Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಒಡಿಶಾದಿಂದ ಅಶ್ವಿನಿ ವೈಷ್ಣವ್
ರಾಜ್ಯಸಭಾ ಚುನಾವಣಾ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯಲ್ಲಿ ಬಿಜೆಪಿ ಬಿಡುಗಡೆ ಮಾಡಿದೆ. ಅದರಲ್ಲಿ ಒಡಿಶಾದಿಂದ ಅಶ್ವಿನಿ ವೈಷ್ಣವ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. 2019 ರಲ್ಲಿ ಬಿಜೆಡಿ ಸಹಾಯದಿಂದ ವೈಷ್ಣವ್ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಬಾರಿಯೂ ಸಹ, ಬಿಜೆಡಿ ಮೂರನೇ ಅಭ್ಯರ್ಥಿಯ ಹೆಸರನ್ನು ಘೋಷಿಸಲಿಲ್ಲ.
ಮುಂಬರಲಿರುವ ರಾಜ್ಯಸಭಾ ಚುನಾವಣೆ(Rajya Sabha Election)ಗೆ ಬಿಜೆಪಿ(BJP)ಯು ಮಧ್ಯಪ್ರದೇಶ(Madhya Pradesh) ಹಾಗೂ ಒಡಿಶಾ(Odisha)ದಿಂದ ಅಭ್ಯರ್ಥಿಗಳನ್ನು ಘೋಷಿಸಿದೆ. ಒಡಿಶಾದಿಂದ ಅಶ್ವಿನಿ ವೈಷ್ಣವ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಮಧ್ಯಪ್ರದೇಶದಿಂದ ಬನ್ಸಿಲಾಲ್ ಗುರ್ಜರ್, ಮಾಯಾ ನರೋಲಿಯಾ, ಉಮೇಶ್ ನಾಥ್ ಮಹಾರಾಜ್ ಮತ್ತು ಎಲ್ ಮುರುಗನ್ ಅವರ ಹೆಸರುಗಳಿವೆ. ಮಧ್ಯಪ್ರದೇಶದಲ್ಲಿ ಶಾಸಕರ ಬಲದ ಆಧಾರದ ಮೇಲೆ, ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ಹೊಂದಿದ್ದರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲ್ಲಬಹುದು. ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಫೆಬ್ರವರಿ 15 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಫೆ.27ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಮಾನದ ಪ್ರಕಾರ ಕಾಂಗ್ರೆಸ್ ಒಬ್ಬ ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುವ ಸ್ಥಿತಿಯಲ್ಲಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 66 ಆಗಿದೆ. 2019 ರಲ್ಲಿ ಬಿಜೆಡಿ ಸಹಾಯದಿಂದ ವೈಷ್ಣವ್ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ವೈಷ್ಣವ್ ರಾಜ್ಯಸಭೆಗೆ ಮರು ಆಯ್ಕೆಯಾಗುತ್ತಾರೆ ಮತ್ತು ಬಿಜೆಡಿ ಬೆಂಬಲಿಸಬಹುದು ಎಂದು ಅಂದಾಜಿಸಲಾಗಿದೆ.
ಖಾಲಿ ಇರುವ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಅಗತ್ಯವಿರುವ ಬಲವಿದೆ ಆದರೆ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 22 ಶಾಸಕರನ್ನು ಹೊಂದಿರುವುದರಿಂದ ಬಿಜೆಪಿಗೆ ಬಿಜೆಡಿಯ ಬೆಂಬಲದ ಅಗತ್ಯವಿದೆ. ಒಡಿಶಾದಲ್ಲಿ ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಅಭ್ಯರ್ಥಿಗೆ ಕನಿಷ್ಠ 37 ಮತಗಳು ಬೇಕಾಗುತ್ತವೆ. ಅಶ್ವಿನಿ ವೈಷ್ಣವ್ ರಾಜಸ್ಥಾನದವರಾಗಿದ್ದಾರೆ ಆದರೆ 2010 ರಲ್ಲಿ ತಮ್ಮ IAS ಹುದ್ದೆಯನ್ನು ತ್ಯಜಿಸುವ ಮೊದಲು IAS ಅಧಿಕಾರಿಯಾಗಿ ಒಡಿಶಾದಲ್ಲಿ ಸೇವೆ ಸಲ್ಲಿಸಿದರು.
ಮತ್ತಷ್ಟು ಓದಿ: ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ: ಇಲ್ಲಿದೆ ರಾಜಕೀಯ ಲೆಕ್ಕಾಚಾರ
ಒಡಿಶಾದಿಂದ ರಾಜ್ಯಸಭಾ ಸದಸ್ಯರಾಗಿರುವ ವೈಷ್ಣವ್ ಅವರ ಅಧಿಕಾರಾವಧಿ ಈ ವರ್ಷದ ಏಪ್ರಿಲ್‌ನಲ್ಲಿ ಕೊನೆಗೊಳ್ಳಲಿದೆ. ಅವರು ಬಿಜೆಪಿಗೆ ಸೇರಿದವರಾಗಿದ್ದರೂ, ವೈಷ್ಣವ್ ಅವರು 2019 ರಲ್ಲಿ ಬಿಜೆಡಿ ಬೆಂಬಲದ ಮೇಲೆ ಒಡಿಶಾದಿಂದ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು.
ಬಿಜೆಡಿ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಅವರ ಮನವಿಯ ನಂತರ ವೈಷ್ಣವ್‌ಗೆ ತಮ್ಮ ಪಕ್ಷದ ಬೆಂಬಲವನ್ನು ಘೋಷಿಸಿದರು. ಎರಡನೇ ಪಟ್ಟಿಯಲ್ಲಿ ಬಿಜೆಪಿ ಮಧ್ಯಪ್ರದೇಶ ಮತ್ತು ಒಡಿಶಾ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಹಿಂದೆ ಬಿಜೆಪಿ ರಾಜ್ಯಸಭಾ ಚುನಾವಣೆಗೆ 14 ಹೆಸರುಗಳನ್ನು ಪ್ರಕಟಿಸಿತ್ತು.
ಒಡಿಶಾ: ಅಶ್ವಿನಿ ವೈಷ್ಣವ್ ಬಿಹಾರ: ಡಾ ಧರ್ಮಶೀಲಾ ಗುಪ್ತಾ, ಡಾ ಭೀಮ್ ಸಿಂಗ್ ಛತ್ತೀಸ್‌ಗಢ: ರಾಜಾ ದೇವೇಂದ್ರ ಪ್ರತಾಪ್ ಸಿಂಗ್ ಹರಿಯಾಣ: ಸುಭಾಷ್ ಬರಾಲಾ
ಕರ್ನಾಟಕ: ನಾರಾಯಣ ಕೃಷ್ಣಾಸ ಭಾಂಡಗೆ ಉತ್ತರ ಪ್ರದೇಶ: ಸುಧಾಂಶು ತ್ರಿವೇದಿ, ಆರ್‌ಪಿಎನ್ ಸಿಂಗ್, ಚೌಧರಿ ತೇಜ್‌ವೀರ್ ಸಿಂಗ್, ಸಾಧನಾ ಸಿಂಗ್, ಅಮರ್‌ಪಾಲ್ ಮೌರ್ಯ, ಸಂಗೀತಾ ಬಲ್ವಂತ್, ನವೀನ್ ಜೈನ್ ಉತ್ತರಾಖಂಡ: ಮಹೇಂದ್ರ ಭಟ್ ಪಶ್ಚಿಮ ಬಂಗಾಳ: ಸಾಮಿಕ್ ಭಟ್ಟಾಚಾರ್ಯ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ