Lok Sabha Election 2024: ಕೈಕೊಟ್ಟ ಮತಗಟ್ಟೆ ಸಿಬ್ಬಂದಿ ಆರೋಗ್ಯ, ಕೆಲವೆಡೆ ಕೆಟ್ಟು ಹೋದ ಇವಿಎಂ ಇಲ್ಲಿದೆ ಮತದಾನದ ಸ್ಥಿತಿಗತಿ

|

Updated on: Apr 19, 2024 | 9:01 AM

ಉತ್ತರಾಖಂಡದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಇದರಲ್ಲಿ ಪೌರಿ-ಗಢವಾಲ್, ತಿಹ್ರಿ, ಅಲ್ಮೋರಾ, ಹರಿದ್ವಾರ ಮತ್ತು ನೈನಿತಾಲ್ ಸ್ಥಾನಗಳು ಸೇರಿವೆ. ಆದರೆ, ಮತದಾನ ಆರಂಭವಾಗುತ್ತಿದ್ದಂತೆಯೇ ವಿವಿಧ ಬೂತ್‌ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು.

Lok Sabha Election 2024: ಕೈಕೊಟ್ಟ ಮತಗಟ್ಟೆ ಸಿಬ್ಬಂದಿ ಆರೋಗ್ಯ, ಕೆಲವೆಡೆ ಕೆಟ್ಟು ಹೋದ ಇವಿಎಂ ಇಲ್ಲಿದೆ ಮತದಾನದ ಸ್ಥಿತಿಗತಿ
ಮತದಾನ
Image Credit source: Jagran
Follow us on

ಪೌರಿ-ಗಢವಾಲ್, ತೆಹ್ರಿ, ಅಲ್ಮೋರಾ, ಹರಿದ್ವಾರ ಮತ್ತು ನೈನಿತಾಲ್ ಸೇರಿದಂತೆ ಉತ್ತರಾಖಂಡ(Uttarakhand)ದ ಐದು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ(Voting) ನಡೆಯುತ್ತಿದೆ. ಆದರೆ, ಮತದಾನ ಆರಂಭವಾಗುತ್ತಿದ್ದಂತೆಯೇ ವಿವಿಧ ಬೂತ್‌ಗಳಿಂದ ಸಮಸ್ಯೆಗಳು ಬೆಳಕಿಗೆ ಬರಲಾರಂಭಿಸಿದವು. ಈ ಮಧ್ಯೆ ರಾಮನಗರ ಜಿಲ್ಲೆಯ ಶಿವಪುರ ಬೈಲಜುಡಿಯಲ್ಲಿ 3 ಮತಗಟ್ಟೆ ಅಧಿಕಾರಿಗಳ ಆರೋಗ್ಯ ಹಠಾತ್ ಹದಗೆಟ್ಟಿತ್ತು.

ಇದಾದ ಬಳಿಕ ಅವರ ಜಾಗಕ್ಕೆ 3 ಹೊಸ ಅಧಿಕಾರಿಗಳನ್ನು ಕರೆಸಲಾಗಿತ್ತು. ಏತನ್ಮಧ್ಯೆ, ಅಲ್ಮೋರಾ ಲೋಕಸಭಾ ಕ್ಷೇತ್ರದ ಬೂತ್ ಸಂಖ್ಯೆ 107 ಖಾತ್ಯಾರಿಯಲ್ಲಿ ಇವಿಎಂ ಯಂತ್ರದ ದೋಷದಿಂದಾಗಿ ಮತದಾನ ತಡವಾಗಿ ಪ್ರಾರಂಭವಾಯಿತು. ಸಲ್ಟ್​ ತಹಸೀಲ್​ನ ಮೂರು ಬೂತ್​ಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಕುಟುಂಬದೊಂದಿಗೆ ಕೋಟ್‌ದ್ವಾರದ ಸಿತಾಬ್‌ಪುರ ಶಾಲೆಯ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು. ಇದೇ ವೇಳೆ ಅಭಿವೃದ್ಧಿ ಹೆಸರಲ್ಲಿ ಮತ ನೀಡಿ ಎಂದು ಮನವಿ ಮಾಡಿದರು. ಲೋಕಸಭೆಯ ಗರ್ವಾಲ್ ಸಂಸದೀಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಗೋಡಿಯಾಲ್ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಭಟ್ಕೋಟ್‌ನಲ್ಲಿರುವ ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಮತ್ತಷ್ಟು ಓದಿ: Lok Sabha Elections 2024: ಪ್ರಜಾಪ್ರಭುತ್ವದಲ್ಲಿ ಪ್ರತಿ ಮತವೂ ಅಮೂಲ್ಯ, ಪ್ರತಿ ಧ್ವನಿಯೂ ಮುಖ್ಯ: ನರೇಂದ್ರ ಮೋದಿ

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಎಂಟು, ಪಶ್ಚಿಮ ಬಂಗಾಳದಲ್ಲಿ ಮೂರು, ಮಹಾರಾಷ್ಟ್ರದಲ್ಲಿ ಐದು, ಛತ್ತೀಸ್‌ಗಢದಲ್ಲಿ ಒಂದು ಮತ್ತು ಮಣಿಪುರದಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿದ್ದು, ಇಲ್ಲಿನ ಎಲ್ಲ ಸ್ಥಾನಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ. ಇದಲ್ಲದೆ, ಉತ್ತರಾಖಂಡದ ಐದು, ಅರುಣಾಚಲ ಪ್ರದೇಶದ ಎರಡು, ಅಂಡಮಾನ್‌ನ ಒಂದು ಮತ್ತು ಲಕ್ಷದ್ವೀಪದ ಒಂದು ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ