ಕಾಂಗ್ರೆಸ್​ನ 99 ಸಂಸದರ ಅನರ್ಹತೆಗೆ ಆಗ್ರಹಿಸಿ ಪಿಐಎಲ್ ದಾಖಲು

|

Updated on: Jun 09, 2024 | 7:57 AM

ಲೋಕಸಭಾ ಚುನಾವಣೆ(Lok Sabha Election) ಸಂದರ್ಭದಲ್ಲಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಕೆಲವು ಉಚಿತ ಯೋಜನೆಗಳನ್ನು ಘೋಷಿಸಿತ್ತು. ಪ್ರಚಾರದ ವೇಳೆಯಲ್ಲಿ ಅದಕ್ಕೆ ಖಟಾಖಟ್ ಖಟಾಖಟ್ ಎಂದು ಉಲ್ಲೇಖಿಸಲಾಗಿತ್ತು. ಮಹಿಳೆಯರಿಗೆ ಮಾಸಿಕ ಸಹಾಯಧನ, ನಿರುದ್ಯೋಗಿಗಳಿಗೆ ಸಹಾಯ ಭತ್ಯೆ ಸೇರಿ ಸಾಕಷ್ಟು ಉಚಿತ ಯೋಜನೆಗಳನ್ನು ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್​ ಘೋಷಿಸಿತ್ತು.

ಕಾಂಗ್ರೆಸ್​ನ 99 ಸಂಸದರ ಅನರ್ಹತೆಗೆ ಆಗ್ರಹಿಸಿ ಪಿಐಎಲ್ ದಾಖಲು
ರಾಹುಲ್ ಗಾಂಧಿ
Follow us on

ಲೋಕಸಭೆಗೆ ಆಯ್ಕೆಯಾಗಿರುವ 99 ಕಾಂಗ್ರೆಸ್​ ಸಂಸದರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ವಕೀಲರೊಬ್ಬರು ದೆಹಲಿಗೆ ಹೈಕೋರ್ಟ್​ಗೆ ಪಿಐಎಲಕ್ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆ(Lok Sabha Election) ಸಂದರ್ಭದಲ್ಲಿ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಕೆಲವು ಉಚಿತ ಯೋಜನೆಗಳನ್ನು ಘೋಷಿಸಿತ್ತು. ಪ್ರಚಾರದ ವೇಳೆಯಲ್ಲಿ ಅದಕ್ಕೆ ಖಟಾಖಟ್ ಖಟಾಖಟ್ ಎಂದು ಉಲ್ಲೇಖಿಸಲಾಗಿತ್ತು. ಮಹಿಳೆಯರಿಗೆ ಮಾಸಿಕ ಸಹಾಯಧನ, ನಿರುದ್ಯೋಗಿಗಳಿಗೆ ಸಹಾಯ ಭತ್ಯೆ ಸೇರಿ ಸಾಕಷ್ಟು ಉಚಿತ ಯೋಜನೆಗಳನ್ನು ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್​ ಘೋಷಿಸಿತ್ತು.

ಈ ರೀತಿಯಲ್ಲಿ ಮತದಾರರಿಗೆ ಆಮಿಷವೊಡ್ಡಿ ಚುನಾವಣೆಯಲ್ಲಿ 99 ಸಂಸದರು ಆಯ್ಕೆಯಾಗಿದ್ದಾರೆ. ಇವರನ್ನು ಅನರ್ಹಗೊಳಿಸಬೇಕು ಎಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದಾರೆ. ವಕೀಲ ವಿಭೋರ್ ಆನಂದ್, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್’ ಮೂಲಕ ಮತದಾರರಿಗೆ ಲಂಚ ನೀಡುವಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಸದಸ್ಯರ ವಿರುದ್ಧ ಸೆಕ್ಷನ್ 146, RPA ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ರಾಷ್ಟ್ರಪತಿಯನ್ನು ಕೂಡ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷವು 99 ಸ್ಥಾನಗಳನ್ನು ಗೆದ್ದಿದೆ ಮತ್ತು 2019 ರಲ್ಲಿ ಗೆದ್ದಿದ್ದ 52 ಸ್ಥಾನಗಳ ಹಿಂದಿನ ಸ್ಥಾನಕ್ಕಿಂತ ಸುಮಾರು ದ್ವಿಗುಣಗೊಂಡಿದೆ. ಕಳೆದ ಕೆಲವು ವಾರಗಳ ಚುನಾವಣಾ ಪ್ರಚಾರದಲ್ಲಿ, ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಇಬ್ಬರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮತದಾರರ ಖಾತೆಗೆ ಪ್ರತಿ ತಿಂಗಳು 8500 ರೂ. ಮತ್ತು ಪ್ರತಿ ವರ್ಷ ರೂ 1 ಲಕ್ಷ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ್ದನ್ನು ಕಾಣಬಹುದು.

ಮತ್ತಷ್ಟು ಓದಿ: ಸಾಮಾನ್ಯ ಸಂಸದನಷ್ಟೇ, ರಾಹುಲ್​ ಗಾಂಧಿಯನ್ನೇಕೆ ಹೈಲೈಟ್​ ಮಾಡ್ತೀರಾ? : ದಿಗ್ವಿಜಯ ಸಿಂಗ್ ಸಹೋದರ

ಈ ಬಾರಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಪರ್ಧಿಸದೆ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್​ಬರೇಲಿ ಹಾಗೂ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದರು ಎರಡರಲ್ಲೂ ಗೆಲುವು ಸಾಧಿಸಿದ್ದಾರೆ. ವಕೀಲ ಆನಂದ್ ಅವರ ಪ್ರಕಾರ, ಚುನಾವಣೆಗೂ ಮುನ್ನ ಖಟಾಖಟ್ ಯೋಜನೆ ಮತ್ತು ಖಾತರಿ ಕಾರ್ಡ್‌ಗಳ ವಿತರಣೆಯುಮತದಾರರಿಗೆ ಲಂಚ ನೀಡಿದಂತೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಡ ಮುಸ್ಲಿಂ ಮತದಾರರನ್ನು ಓಲೈಸಲು ಪ್ರಯತ್ನಿಸಿದೆ ಎಂದು ಆನಂದ್ ಹೇಳಿದ್ದಾರೆ.

ಕಳೆದ 3 ದಿನಗಳಲ್ಲಿ, ಕಾಂಗ್ರೆಸ್ ಕಚೇರಿಗಳ ಮುಂದೆ ಸಾಲುಗಟ್ಟಿ ನಿಂತಿರುವ ಸಾವಿರಾರು ಮಹಿಳೆಯರ ವಿಡಿಯೋಗಳು ಹರಿದಾಡುತ್ತಿವೆ ಎಂದಿದ್ದಾರೆ. ಹೀಗೆ ಜನರ ದಿಕ್ಕು ತಪ್ಪಿಸಲು ಪ್ರಯತ್ನ ನಡೆದಿದೆ ಎಂದರು.

ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ, ಸೋನಿಯಾ ಗಾಂಧಿ ಮತ್ತು ಎಲ್ಲಾ ಸದಸ್ಯರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಕಲಂ 146 ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಲು ಭಾರತ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಆನಂದ್ ಒತ್ತಾಯಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ