ಲೋಕಸಭಾ ಚುನಾವಣೆ(Lok Sabha Election) ಹೊಸ್ತಿಲಲ್ಲಿ ಕಾಂಗ್ರೆಸ್ಗೆ ಹೊಡೆದ ಬಿದ್ದಿದೆ, ಕಾಂಗ್ರೆಸ್ನ ಹಿರಿಯ ನಾಯಕ, ವಕ್ತಾರ ಗೌರವ್ ವಲ್ಲಭ್(Gourav Vallabh) ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಕ್ಷ ತೊರೆದ ಕಾರಣವನ್ನು ಕೂಡ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಲ್ಲಭ್, ‘‘ ನಾನು ಭಾವುಕನಾಗಿದ್ದೇನೆ, ಮನಸ್ಸು ಸಂಕಟಪಡುತ್ತಿದೆ, ನಾನು ಬಹಳಷ್ಟು ಹೇಳಲು, ಬರೆಯಲು ಬಯಸುತ್ತೇನೆ, ಆದರೆ ನನ್ನ ಮಾತುಗಳು ಬೇರೆಯವರಿಗೆ ನೋವುಂಟು ಮಾಡಬಹುದು ಹೀಗಾಗಿ ನನ್ನ ಮಾತುಗಳು ನನ್ನಲ್ಲೇ ಉಳಿಯುತ್ತಿದೆ’’ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದ ಬಳಿಕ ಪಕ್ಷವು ಅವರನ್ನು ರಾಷ್ಟ್ರೀಯ ವಕ್ತಾರನನ್ನಾಗಿ ಮಾಡಿತು. ಹಲವು ವಿಷಯಗಳಲ್ಲಿ ಪಕ್ಷದ ನಿಲುವನ್ನು ಜನರ ಮುಂದೆ ಇಡಲಾಯಿತು, ಆದರೆ ಕೆಲವು ದಿನಗಳಿಂದ ಪಕ್ಷದ ನಿಲುವಿನಿಂದ ನನಗೆ ಬೇಸರವಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನಿಂದ ನಾನು ಅಸಮಾಧಾನಗೊಂಡಿದ್ದೇನೆ. ನಾನು ಹುಟ್ಟಿನಿಂದ ಹಿಂದೂ ಮತ್ತು ವೃತ್ತಿಯಲ್ಲಿ ಶಿಕ್ಷಕ. ಪಕ್ಷದ ನಿಲುವು ನನ್ನ ಭಾವನೆಗಳಿಗೆ ಸದಾ ಪೆಟ್ಟು ಕೊಡುತ್ತಿತ್ತು ಎಂದಿದ್ದಾರೆ.
ಮತ್ತಷ್ಟು ಓದಿ:ಚಿರಾಗ್ ಪಾಸ್ವಾನ್ ಪಕ್ಷದ 22 ನಾಯಕರು ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧ
ಕಾಂಗ್ರೆಸ್ ಪಕ್ಷ ದಾರಿ ತಪ್ಪಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪಕ್ಷದಲ್ಲಿ ಸರಿಯಾದ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ ಎಂದರು. ಬುದ್ಧಿಜೀವಿಗಳು, ಹೊಸ ವಿಚಾರಗಳನ್ನು ಹೊಂದಿರುವ ಯುವಕರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಪಕ್ಷ ತಳಮಟ್ಟದಲ್ಲಿ ಯಾರೊಂದಿಗೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಪ್ರಬಲ ಪ್ರತಿಪಕ್ಷದ ಪಾತ್ರವನ್ನೂ ಸರಿಯಾಗಿ ನಿರ್ವಹಿಸಲು ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ, ಇದರಿಂದ ಸಾಮಾನ್ಯ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ದೊಡ್ಡ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರ ನಡುವೆ ಅಂತರ ಹೆಚ್ಚಾಗಿದ್ದು, ಇದರಿಂದ ಪಕ್ಷ ನಷ್ಟ ಅನುಭವಿಸುತ್ತಿದ್ದು, ಅಧಿಕಾರದಿಂದ ದೂರ ಉಳಿಯುತ್ತಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Thu, 4 April 24