Lok Sabha Election: ಲೋಕಸಭಾ ಚುನಾವಣೆಗೆ ಯಾವ ರಾಜ್ಯದಲ್ಲಿ ಯಾವಾಗ ಮತದಾನ?
ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರ ಪ್ರದೇಶ, ಚಂಡೀಗಢ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ, ಉತ್ತರಾಖಂಡ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.
ದೆಹಲಿ ಮಾರ್ಚ್ 16: ಮುಖ್ಯ ಚುನಾವಣಾ ಆಯುಕ್ತ(chief election commissioner of india) ರಾಜೀವ್ ಕುಮಾರ್ ಇಂದು (ಶನಿವಾರ) 2024 ರ ಲೋಕಸಭಾ ಚುನಾವಣೆಯ (Lok Sabha Election) ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಪ್ರಿಲ್ 19 ರಿಂದ ಮತದಾನ ಆರಂಭವಾಗಲಿದ್ದು, ದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ದಿನ ಮತದಾನ ನಡೆಯಲಿದ್ದು, ಮೂರು ರಾಜ್ಯಗಳಲ್ಲಿ ಎಲ್ಲಾ ಏಳು ಹಂತಗಳಲ್ಲಿ ಮತದಾನವನ್ನು ನಡೆಯಲಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಹಂತದಲ್ಲಿ ಚುನಾವಣೆ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ಹಂತದಲ್ಲಿ ಮತದಾನ ಮಾಡುತ್ತವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತದಲ್ಲಿ ಚುನಾವಣೆ ನಡೆಯಲಿದೆ.
ಯಾವ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಎಷ್ಟು ಹಂತಗಳಲ್ಲಿ ಮತದಾನ?
ಈ ರಾಜ್ಯಗಳಲ್ಲಿ ನಡೆಯಲಿದೆ ಒಂದೇ ಹಂತದ ಮತದಾನ
ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರ ಪ್ರದೇಶ, ಚಂಡೀಗಢ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ, ಉತ್ತರಾಖಂಡ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು.
ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು
ಕರ್ನಾಟಕ, ರಾಜಸ್ಥಾನ, ತ್ರಿಪುರ, ಮಣಿಪುರ
ಮೂರು ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು
ಛತ್ತೀಸ್‌ಗಢ, ಅಸ್ಸಾಂ
ನಾಲ್ಕು ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು
ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್
ಐದು ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು
ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ
ಏಳು ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ
ಏಳು ಹಂತದ ಚುನಾವಣೆ ದಿನಾಂಕ
ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಏಳು ಹಂತದ ಚುನಾವಣೆ ನಡೆಯಲಿದೆ
ಯಾವ ರಾಜ್ಯದಲ್ಲಿ ಯಾವ ದಿನದಂದು ಮತದಾನ?
- ಉತ್ತರ ಪ್ರದೇಶ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1
- ಬಿಹಾರ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1
- ಪಶ್ಚಿಮ ಬಂಗಾಳ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1
- ಮಹಾರಾಷ್ಟ್ರ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20
- ಜಮ್ಮು ಮತ್ತು ಕಾಶ್ಮೀರ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20
- ಒಡಿಶಾ: ಮೇ 13, ಮೇ 20, ಮೇ 25 ಮತ್ತು ಜೂನ್ 1
- ಮಧ್ಯಪ್ರದೇಶ: ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13
- ಜಾರ್ಖಂಡ್: ಮೇ 13, ಮೇ 20, ಮೇ 25 ಮತ್ತು ಜೂನ್ 1
- ಛತ್ತೀಸ್‌ಗಢ: ಏಪ್ರಿಲ್ 19, ಏಪ್ರಿಲ್ 26, ಮೇ 7
- ಅಸ್ಸಾಂ: ಏಪ್ರಿಲ್ 19, ಏಪ್ರಿಲ್ 26, ಮೇ 7
- ಕರ್ನಾಟಕ: ಏಪ್ರಿಲ್ 26, ಮೇ 7
- ರಾಜಸ್ಥಾನ: ಏಪ್ರಿಲ್ 19, ಏಪ್ರಿಲ್ 26
- ತ್ರಿಪುರ: ಏಪ್ರಿಲ್ 19, ಏಪ್ರಿಲ್ 26
- ಮಣಿಪುರ: ಏಪ್ರಿಲ್ 19, ಏಪ್ರಿಲ್ 26
- ಕೇರಳ: ಏಪ್ರಿಲ್ 26
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ 7 ಹಂತದ ಮತದಾನ; ಇಲ್ಲಿದೆ ವೇಳಾಪಟ್ಟಿ
ಏಪ್ರಿಲ್ 19 ರಂದು 1 ನೇ ಹಂತದ ಮತದಾನ, ಏಪ್ರಿಲ್ 26 ರಂದು 2 ನೇ ಹಂತದ ಮತದಾನ, ಮೇ 7 ರಂದು 3 ನೇ ಹಂತದ ಮತದಾನ, ಮೇ 13 ರಂದು 4 ನೇ ಹಂತದ ಮತದಾನ, ಮೇ 20 ರಂದು 5 ನೇ ಹಂತದ ಮತದಾನ, ಮೇ 25 ರಂದು 6 ನೇ ಹಂತದ ಮತದಾನ ಮತ್ತು ಜೂನ್ 1ರಂದು 7 ನೇ ಹಂತದ ಮತದಾನ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Sat, 16 March 24