ಕಾಂಗ್ರೆಸ್​ಗೆ ಮತ್ತೆ ತಲೆನೋವಾದ ನವಜೋತ್​ ಸಿಂಗ್ ಸಿಧು, ಪಕ್ಷದ ಪರ ಪ್ರಚಾರ ಮಾಡದಿರಲು ನಿರ್ಧಾರ

|

Updated on: Apr 19, 2024 | 9:42 AM

ಪತ್ನಿಯ ಅನಾರೋಗ್ಯದ ಕಾರಣದಿಂದ ರಾಜಕಾರಣದಿಂದ ಹಿಂದೆ ಸರಿದಿರುವ ನವಜೋತ್​ ಸಿಂಗ್ ಸಿಧು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಪ್ರಚಾರ ನಡೆಸದೇ ಇರಲು ನಿರ್ಧರಿಸಿದ್ದಾರೆ. ನವಜೋತ್ ಸಿಂಗ್ ಸಿಧು ಅವರಲ್ಲದೆ, ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶಂಶೇರ್ ಸಿಂಗ್ ಡುಲ್ಲೋ, ಮಾಜಿ ಶಾಸಕ ನಾಜರ್ ಸಿಂಗ್ ಮನ್ಶಾಹಿಯಾ, ಜಗದೇವ್ ಸಿಂಗ್ ಕಮಲು, ಮಹೇಶ್ ಇಂದರ್ ಸಿಂಗ್ ಮತ್ತು ಬಟಿಂಡಾ ಗ್ರಾಮಾಂತರ ಕಾಂಗ್ರೆಸ್ ಉಸ್ತುವಾರಿ ಹರ್ಬಿಂದರ್ ಲಾಡಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್​ಗೆ ಮತ್ತೆ ತಲೆನೋವಾದ ನವಜೋತ್​ ಸಿಂಗ್ ಸಿಧು, ಪಕ್ಷದ ಪರ ಪ್ರಚಾರ ಮಾಡದಿರಲು ನಿರ್ಧಾರ
ನವಜೋತ್​ ಸಿಂಗ್ ಸಿಧು
Follow us on

ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ನವಜೋತ್​ ಸಿಂಗ್ ಸಿಧು(Navjot Singh Sidhu) ಹಾಗೂ ಅವರ ಗುಂಪಿನ ಯಾವುದೇ ಕಾರ್ಯಕರ್ತರು ಕಾಂಗ್ರೆಸ್​ ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನವಜೋತ್ ಸಿಂಗ್ ಸಿಧು ಅವರಲ್ಲದೆ, ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶಂಶೇರ್ ಸಿಂಗ್ ಡುಲ್ಲೋ, ಮಾಜಿ ಶಾಸಕ ನಾಜರ್ ಸಿಂಗ್ ಮನ್ಶಾಹಿಯಾ, ಜಗದೇವ್ ಸಿಂಗ್ ಕಮಲು, ಮಹೇಶ್ ಇಂದರ್ ಸಿಂಗ್ ಮತ್ತು ಬಟಿಂಡಾ ಗ್ರಾಮಾಂತರ ಕಾಂಗ್ರೆಸ್ ಉಸ್ತುವಾರಿ ಹರ್ಬಿಂದರ್ ಲಾಡಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಪಕ್ಷಕ್ಕೆ ಅಗತ್ಯವಿರುವಾಗ ನವಜೋತ್ ಸಿಂಗ್ ಸಿಧು ಅವರನ್ನು ನೆನಪಿಸಿಕೊಳ್ಳುತ್ತಾರೆ ಆದರೆ ಚುನಾವಣೆಯ ನಂತರ ಅವರನ್ನು ಕಡೆಗಣಿಸಲಾಗುತ್ತದೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಲೋಕಸಭೆ ಚುನಾವಣೆಗೆ ಪಕ್ಷವು ತನ್ನ ಅಭ್ಯರ್ಥಿಗಳನ್ನು ನಿರ್ಧರಿಸುವಾಗ ನವಜೋತ್ ಸಿಂಗ್ ಸಿಧು ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ.

ಆದರೆ ಈಗ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಸಿಧು ಅವರನ್ನು ಸಂಪರ್ಕಿಸಿ ಪ್ರಚಾರಕ್ಕಾಗಿ ರ್ಯಾಲಿಗಳನ್ನು ನಡೆಸುವಂತೆ ಮನವಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಮತ್ತಷ್ಟು ಓದಿ: ನವಜೋತ್​ ಸಿಂಗ್​ ಸಿಧು ಪತ್ನಿಗೆ ಸ್ತನ ಕ್ಯಾನ್ಸರ್, ಶಸ್ತ್ರಚಿಕಿತ್ಸೆ ಬಳಿಕ ಚಿತ್ರದೊಂದಿಗೆ ಭಾವನಾತ್ಮಕ ಪೋಸ್ಟ್​

ಪಕ್ಷದ ಮೇಲೆ ಸಿಧುಗೆ ಸಿಟ್ಟು
ನವಜೋತ್ ಸಿಂಗ್ ಸಿಧು ಅವರು ಪಕ್ಷವನ್ನು ಬಲಪಡಿಸಲು ಪಂಜಾಬ್‌ನಾದ್ಯಂತ ರ್ಯಾಲಿಗಳನ್ನು ನಡೆಸುತ್ತಿದ್ದಾಗ, ಸಿಧು ಅವರ ರ್ಯಾಲಿಗಳನ್ನು ಆಯೋಜಿಸಿದ ಅನೇಕ ನಾಯಕರನ್ನು ಅನಗತ್ಯವಾಗಿ ಪಕ್ಷದಿಂದ ಹೊರಹಾಕಲಾಯಿತು ಎಂದು ಕೆಲ ಕಾರ್ಯಕರ್ತರು ಹೇಳುತ್ತಿದ್ದಾರೆ.

ಟಿಕೆಟ್ ನಿರಾಕರಣೆ
ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿಯ ಅನಾರೋಗ್ಯದ ಕಾರಣಕ್ಕಾಗಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು ಮತ್ತು ನಂತರ ಅವರು ತಮ್ಮ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಐಪಿಎಲ್‌ಗೆ ಸೇರಿದ್ದರು.

ಸದ್ಯ ಸಿಧು ಐಪಿಎಲ್‌ನಲ್ಲಿ ಕಾಮೆಂಟೇಟರ್ ಆಗಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ತೊಡಗಿಸಿಕೊಂಡಿರುವ ಕಾರಣ ಸಿಧು ರಾಜಕೀಯ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ನವಜೋತ್ ಸಿಂಗ್ ಸಿಧು ಅವರ ಗುಂಪಿನ ನಾಯಕರ ಜೊತೆಗಿನ ಈ ಸಭೆಯು ಮತ್ತೊಮ್ಮೆ ಪಂಜಾಬ್ ಕಾಂಗ್ರೆಸ್‌ನಲ್ಲಿ ನವಜೋತ್ ಸಿಂಗ್ ಸಿಧು ವರ್ಸಸ್ ಆಲ್ ಎಂಬ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎನ್ನುವ ನಿರೀಕ್ಷೆ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ