದಳದಲ್ಲಿ ಅನುಭವವುಳ್ಳವರು ಬೇಕಾಗಿದ್ದಾರೆ ಎಂದು ಟ್ವೀಟ್​ ಮಾಡಿದೆ. ಆದರೆ ಉಕ್ರೇನ್​ಗೆ ಹೋಗಿಯೇ ಕೆಲಸಮಾಡಬೇಕೆ ಎನ್ನುವ  ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ.

ಜಪಾನ್​ ಸರ್ಕಾರ ಯಾವುದೇ ಕಾರಣಕ್ಕೂ ಉಕ್ರೇನ್​ಗೆ ಪ್ರಯಾಣ ಮಾಡದಿರಿ ಎಂದು ನಾಗರಿಕರಿಗೆ ಸೂಚನೆ ನೀಡಿದೆ. ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸ್ವಯಂ ಸೇವಕರಾಗಿ ಹೊರಟವರಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಜಪಾನ್​ನಲ್ಲಿರುವ ಉಕ್ರೇನ್​ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ  ಸ್ವಯಂಸೇವಕರನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದು ಜಪಾನ್​ ಸರ್ಕಾರ ತಿಳಿಸಿದೆ.

ಇನ್ನೂ ರಷ್ಯಾ ವಿರುದ್ಧ ಹೋರಾಟಕ್ಕೆ ಸ್ಟಾನಿಸ್ಲಾವ್ ಹೋರುನಾ ಕೂಡ ಮುಂದೆ ಬಂದಿದ್ದಾರೆ. ಒಲಿಂಪಿಕ್ ಪದಕ ವಿಜೇತ ಸ್ಟಾನಿಸ್ಲಾವ್  ರಷ್ಯಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ.  ಸ್ಟಾನಿಸ್ಲಾವ್ ಉಕ್ರೇನ್​ನ ಓಲಂಪಿಕ್ಸ್​ನಲ್ಲಿ ಕಳೆದ ಬಾರಿ ಕಂಚಿನ ಪದಕ ಗೆದ್ದಿದ್ದರು.

ಇದನ್ನೂ ಓದಿ:

Fact Check: ಉಕ್ರೇನ್​ ಮೇಲೆ ರಷ್ಯಾ ಶೆಲ್​ ದಾಳಿ ನಡೆಸಿದ ವಿಡಿಯೋ ವೈರಲ್​: ಇದರ ಅಸಲಿಯತ್ತೇನು?

Published On - 12:40 pm, Wed, 2 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ