ಲೋಕಸಭಾ ಚುನಾವಣೆ: ಪಶುಪತಿ ಪರಾಸ್ ಬಿಟ್ಟು, ಚಿರಾಗ್ ಪಾಸ್ವಾನ್ ಆಯ್ಕೆ ಮಾಡಿದ ಬಿಜೆಪಿ
ಲೋಕಸಭಾ ಚುನಾವಣೆ ದಿನಾಂಕಗಳು ಘೋಷಣೆಯಾಗಿದೆ, ಇದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಹಾರದಲ್ಲಿ ಸೀಟು ಹಂಚಿಕೆ ಅಂತಿಮವಾಗಿದೆ. ಬಿಜೆಪಿಯು ಈ ಬಾರಿ ಪಶುಪತಿ ಪರಾಸ್ ಬಿಟ್ಟು ಚಿರಾಗ್ ಪಾಸ್ವಾನ್‌ಗೆ ಅವಕಾಶ ಕೊಟ್ಟಿದೆ.
ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ) ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಬಿಜೆಪಿ 17 ಸ್ಥಾನಗಳಲ್ಲಿ, ಜೆಡಿಯು 16 ಸ್ಥಾನಗಳಲ್ಲಿ ಹಾಗೂ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು 5 ಕ್ಷೇತ್ರಗಳಲ್ಲಿ, ಜಿತನ್ ಮಾಂಝಿ ಅವರ ಎಚ್ಎಎಂ 1 ಸ್ಥಾನ ಹಾಗೂ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಜನತಾ ದಳ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎನ್ನುವ ವಿಚಾರ ತಿಳಿದುಬಂದಿದೆ.
ಆದರೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಮೋದಿ ಸರ್ಕಾರದಲ್ಲಿ ಆಹಾರ ಮತ್ತು ಸಂಸ್ಕರಣಾ ಸಚಿವರಾಗಿರುವ ಎನ್‌ಡಿಎ ಮಿತ್ರಪಕ್ಷ ಎಲ್ಜೆಪಿ ಮುಖ್ಯಸ್ಥ ಪಶುಪತಿ ಪರಾಸ್ಗೆ ಒಂದು ಒಂದು ಕ್ಷೇತ್ರವೂ ಸಿಕ್ಕಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಸ್ಥಾನ ಸಿಗದ ಕಾರಣ ಪಶುಪತಿ ಪರಾಸ್ ಶೀಘ್ರದಲ್ಲೇ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಸೀಟು ಹಂಚಿಕೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ(ರಾಮ್ ವಿಲಾಸ್) 5 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಅವಕಾಶ ಪಡೆದಿದ್ದಕ್ಕಾಗಿ ಪಶುಪತಿ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಸೀಟು ಹಂಚಿಕೆ ಘೋಷಣೆಗೂ ಮುನ್ನ ನಮ್ಮ ಜತೆ ಮಾತನಾಡಿಲ್ಲ ಎಂದು ಪಶುಪತಿ ಪರಾಸ್ ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರ ಪಶುಪತಿ ಪಾರಸ್ ಅವರು ಹಾಜಿಪುರದ ಹಾಲಿ ಸಂಸದರಾಗಿದ್ದಾರೆ. ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 6 ಪರ್ಸೆಂಟ್ ಪಾಸ್ವಾನ್ ಮತಗಳು ಚಿರಾಗ್ ಪಾಸ್ವಾನ್‌ಗೆ ಒಲಿದಿದೆ ಎಂದು ಸ್ಪಷ್ಟಪಡಿಸಿದೆ.
ಮತ್ತಷ್ಟು ಓದಿ: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ: ಬಿಜೆಪಿ 17, ಜೆಡಿಯು16, ಚಿರಾಗ್ ಪಾಸ್ವಾನ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧೆ
ರಾಮ್ ವಿಲಾಸ್ ಪಾಸ್ವಾನ್ ಹಾಜಿಪುರದಿಂದ ಎಂಟು ಬಾರಿ ಗೆದ್ದಿದ್ದರು. ಪಶುಪತಿ ಪರಾಸ್ ಎಲ್‌ಜೆಪಿಯನ್ನು ವಿಭಜಿಸಿದ ನಂತರ — ಬಿಜೆಪಿಯ ಒಪ್ಪಿಗೆಯೊಂದಿಗೆ — ಚಿರಾಗ್ ಪಾಸ್ವಾನ್ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರು ಮತ್ತು ಎನ್‌ಡಿಎ ಪರ ಮತಗಳನ್ನು ವಿಭಜಿಸಿದ್ದರು.
ವೈಶಾಲಿ, ಹಾಜಿಪುರ್, ಸಮಷ್ಟಿಪುರ್, ಖಗಾರಿಯಾ ಮತ್ತು ಜಮುಯಿ ಕ್ಷೇತ್ರದಲ್ಲಿ ಈ ಬಾರಿ ಚಿರಾಗ್ ಪಾಸ್ವಾನ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಎಲ್ಜೆಪಿಯಲ್ಲಿ ಒಡಕು ಮೂಡಿತ್ತು.
ಬಿಹಾರ ಚುನಾವಣೆ ಬಿಹಾರದಲ್ಲಿ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 20, ಮೇ 25 ಹಾಗೂ ಜೂನ್ 1 ರಂದು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ