ಕಾಂಗ್ರೆಸ್ ಜತೆ ಎನ್ಸಿಪಿಯ ಶರದ್ ಪವಾರ್ ಬಣ ವಿಲೀನ ಸಾಧ್ಯತೆ
ಎನ್ಸಿಪಿಯ ಶರದ್ ಪವಾರ್ ಬಣ ಕಾಂಗ್ರೆಸ್ ಜತೆಗೆ ವಿಲೀನವಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಅಶೋಕ್ ಚವಾಣ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಚೆನ್ನಿತ್ತಲ, ವರ್ಷಾ ಗಾಯಕವಾಡ, ವಿಶ್ವಜಿತ್ ಕದಂ ಮುಂತಾದ ಪ್ರಮುಖ ನಾಯಕರು ಯಶವಂತರಾವ್ ಚವ್ಹಾಣ ಅವರನ್ನು ಭೇಟಿ ಮಾಡಿದರು. ಕೆಲವು ದಿನಗಳ ಹಿಂದೆ ಕೇಂದ್ರ ಚುನಾವಣಾ ಆಯೋಗವು ಅಜಿತ್ ಪವಾರ್ ಅವರದ್ದು ನಿಜವಾದ ಎನ್‌ಸಿಪಿ ಹೇಳಿತ್ತು.
ಲೋಕಸಭಾ ಚುನಾವಣೆ(Lok Sabha Election) ಸನ್ನಿಹಿತವಾಗುತ್ತಿದೆ, ಎಲ್ಲಾ ಪಕ್ಷಗಳಲ್ಲೂ ಹಲವು ಬದಲಾವಣೆಗಳು ಗೋಚರಿಸುತ್ತಿವೆ. ಹಾಗೆಯೇ ಎನ್ಸಿಪಿಯ ಶರದ್ ಪವಾರ್(Sharad Pawar) ಬಣ ಕಾಂಗ್ರೆಸ್ ಜತೆಗೆ ವಿಲೀನವಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಚುನಾವಣೆ ಹಿನ್ನಲೆಯಲ್ಲಿ ಶರದ್ ಪವಾರ್ ಅವರು ಎಲ್ಲಾ ಶಾಸಕರು ಮತ್ತು ಸಂಸದರ ಸಭೆ ಕರೆದಿದ್ದಾರೆ. ಸಭೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಇದಲ್ಲದೇ ಶರದ್ ಪವಾರ್ ಬಣವನ್ನು ಕಾಂಗ್ರೆಸ್ ಪಕ್ಷಕ್ಕೆ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ .
ಶರದ್ ಪವಾರ್ ಬಣ ಕಾಂಗ್ರೆಸ್ ಜೊತೆ ವಿಲೀನವಾಗಲಿದೆ ಶರದ್ ಪವಾರ್ ಗುಂಪು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಲಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಆ ನಂತರ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಆದರೆ, ಈ ಸುದ್ದಿಯನ್ನು ಶರದ್ ಪವಾರ್ ಬಣ ಖಚಿತಪಡಿಸಿದೆ. ಬಗ್ಗೆ ಶರದ್ ಪವಾರ್ ಗುಂಪಿನ ನಾಯಕ ಮಂಗಲದಾಸ್ ಬಂದಲ್ ಪ್ರತಿಕ್ರಿಯಿಸಿದ್ದಾರೆ.ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಶರದ್ ಪವಾರ್ ಸಿದ್ಧತೆ ನಡೆಸಿದ್ದಾರೆ. ಪಕ್ಷವನ್ನು ವಿಲೀನಗೊಳಿಸುವ ನಿರ್ಧಾರ ರಾಷ್ಟ್ರ ಮಟ್ಟದಲ್ಲಿದೆ. ಈ ಬಗ್ಗೆ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಪವಾರ್ ಕರೆದಿರುವ ಸಭೆಯಲ್ಲಿ ಇಂತಹ ಚರ್ಚೆ ನಡೆಯುತ್ತಿದೆ ಎಂದು ಮಂಗಲದಾಸ್ ಬಂದಲ್ ಹೇಳಿದರು.
ಮತ್ತಷ್ಟು ಓದಿ: ಶರದ್ ಪವಾರ್ ಪಕ್ಷಕ್ಕೆ ಹೊಸ ಚಿಹ್ನೆ, ಹೆಸರು ಘೋಷಣೆ ಮಾಡಲು ಚುನಾವಣಾ ಆಯೋಗ ಆದೇಶ
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಶರದ್ ಪವಾರ್ ಪುಣೆಯಲ್ಲಿ ಪಕ್ಷದ ಮಹತ್ವದ ಸಭೆಯನ್ನು ಕರೆದಿದ್ದಾರೆ. ಶರದ್ ಪವಾರ್ ಕ್ಷೇತ್ರವಾರು ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸಂಸದರಾದ ಸುಪ್ರಿಯಾ ಸುಳೆ, ರೋಹಿತ್ ಪವಾರ್, ಅಮೋಲ್ ಕೋಲ್ಹೆ, ಅನಿಲ್ ದೇಶಮುಖ, ಶ್ರೀನಿವಾಸ ಪಾಟೀಲ್, ಬಾಳಾಸಾಹೇಬ್ ಪಾಟೀಲ್ ಉಪಸ್ಥಿತರಿದ್ದರು. ಪುಣೆಯ ಮೋದಿ ಬಾಗ್‌ನಲ್ಲಿರುವ ಶರದ್ ಪವಾರ್ ಅವರ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.
ಲೋಕಸಭೆ ಮತ್ತು ನಂತರ ವಿಧಾನಸಭಾ ಚುನಾವಣೆ ನಡೆಯಲಿದೆ. ಅಶೋಕ್ ಚವಾಣ್ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ನಾಯಕತ್ವವಹಿಸಿಕೊಂಡಿದ್ದಾರೆ. ಶರದ್ ಪವಾರ್ ತಮ್ಮ ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್ ಪಕ್ಷದಿಂದ. 1967 ರಲ್ಲಿ ಅವರು ಮೊದಲು ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಇದಾದ ಬಳಿಕ 1999ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಇದಾದ ನಂತರ ಕಾಂಗ್ರೆಸ್ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ತೊರೆದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ