AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಶೀಲ್ಡ್ ಪಡೆದ 10 ಲಕ್ಷ ಜನರಲ್ಲಿ ಏಳೆಂಟು ಮಂದಿಗೆ ಮಾತ್ರ ಬ್ಲಡ್​ಕ್ಲಾಟಿಂಗ್ ರಿಸ್ಕ್: ಭಯ ನಿವಾರಿಸಲು ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ ಯತ್ನ

Covishield vaccine side effect risk too low: ಬ್ರಿಟನ್ ಮತ್ತು ಸ್ವೀಡನ್ ಮೂಲದ ಅಸ್ಟ್ರಾಜೆನೆಕಾ ಕಂಪನಿ ತಾನು ತಯಾರಿಸಿ AZ Vaxzevria ಕೋವಿಡ್ ಲಸಿಕೆ ಅಪರೂಪಕ್ಕೆ ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮ ಬೀರಬಹುದು ಎಂದು ಕೋರ್ಟ್ ವಿಚಾರಣೆ ವೇಳೆ ಮಾಹಿತಿ ನೀಡಿತ್ತು. ಆ ಲಸಿಕೆಯನ್ನೇ ಸೀರಂ ಇನ್ಸ್​ಟಿಟ್ಯೂಟ್ ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ತಯಾರಿಸಿ ಬಿಡುಗಡೆ ಮಾಡಿತ್ತು. ಶೇ. 90ರಷ್ಟು ಭಾರತೀಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ಧಾರೆ. ಐಸಿಎಂಆರ್​ನ ಮಾಜಿ ವಿಜ್ಞಾನಿಯೊಬ್ಬರು ಕೋವಿಶೀಲ್ಡ್ ವ್ಯಾಕ್ಸಿನ್​ನಿಂದ ಅಡ್ಡಪರಿಣಾಮ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೋವಿಶೀಲ್ಡ್ ಪಡೆದ 10 ಲಕ್ಷ ಜನರಲ್ಲಿ ಏಳೆಂಟು ಮಂದಿಗೆ ಮಾತ್ರ ಬ್ಲಡ್​ಕ್ಲಾಟಿಂಗ್ ರಿಸ್ಕ್: ಭಯ ನಿವಾರಿಸಲು ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ ಯತ್ನ
ಕೋವಿಶೀಲ್ಡ್ ಲಸಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2024 | 12:57 PM

Share

ನವದೆಹಲಿ, ಮೇ 1: ಕೋವಿಶೀಲ್ಡ್ ಲಸಿಕೆ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೋವಿಶೀಲ್ಡ್ ಲಸಿಕೆ ಅಭಿವೃದ್ದಿಪಡಿಸಿದ ಬ್ರಿಟನ್ ಮೂಲದ ಅಸ್ಟ್ರಾಜೆನೆಕಾ ಸಂಸ್ಥೆ (AstraZeneca) ಈ ಲಸಿಕೆ ಅಪರೂಪದ ಪ್ರಕರಣದಲ್ಲಿ ನಿರ್ದಿಷ್ಟ ಅಡ್ಡಪರಿಣಾಮ ಮಾಡಬಹುದು ಎಂದು ಕೋರ್ಟ್ ವಿಚಾರಣೆಯೊಂದರಲ್ಲಿ ಹೇಳಿದೆ. ಬ್ಲಡ್ ಕ್ಲಾಟಿಂಗ್ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್​ಲೆಟ್ ಕುಸಿತದ ಸಮಸ್ಯೆ ಕಾಣಬಹುದು ಎಂದು ಮಾಹಿತಿ ನೀಡಿದೆ. ಅಸ್ಟ್ರಾಜೆನಿಕಾ ತಯಾರಿಸಿದ AZ Vaxzevria ಎಂಬ ಲಸಿಕೆಯನ್ನು ಸೀರಂ ಇನ್ಸ್​ಟಿಟ್ಯೂಟ್ ಭಾರತದಲ್ಲಿ ತಯಾರಿಸಿ ಕೋವಿಶೀಲ್ಡ್ ಬ್ರ್ಯಾಂಡ್​ನಲ್ಲಿ ಬಿಡುಗಡೆ ಮಾಡಿತ್ತು. ಶೇ. 90ರಷ್ಟು ಭಾರತೀಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಟ್ರಾಜೆನೆಕಾ ತಿಳಿಸಿರುವ ಅಡ್ಡಪರಿಣಾಮ ಸಾಧ್ಯತೆಯ ವಿಚಾರ ಬಹಳ ಮಂದಿಗೆ ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಐಸಿಎಂಆರ್​ನ ಮಾಜಿ ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ (Dr Raman Gagakhedkar) ಪ್ರತಿಕ್ರಿಯಿಸಿದ್ದು, ಕೋವಿಶೀಲ್ಡ್ ಲಸಿಕೆಯಿಂದ ಯಾವ ಅಪಾಯವೂ ಇಲ್ಲ ಎಂದು ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ಕೋವಿಶೀಲ್ಡ್ ಪಡೆದ ಪ್ರತೀ 10 ಲಕ್ಷ ಜನರಲ್ಲಿ ಏಳು ಅಥವಾ ಎಂಟು ಮಂದಿಗೆ ಮಾತ್ರ ಟಿಟಿಎಸ್ ಸಮಸ್ಯೆ ತಲೆದೋರಬಹುದು ಎಂದು ಭಾರತದ ಅಗ್ರಮಾನ್ಯ ಎಪಿಡೆಮಿಯೊಲಾಜಿಸ್ಟ್ ಆಗಿರುವ ಡಾ. ರಮಣ್ ಹೇಳಿದ್ದಾರೆ. ಇಲ್ಲಿ ಟಿಟಿಎಸ್ ಎಂದರೆ ಥ್ರಾಂಬೋಸಿಸ್ ಥ್ರಾಂಬೋಸೈಟೋಪೆನಿಯಾ ಸಿಂಡ್ರೋಮ್. ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದು.

ಇದನ್ನೂ ಓದಿ: ಕೋವಿಶೀಲ್ಡ್​​ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ, ಟಿಟಿಎಸ್​ಗೂ ಕಾರಣವಾಗಬಹುದು

ಮೂರು ತಿಂಗಳಲ್ಲೇ ಅಡ್ಡಪರಿಣಾಮ ಬರುತ್ತೆ

ಮಾಜಿ ಐಸಿಎಂಆರ್ ವಿಜ್ಞಾನಿ ಪ್ರಕಾರ ಕೋವಿಶೀಲ್ಡ್​ನ ಲಸಿಕೆಯ ಮೊದಲ ಡೋಸ್ ಪಡೆದಾಗ ಮಾತ್ರ ಅದರ ಅಡ್ಡಪರಿಣಾಮ ಸಾಧ್ಯತೆ ಗರಿಷ್ಠ ಇರುತ್ತದೆ. ಎರಡನೇ ಡೋಸ್​ನಲ್ಲಿ ರಿಸ್ಕ್ ಕಡಿಮೆ ಆಗುತ್ತದೆ. ಮೂರನೇ ಡೋಸ್​ನಲ್ಲಿ ಇನ್ನೂ ಕಡಿಮೆ ರಿಸ್ಕ್ ಇರುತ್ತದೆ. ಯಾವುದೇ ಸೈಡ್ ಎಫೆಕ್ಟ್ ಬರುವುದಿದ್ದರೆ ಎರಡು ಅಥವಾ ಮೂರು ತಿಂಗಳಲ್ಲಿ ಅದು ಕಾಣಿಸಿಕೊಳ್ಳುತ್ತದೆ,’ ಎಂದು ಡಾ. ರಮಣ್ ಗಂಗಾಖೇಡ್ಕರ್ ಹೇಳಿದ್ದಾರೆಂದು ನ್ಯೂಸ್18 ವರದಿ ಮಾಡಿದೆ.

‘ಲಸಿಕೆ ಆರಂಭವಾದ ಆರು ತಿಂಗಳಲ್ಲಿ ಟಿಟಿಎಸ್ ಅನ್ನು ಅಪರೂಪದ ಅಡ್ಡಪರಿಣಾಮ ಎಂದು ಗುರುತಿಸಲಾಯಿತು. ಅಡೀನೋವೈರಸ್ ನೆಕ್ಟರ್ ವ್ಯಾಕ್ಸಿನ್​ಗಳ ಅಡ್ಡಪರಿಣಾಮ ಇದು ಎಂಬುದು ಗೊತ್ತಾದ ಸಂಗತಿ. ಹೀಗಾಗಿ, ಈ ವಿಚಾರ ಹೊಸದೇನಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಕಲ್ಲು ಕ್ವಾರಿಯಲ್ಲಿ ಭಾರಿ ಸ್ಫೋಟ, ಮೂವರ ಶವ ಪತ್ತೆ

ಹಾಗೆಯೇ, ಕೋವಿಶೀಲ್ಡ್ ಲಿಸಿಕೆ ಪಡೆದ ಪ್ರತೀ 10 ಲಕ್ಷ ಜನರಲ್ಲಿ ಏಳರಿಂದ ಎಂಟು ಜನರಿಗೆ ಮಾತ್ರ ಅಡ್ಡಪರಿಣಾಮದ ರಿಸ್ಕ್ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಲಸಿಕೆ ಪಡೆದ ಕೋಟ್ಯಂತರ ಜನರಿಗೆ ಇದು ಮಾಡಿರುವ ಸಕಾರಾತ್ಮಕ ಪರಿಣಾಮ ಮಾಡಿರುವುದು ಮತ್ತು ಈ ಜನರು ಸಹಜವಾಗಿ ಇರುವುದನ್ನು ಗಮನಿಸಿದರೆ ಲಸಿಕೆಯ ಸೈಡ್ ಎಫೆಕ್ಟ್ ತೀರಾ ನಗಣ್ಯ ಎನಿಸುತ್ತದೆ ಎಂದು ಡಾ. ಗಂಗಾಖೇಡ್ಕರ್ ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಐಸಿಎಂಆರ್ ವತಿಯಿಂದ ಸಾರ್ವಜನಿಕರಿಗೆ ಇಂಚಿಂಚು ಮಾಹಿತಿ ನೀಡುತ್ತಿದ್ದವರು ಇದೇ ಡಾ. ರಮಣ್ ಗಂಗಾಖೇಡ್ಕರ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್