’ಸಿಎಂ ಯೋಗಿ ಆದಿತ್ಯನಾಥ್​ ಕೂಡ ಪ್ರಧಾನಿ ಮೋದಿಯವರಂತೆ.. 4 ವರ್ಷಗಳಲ್ಲಿ ಒಂದಿನವೂ ರಜೆ ಪಡೆದಿಲ್ಲ‘

TV9 Digital Desk

| Edited By: Lakshmi Hegde

Updated on:Sep 13, 2021 | 10:06 AM

ಯಾರು ತಮ್ಮ ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ, ಸಮಾಜಕ್ಕಾಗಿ ದುಡಿಯುತ್ತಾರೋ ಅವರೇ ನಿಜವಾದ ದೇಶಭಕ್ತರು. ಅಂಥವರಿಂದಲೇ ಬದಲಾವಣೆ ಸಾಧ್ಯ ಎಂದು ದಿನೇಶ್​ ಶರ್ಮಾ ಹೇಳಿದ್ದಾರೆ.

’ಸಿಎಂ ಯೋಗಿ ಆದಿತ್ಯನಾಥ್​ ಕೂಡ ಪ್ರಧಾನಿ ಮೋದಿಯವರಂತೆ.. 4 ವರ್ಷಗಳಲ್ಲಿ ಒಂದಿನವೂ ರಜೆ ಪಡೆದಿಲ್ಲ‘
ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಪ್ರಧಾನಿ ಮೋದಿ
Follow us

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಪ್ರಧಾನಿಯಾಗಿ ಕಳೆದ ಏಳುವರ್ಷಗಳಲ್ಲಿ ಒಂದು ದಿನವೂ ರಜೆ ಪಡೆಯಲಿಲ್ಲ. ಹಾಗೇ, ನಮ್ಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಮುಖ್ಯಮಂತ್ರಿಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್​ ಶರ್ಮಾ (UP Deputy CM)  ಹೇಳಿದ್ದಾರೆ. ಗ್ರೇಟರ್ ಇಂಡಿಯಾದಲ್ಲಿ ಭಾನುವಾರ ನಡೆದ ಪ್ರಬುದ್ಧ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ಮೋದಿಯವರಿಂದಾಗಿ ಇಡೀ ದೇಶ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಹಾಗೇ, ಉತ್ತರಪ್ರದೇಶ ಅಭಿವೃದ್ಧಿಯಾಗಿದ್ದು ಯೋಗಿ ಆದಿತ್ಯನಾಥ್​ರಿಂದ ಎಂದು ಹೇಳಿದರು.  

ಯಾರು ತಮ್ಮ ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳದೆ, ಸಮಾಜಕ್ಕಾಗಿ ದುಡಿಯುತ್ತಾರೋ ಅವರೇ ನಿಜವಾದ ದೇಶಭಕ್ತರು. ಅಂಥವರಿಂದಲೇ ಬದಲಾವಣೆ ಸಾಧ್ಯ. ಬಿಜೆಪಿ ಯಾವತ್ತೂ ಜಾತಿ-ಪಂಥದ ಹೆಸರಲ್ಲಿ ಬೇಧ-ಭಾವ ಮಾಡಿಲ್ಲ. ಈ ಬಿಜೆಪಿ ಸರ್ಕಾರದ ಯೋಜನೆಗಳೆಲ್ಲವೂ ಸಮಾಜದ ಪ್ರತಿ ವಿಭಾಗದ ಜನರಿಗ ಸೇರುವಂಥದ್ದಾಗಿದೆ. ಪ್ರತಿಯೊಬ್ಬರಿಗೂ ಅನುಕೂಲವಾಗುವಂಥದ್ದೇ ಆಗಿದೆ ಎಂದು ಶರ್ಮಾ ಹೇಳಿದ್ದಾರೆ.

ಬಿಜೆಪಿ ಎಂದಿಗೂ ಹಿಂದು ಮತ್ತು ಮುಸ್ಲಿಂ ನಡುವೆ ತಾರತಮ್ಯ ಮಾಡಿಲ್ಲ. ಉತ್ತರ ಪ್ರದೇಶದಲ್ಲಿ ಇಷ್ಟು ದಿನದ ಯೋಗಿ ಆದಿತ್ಯನಾಥ್​ ಆಡಳಿತದಲ್ಲಿ ಒಂದೇ ಒಂದು ಬಾರಿಯೂ ಮುಸ್ಲಿಮರ ಧಂಗೆ ನಡೆದಿಲ್ಲ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅವರು, ನಮ್ಮ ಬಿಜೆಪಿ ಪಕ್ಷ ಎಲ್ಲರನ್ನೂ ಒಳಗೊಂಡು ಮುಂದೆ ಸಾಗುವುದರಲ್ಲಿ ನಂಬಿಕೆ ಇಟ್ಟಿದೆ. ಈಗಾಗಲೇ ರೈತರ ಜತೆ ಮಾತುಕತೆ ನಡೆಸಲಾಗಿದೆ. ನಂತರ ಹಿಂದುಳಿದ ವರ್ಗಗಳ ಜತೆಯೂ ಸಂವಾದ ನಡೆಸಲಾಗಿತ್ತು. ಇದೀಗ ಪ್ರಬುದ್ಧ ವರ್ಗದವರ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಲೆ ಏರಿಕೆ ಖಂಡಿಸಿ ‘ಕೈ’ ನಾಯಕರ ಎತ್ತಿನಗಾಡಿ ಚಲೋ

ಬೆಂಗಳೂರಿನ ರಸ್ತೆಗಳಲ್ಲಿ ಹೆಚ್ಚಾಯ್ತು ಸಿರಿವಂತರ ಜಾಲಿ ರೈಡ್​; ಅತಿ ವೇಗದಲ್ಲಿ ಓಡಾಡಿದ ಉದ್ಯಮಿಯ ಬೆನ್ಜ್​ ಕಾರು ಪೊಲೀಸರ ವಶಕ್ಕೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada