Stone Quarry Explosion: ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಫೋಟ, ಮೂವರ ಶವ ಪತ್ತೆ

ಕಲ್ಲು ಕ್ವಾರಿಯಲ್ಲಿ ಸ್ಫೋಟ ಸಂಭವಿಸಿ 3 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಶೇಖರಣಾ ಕೊಠಡಿಯಲ್ಲಿ ಸ್ಫೋಟಕಗಳಿದ್ದು ಅಲ್ಲೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

Stone Quarry Explosion: ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಫೋಟ, ಮೂವರ ಶವ ಪತ್ತೆ
ತಮಿಳುನಾಡು
Follow us
|

Updated on: May 01, 2024 | 12:09 PM

ತಮಿಳುನಾಡಿನ ವಿರುದುನಗರ ಜಿಲ್ಲೆಯ ಕರಿಯಾಪಟ್ಟಿ ಪ್ರದೇಶದಲ್ಲಿ ಬುಧವಾರ ಕಲ್ಲು ಕ್ವಾರಿಯಲ್ಲಿ ಸ್ಫೋಟ(Stone Quarry Explosion) ಸಂಭವಿಸಿದ್ದು ಹಲವು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೂವರ ಶವ ಪತ್ತೆಯಾಗಿದೆ, ಭಾರೀ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಶೇಖರಣಾ ಕೊಠಡಿಯಲ್ಲಿ ಸ್ಫೋಟಕಗಳಿದ್ದು ಅಲ್ಲೇ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ರಕ್ಷಣಾ ತಂಡಗಳು ಅವಶೇಷಗಳನ್ನು ಎಚ್ಚರಿಕೆಯಿಂದ ತೆರವುಗೊಳಿಸುತ್ತಿವೆ ಮತ್ತು ಸ್ಫೋಟಗೊಳ್ಳದ ವಸ್ತುಗಳನ್ನು ಹುಡುಕುತ್ತಿವೆ.

ಸುರಕ್ಷತಾ ಅಪಾಯಗಳು ಮತ್ತು ಓವರ್‌ಲೋಡ್ ಟ್ರಕ್‌ಗಳನ್ನು ಒಳಗೊಂಡ ಅನೇಕ ವಿಚಾರಗಳ ಬಗ್ಗೆ ಹಲವು ದಿನಗಳಿಂದ ದೂರು ಬರುತ್ತಿತ್ತು. ಸ್ಫೋಟದ ಮೊದಲು ಕ್ವಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಕಲ್ಲು ಕ್ವಾರಿ ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮತ್ತಷ್ಟು ಓದಿ: International Mine Awareness Day 2024 : ಭೂ ಗರ್ಭದ ಸ್ಫೋಟ, ಜನರ ಜೀವಕ್ಕೆ ಆಪತ್ತು ಖಚಿತ!

ಈ ವರ್ಷದ ಫೆಬ್ರವರಿಯಲ್ಲಿ ವಿರುಧನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 10 ಮಂದಿ ಗಾಯಗೊಂಡಿದ್ದರು.

ಫೆಬ್ರವರಿ 17 ರಂದು ಮಧ್ಯಾಹ್ನ 12.30 ರ ಸುಮಾರಿಗೆ ವಿರುದುನಗರದ ಕುಂಡಯಿರುಪ್ಪು ಗ್ರಾಮದ ಪಟಾಕಿ ತಯಾರಿಕಾ ಘಟಕದ ರಾಸಾಯನಿಕ ಮಿಶ್ರಣ ಕೊಠಡಿಯಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ತಮಿಳುನಾಡು ರಸ್ತೆ ಅಪಘಾತ ಗಾಯಗೊಂಡಿದ್ದರು. ನಿಜವಾಗಿ ಖಾಸಗಿ ಬಸ್ಸೊಂದು ಯೆರ್ಕಾಡ್‌ನಿಂದ ಸೇಲಂಗೆ ಪ್ರಯಾಣಿಕರೊಂದಿಗೆ ಹೋಗುತ್ತಿತ್ತು. ಸೇಲಂನ ಯೆರ್ಕಾಡ್ ಘಾಟ್ ರಸ್ತೆಯಲ್ಲಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ