ಲಾಕ್ ಡೌನ್: ಗುಜರಾತ್​ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ 4385 ಮೀನುಗಾರರು 56 ಬಸ್​ಗಳಲ್ಲಿ ವಾಪಸ್!

ಹೈದರಾಬಾದ್: ಗುಜರಾತ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೀನುಗಾರರು ಇಂದು ಆಂಧ್ರಪ್ರದೇಶ ಜಗ್ಗಯ್ಯಪೇಟೆಗೆ ಹಿಂತಿರುಗಿದ್ದಾರೆ. ಮೀನು ಹಿಡಿಯುತ್ತಾ ಗುಜರಾತ್​ನತ್ತ ತೆರಳಿದ್ದ ಮೀನುಗಾರರು ಲಾಕ್ ಡೌನ್ ಕಾರಣ ಗುಜರಾತ್​ನಲ್ಲಿಯೇ ಸಿಕ್ಕಿ ಹಾಕಿಕೊಳ್ಳುವಂತೆ ಆಗಿತ್ತು. ಇಂದು ಒಟ್ಟು 4385 ಮೀನುಗಾರರು 56 ಬಸ್​ಗಳಲ್ಲಿ ಆಂಧ್ರಕ್ಕೆ ವಾಪಸ್ಸಾಗಿದ್ದಾರೆ. ಗುಜರಾತ್ ನಿಂದ ಹಿಂತಿರುಗಿದ ಮೀನುಗಾರರನ್ನು ಸ್ವಾಗತಿಸಿದ ಆಂಧ್ರಪ್ರದೇಶದ ಅಧಿಕಾರಿಗಳು ಅವರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಆಂಧ್ರಪ್ರದೇಶ ಸಿ.ಎಂ. ಜಗನ್ ಮನವಿ ಮೇರೆಗೆ ಮೀನುಗಾರರನ್ನು 12 ಬಸ್​ಗಳಲ್ಲಿ ಕಳುಹಿಸಿಕೊಟ್ಟ ಗುಜರಾತ್ ಸಿ.ಎಂ. ಗೆ ಆಂಧ್ರ […]

ಲಾಕ್ ಡೌನ್: ಗುಜರಾತ್​ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದ 4385 ಮೀನುಗಾರರು 56 ಬಸ್​ಗಳಲ್ಲಿ ವಾಪಸ್!
ಸಾಧು ಶ್ರೀನಾಥ್​ Edited By:

Updated on: Feb 20, 2024 | 1:02 PM

ಹೈದರಾಬಾದ್: ಗುಜರಾತ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೀನುಗಾರರು ಇಂದು ಆಂಧ್ರಪ್ರದೇಶ ಜಗ್ಗಯ್ಯಪೇಟೆಗೆ ಹಿಂತಿರುಗಿದ್ದಾರೆ. ಮೀನು ಹಿಡಿಯುತ್ತಾ ಗುಜರಾತ್​ನತ್ತ ತೆರಳಿದ್ದ ಮೀನುಗಾರರು ಲಾಕ್ ಡೌನ್ ಕಾರಣ ಗುಜರಾತ್​ನಲ್ಲಿಯೇ ಸಿಕ್ಕಿ ಹಾಕಿಕೊಳ್ಳುವಂತೆ ಆಗಿತ್ತು.

ಇಂದು ಒಟ್ಟು 4385 ಮೀನುಗಾರರು 56 ಬಸ್​ಗಳಲ್ಲಿ ಆಂಧ್ರಕ್ಕೆ ವಾಪಸ್ಸಾಗಿದ್ದಾರೆ. ಗುಜರಾತ್ ನಿಂದ ಹಿಂತಿರುಗಿದ ಮೀನುಗಾರರನ್ನು ಸ್ವಾಗತಿಸಿದ ಆಂಧ್ರಪ್ರದೇಶದ ಅಧಿಕಾರಿಗಳು ಅವರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಆಂಧ್ರಪ್ರದೇಶ ಸಿ.ಎಂ. ಜಗನ್ ಮನವಿ ಮೇರೆಗೆ ಮೀನುಗಾರರನ್ನು 12 ಬಸ್​ಗಳಲ್ಲಿ ಕಳುಹಿಸಿಕೊಟ್ಟ ಗುಜರಾತ್ ಸಿ.ಎಂ. ಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us