Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಕಾಂಗ್ರೆಸ್​ನ ಇಬ್ಬರು ಮಾಜಿ ಶಾಸಕರು ರಾಜೀನಾಮೆ

ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಅರವಿಂದರ್ ಸಿಂಗ್ ಲವ್ಲಿ ಅವರ ಹಠಾತ್ ರಾಜೀನಾಮೆ ನಂತರ ಪಕ್ಷ ತೊರೆದಿದ್ದಾರೆ.

ದೆಹಲಿ: ಕಾಂಗ್ರೆಸ್​ನ ಇಬ್ಬರು ಮಾಜಿ ಶಾಸಕರು ರಾಜೀನಾಮೆ
ಅರವಿಂದರ್ ಬೆಂಬಲಿಗರುImage Credit source: India Today
Follow us
ನಯನಾ ರಾಜೀವ್
|

Updated on: May 01, 2024 | 10:39 AM

ದೆಹಲಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ(Arvinder Singh Lovely) ರಾಜೀನಾಮೆ ನೀಡುತ್ತಿದ್ದಂತೆ ಮತ್ತೆರಡು ವಿಕೆಟ್ ಪತನಗೊಂಡಿದೆ. ಕಾಂಗ್ರೆಸ್(Congress)​ನ ಮಾಜಿ ಶಾಸಕರಿಬ್ಬರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಬುಧವಾರ ದೆಹಲಿ ಕಾಂಗ್ರೆಸ್‌ನಲ್ಲಿ ಗೊಂದಲ ತೀವ್ರಗೊಂಡಿದೆ.

ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಿರ್ಧಾರವನ್ನು ಮಾಜಿ ಶಾಸಕರು ಟೀಕಿಸಿದರು ಮತ್ತು ವಾಯುವ್ಯ ದೆಹಲಿ ಕ್ಷೇತ್ರದಿಂದ ಉದಿತ್ ರಾಜ್ ಅವರ ನಾಮನಿರ್ದೇಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

ದೆಹಲಿ ಕಾಂಗ್ರೆಸ್​ಗೆ ಹಂಗಾಮಿ ಅಧ್ಯಕ್ಷರಾಗಿ ದೇವೇಂದ್ರ ಯಾದವ್ ನೇಮಕ ದೆಹಲಿ ಕಾಂಗ್ರೆಸ್(Delhi Congress)​ನ ಹಂಗಾಮಿ ಅಧ್ಯಕ್ಷರಾಗಿ ದೇವೇಂದ್ರ ಯಾದವ್(Devendra Yadav) ನೇಮಕಗೊಂಡಿದ್ದಾರೆ. ಪಕ್ಷವು ದೇವೇಂದ್ರ ಯಾದವ್ ಅವರನ್ನು ದೆಹಲಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಅರವಿಂದರ್ ಸಿಂಗ್ ಲವ್ಲಿ ಅವರು ಶನಿವಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ನಂತರ ಅದನ್ನು ಪಕ್ಷವು ಅಂಗೀಕರಿಸಿತು.

ಮತ್ತಷ್ಟು ಒದಿ: ದೆಹಲಿ ಕಾಂಗ್ರೆಸ್​ಗೆ ಹಂಗಾಮಿ ಅಧ್ಯಕ್ಷರಾಗಿ ದೇವೇಂದ್ರ ಯಾದವ್ ನೇಮಕ

ನಾಮನಿರ್ದೇಶನದ ಸಮಯದಲ್ಲಿ, ಅಧ್ಯಕ್ಷರು ಚುನಾವಣಾ ಆಯೋಗದ ಮುಂದೆ ತಮ್ಮ ಅಭ್ಯರ್ಥಿಗಳನ್ನು ಪರಿಶೀಲಿಸುತ್ತಾರೆ. ಹಾಗಾಗಿ ನಾಯಕರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡುವುದು ಅನಿವಾರ್ಯವಾಗಿದೆ. ಅರವಿಂದರ್ ಸಿಂಗ್ ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ದೆಹಲಿ ಪ್ರದೇಶ ಕಾಂಗ್ರೆಸ್​ ಸಮಿತಿಯ ಹಂಗಾಮಿ ಅಧ್ಯಕ್ಷರನ್ನಾಗಿ ದೇವೇಂದ್ರ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ