AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಾಗ್​ ಪಾಸ್ವಾನ್ ಪಕ್ಷದ 22 ನಾಯಕರು ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧ

ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಎನ್​ಡಿಎ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್(Chirag Paswan) ಅವರ ಲೋಕ ಜನಶಕ್ತಿ ಪಕ್ಷ(ರಾಮ್​ವಿಲಾಸ್)ದ 22 ನಾಯಕರು ಇದೀಗ ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧರಾಗಿದ್ದಾರೆ. ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಕುಮಾರ್, ರಾಜ್ಯ ಸಂಘಟನಾ ಸಚಿವ ರವೀಂದ್ರ ಸಿಂಗ್ , ಅಜಯ್ ಕುಶ್ವಾಹ, ಸಂಜಯ್​ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್​ ಡಾಂಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.

ಚಿರಾಗ್​ ಪಾಸ್ವಾನ್ ಪಕ್ಷದ 22 ನಾಯಕರು ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧ
ಚಿರಾಗ್ ಪಾಸ್ವಾನ್
ನಯನಾ ರಾಜೀವ್
|

Updated on:Apr 04, 2024 | 8:32 AM

Share

ಎನ್​ಡಿಎ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್(Chirag Paswan) ಅವರ ಲೋಕ ಜನಶಕ್ತಿ ಪಕ್ಷ(ರಾಮ್​ವಿಲಾಸ್)ದ 22 ನಾಯಕರು ಇದೀಗ ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧರಾಗಿದ್ದಾರೆ. ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಕುಮಾರ್, ರಾಜ್ಯ ಸಂಘಟನಾ ಸಚಿವ ರವೀಂದ್ರ ಸಿಂಗ್ , ಅಜಯ್ ಕುಶ್ವಾಹ, ಸಂಜಯ್​ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್​ ಡಾಂಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.

ಈಗ ಮೊದಲ ಹಂತದ ಚುನಾವಣೆಗೆ ಕೇವಲ 15 ದಿನಗಳು ಬಾಕಿ ಉಳಿದಿವೆ, ಚಿರಾಗ್ ಪಾಸ್ವಾನ್ ಅಭ್ಯರ್ಥಿಗಳ ಪರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಬಿಹಾರ ಫಸ್ಟ್​-ಬಿಹಾರಿ ಫಸ್ಟ್​ ಎಂಬ ಘೋಷವಾಕ್ಯ ನೀಡಿದ್ದ ಚಿರಾಗ್ ಪಾಸ್ವಾನ್ ಮನಿ ಫಸ್ಟ್​-ಫ್ಯಾಮಿಲಿ ಫಸ್ಟ್​ ಅಡಿಯಲ್ಲಿ ಟಿಕೆಟ್ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಸೀಟು ಹಂಚಿಕೆಯಲ್ಲಿ ಪಕ್ಷಕ್ಕೆ ಐದು ಸ್ಥಾನಗಳನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ ರೀತಿ ಅಚ್ಚರಿ ಮೂಡಿಸಿದೆ. ಚಿರಾಗ್ ಪಕ್ಷದ ನಿಜವಾದ ಕಾರ್ಯಕರ್ತರಿಗೆ ಟಿಕೆಟ್ ನೀಡಿಲ್ಲ. ಎಲ್​ಜೆಪಿಯನ್ನು ಒಡೆಯುವಲ್ಲ ಪ್ರಮುಖ ಪಾತ್ರವಹಿಸಿದ್ದ ವೀಣಾದೇವಿ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ರವೀಂದ್ರ ಸಿಂಗ್ ಆರೋಪಿಸಿದ್ದಾರೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಪಶುಪತಿ ಪರಾಸ್ ಬಿಟ್ಟು, ಚಿರಾಗ್​ ಪಾಸ್ವಾನ್​ ಆಯ್ಕೆ ಮಾಡಿದ ಬಿಜೆಪಿ

ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಗೆ ಎರಡು ದಿನಗಳ ಮೊದಲು ಚಿರಾಗ್ ಅವರೇ ದೇಶದ್ರೋಹಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ವೀಣಾದೇವಿಗೆ ಪಕ್ಷದ ಟಿಕೆಟ್ ನೀಡಿದ್ದು ಮಾತ್ರವಲ್ಲದೆ ಮಾಧ್ಯಮಗಳ ಮುಂದೆ ಬಂದು ಟಿಕೆಟ್ ನೀಡಿರುವುದು ಸರಿಯಾದ ನಿರ್ಧಾರ ಎಂದು ಹೇಳಿರುವುದಕ್ಕೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ಜತೆ ಮುನಿಸಿಕೊಂಡಿರುವ ಮುಖಂಡರು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಶಾಸಕ ಸತೀಶ್​ ಕುಮಾರ್ ಹೇಳಿದ್ದಾರೆ.

ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಾಜಿಪುರದಿಂದ ಚಿರಾಗ್ ಪಾಸ್ವಾನ್, ವೈಶಾಲಿಯಿಂದ ಸಂಸದೆ ವೀಣಾ ಸಿಂಗ್, ಜಮುಯಿಯಿಂದ ಅರುಣ್ ಭಾರತಿ, ಸಮಷ್ಟಿಪುರದಿಂದ ಶಾಂಭವಿ ಚೌಧರಿ,ಖಡ್ಗಿಯಾದಿಂದ ರಾಜೇಶ್​ ವರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಬಿಹಾರದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜಮುಯಿ ಒಂದಾಗಿದೆ. ಇದಲ್ಲದೇ ಉಳಿದ ಔರಂಗಾಬಾದ್​, ಗಯಾ ಹಾಗೂ ನಾವಡಾದಲ್ಲಿ ಅದೇ ದಿನ ಮತದಾನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:31 am, Thu, 4 April 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!